spot_img
Thursday, April 30, 2026
spot_img

ಮಂಗಳೂರಿನಲ್ಲಿ ಆಯ್ದ ಮನೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ

ಕುಂದಾಪುರ: ಕಲೆಯನ್ನೇ ಉಸಿರಾಗಿಸಿಕೊಂಡ ಯಶಸ್ವೀ ಕಲಾವೃಂದ ಯಕ್ಷಗಾನದ ಪ್ರಕಾರವಾದ ಹೂವಿನಕೋಲು ಅಭಿಯಾನವನ್ನು ಮಂಗಳೂರು ಭಾಗದಲ್ಲಿ ಅಲ್ಲಲ್ಲಿ ಮನೆಗಳಲ್ಲಿ ನಡೆಸಿರುವುದು ಸಂತಸದ ಸಂಗತಿ. ಪರವೂರ ಸಂಸ್ಥೆಯೊಂದು ಸದಾ ಸದುದ್ಧೇಶದಿಂದಲೇ ಸಾಂಸ್ಕೃತಿಕ ಚಟುವಟಿಕೆಯನ್ನು ವಿವಿಧ ವಿಭಾಗದಲ್ಲಿ ಪಸರಿಸುವುದನ್ನು ಸಾಂಸ್ಕೃತಿಕ ಚಿಂತಕರು ಸದಾ ಗಮನಿಸಿರುವುದು ಸ್ತುತ್ಯರ್ಹ. ಆ ನಿಟ್ಟಿನಲ್ಲಿ ಕಲೆಯನ್ನು ಕಾಣಿಸುವುದಕ್ಕೆ ಊರು ಬಿಟ್ಟು ಬಂದಾಗ ಪರವೂರಲ್ಲಿರುವ ನಾವು ಜೊತೆಗಿದ್ದು ಪ್ರೋತ್ಸಾಹಿಸುವುದು ಕರ್ತವ್ಯ ಎಂದು ಮಂಗಳೂರು ಯಕ್ಷಧಾಮದ ಜನಾರ್ಧನ ಹಂದೆ ಹೂವಿನಕೋಲು ತಂಡದ ಚುಕ್ಕಾಣಿ ಹಿಡಿದು ಮಂಗಳೂರಿನ ಆಯ್ದ ಮನೆಗಳಲ್ಲಿ ನೆರವೇರಿಸಿ ಕಲೆಯ ಬಗೆಗಿನ ಕಾಳಜಿ ಮೆರೆದು ಮಾತನ್ನಾಡಿದರು.

ಕೊಮೆ, ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ನವರಾತ್ರಿಯ 5ನೇಯ ದಿನವನ್ನು ಮಂಗಳೂರಿನ ಆಯ್ದ ಮನೆಗಳಲ್ಲಿ ದಿನವಿಡೀ ಹೂವಿನಕೋಲು ಕಾರ್ಯಕ್ರಮವನ್ನು ನೆರವೇರಿಸಿ, ಜನಾರ್ದನ ಹಂದೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅರೆಹೊಳೆ ಪ್ರತಿಷ್ಠಾನ-ನಂದಗೋಕುಲ ಸಂಸ್ಥೆಯ ಸದಾಶಿವ ರಾವ್ ತಂಡವನ್ನು ಸ್ವಾಗತಿಸಿ, ಕಾರ್ಯಕ್ರಮ ನಡೆಸಿ ಹಾರೈಸಿದರು. ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ ದ್ವೀಪ ಪ್ರಜ್ವಲಿಸಿ, ಹೂವಿನಕೋಲಿನ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದ ವಿವರವನ್ನು ವಿವರಿಸಿದರು.

ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಭಾಗವತ ಹರೀಶ್ ಕಾವಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಮಾ| ಪವನ್, ಮಾ| ಕಿಶನ್, ಮಾ| ರಚಿತ್, ಕು| ಹರ್ಷಿತ, ಕು| ಪರಿಣಿತ, ಕು| ಆರಬಿ ಕಲಾತಂಡದಲ್ಲಿ ಭಾಗವಹಿಸಿದ ಕಲಾವಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!