spot_img
Monday, April 27, 2026
spot_img

ಅಬ್ಬಿ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ಗುರುವಂದನೆ

ಕುಂದಾಪುರ: ವಂಡ್ಸೆ ಸಮೀಪದ ಅಬ್ಬಿ ಚಿತ್ತೇರಿಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಎ.ಜಿ ಮಂಜುನಾಥ ಗುರುಸ್ವಾಮಿ ಇವರ 18ನೇ ವರ್ಷದ ಹಾಗೂ ಅಯ್ಯಪ್ಪ ಭಕ್ತವೃಂದದವರ ಶಬರಿಮಲೈ ಯಾತ್ರೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ಜರಗಿತು.

ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ, ಸುದೀರ್ಘ ಅವಧಿಯಿಂದ ಶಬರಿಮಲೈ ಯಾತ್ರೆ ಮಾಡುತ್ತಿರುವ ವಂಡಬಳ್ಳಿ ಜಯರಾಮ ಶೆಟ್ಟಿ, ಗುರುಸ್ವಾಮಿಗಳಾದ ಸೂರ್ಯನಾರಾಯಣ ಪೂಜಾರಿ, ಪ್ರಭಾಕರ ಗಾಣಿಗ, ಸದಾನಂದ ನಾಯ್ಕ್ ವಂಡ್ಸೆ ಅವರಿಗೆ ಎ.ಜಿ ಮಂಜುನಾಥ ಅವರು ಗುರುವಂದನೆ ಸಲ್ಲಿಸಿದರು.

ಅಯ್ಯಪ್ಪ ವ್ರತಧಾರಿಗಳು ಉಪಸ್ಥಿತರಿದ್ದರು. ವಾಸು ಜಿ. ನಾಯ್ಕ್ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಬಳಿಕ ಮಹಾಪೂಜೆ, ಅನ್ನಸಂತರ್ಪಣೆ, ಸ್ಥಳೀಯ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ ಇರುಮುಡಿ ಕಾರ್ಯಕ್ರಮ ಜರುಗಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!