spot_img
Monday, April 27, 2026
spot_img

ಟೀಂ ಇಂಡಿಯಾ ನೂತನ ಕೋಚ್‌ ಸ್ಥಾನದ ರೇಸ್‌ನಲ್ಲಿದ್ದಾರಂತೆ ಮಾಜಿ ಬ್ಯಾಟ್ಸ್ಮನ್‌ ವೀರೇಂದ್ರ ಸೆಹ್ವಾಗ್ !? ವೈಟ್ ಬಾಲ್ ಕ್ರಿಕೆಟ್ ಗೆ ಹಾಲಿ ಕ್ಯಾಪ್ಟನ್‌ ವಿದಾಯ ?

ಜನಪ್ರತಿನಿಧಿ ವಾರ್ತೆ : ವಿಶ್ವಕಪ್‌ ಟೂರ್ನಮೆಂಟ್‌ನ ಪೈನಲ್‌ ಪಂದ್ಯದವರೆಗೆ ಸೋಲಿಲ್ಲದೆ ಮೆರೆದ ಟೀಂ ಇಂಡಿಯಾ, ಪೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದರು ಸೋಲನುಭವಿಸಿದ ಬೆನ್ನಿಗೆ ಈಗ ಟೀಂ ಇಂಡಿಯಾದ ಕೋಚ್‌ ಬದಲಾವಣೆಯ ವಿಚಾರ ಮುನ್ನೆಲೆಗೆ ಬಂದಿದೆ. ಕ್ರಿಕೇಟ್‌ ಲೋಕದ ಗ್ರೇಟ್‌ ವಾಲ್‌ ಎಂದೇ ಕರೆಸಿಕೊಳ್ಳುವ ರಾಹುಲ್‌ ದ್ರಾವಿಡ್‌ ಸದ್ಯದಲ್ಲಿಯೇ ಟೀಂ ಇಂಡಿಯಾದ ಕೋಚ್‌ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

 ವಿಶ್ವಕಪ್‌ ಮುಗಿದ ಒಂದು ದಿನದೊಳಗೆ ಆಸ್ಟ್ರೇಲಿಯಾ ವಿರುದ್ಧ ಟಿ20 ಟೂರ್ನಿಗೆ ಹೊಸ ಟೀಮ್ ಘೋಷಿಸಲಾಗಿದೆ. ಆದರೇ, ಟೀಂ ಇಂಡಿಯಾ ವಿಶ್ವಕಪ್‌ ಸೋಲನ್ನು ಅರಗಿಸಿಕೊಳ್ಳುವುದಕ್ಕೆ ಕ್ರಿಕೆಟ್‌ ಪ್ರಿಯರಿಗೆ ಸಾಧ್ಯವಾಗುತ್ತಿಲ್ಲ. ಈ ನಡುವೆ ಟೀಂ ಇಂಡಿಯಾ ಕೋಚ್‌ ಬದಲಾವಾಣೆಯ ಸಮಯ ಬಂದಿದೆ. ಗ್ರೇಟ್‌ ವಾಲ್‌ ರಾಹುಲ್‌ ದ್ರಾವಿಡ್‌ ಕೋಚ್‌ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ವಾಸ್ತವವಾಗಿ, ರಾಹುಲ್ ದ್ರಾವಿಡ್ ಅವರೊಂದಿಗೆ ಬಿಸಿಸಿಐ ಒಪ್ಪಂದವು ಏಕದಿನ ವಿಶ್ವಕಪ್‌ವರೆಗೆ ಮಾತ್ರ. ಸುಮಾರು 2 ವರ್ಷಗಳ ಕಾಲ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಭಾರತ ತಂಡದ ಮುಂದಿನ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಹೆಸರು ಕೇಳಿಬರುತ್ತಿದೆ. ಅನೇಕ ಮಾಜಿ ಕ್ರಿಕೇಟಿಗರು ಅವರನ್ನು ತರಬೇತುದಾರರಾಗಿ ನೋಡಲು ಬಯಸುತ್ತಾರೆ. ಆದರೆ, ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಮತ್ತೊಂದು ಹೆಸರು ಕೂಡ ಕೇಳಿಬರುತ್ತಿದ್ದು, ವೀರೇಂದ್ರ ಸೆಹ್ವಾಗ್ ಕೂಡ ಟೀಮ್ ಇಂಡಿಯಾ ಕೋಚ್ ಆಗುವ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದೊಂದಿಗೆ ಹೆಡ್ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದವೂ ಕೊನೆಗೊಂಡಿದೆ. ಲೆಜೆಂಡರಿ ಆಟಗಾರ 2021ರಲ್ಲಿ ರವಿ ಶಾಸ್ತ್ರಿ ಬಳಿಕ ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಬಿಸಿಸಿಐ, ಅವರಿಗೆ ಎರಡು ವರ್ಷಗಳ ಗುತ್ತಿಗೆಯನ್ನು ನೀಡಿತ್ತು. ಕೋಚ್ ಆಗಲು ದ್ರಾವಿಡ್ಗೆ ಇಷ್ಟವಿರಲಿಲ್ಲ. ಆದರೆ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಮನವೊಲಿಸಿ ಹೆಡ್ ಕೋಚ್ ಸ್ಥಾನಕ್ಕೆ ನೇಮಿಸಿದ್ದರು.

ಇನ್ನು, ಟೀಂ ಇಂಡಿಯಾದ  ಹಾಲಿ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಇನ್ನು ಮುಂದೆ ದೇಶದ ಜೆರ್ಸಿಯಲ್ಲಿ ವೈಟ್ ಬಾಲ್ ಕ್ರಿಕೆಟ್ ಆಡುವುದಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!