spot_img
Thursday, April 30, 2026
spot_img

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ

ಕುಂದಾಪುರ: ಎಜುಕೇಶನ್ ವರ್ಲ್ಡ್ ಇಂಡಿಯಾ ಇವರು ನೀಡುವ ಇಂಡಿಯನ್ ಸ್ಕೂಲ್ ರ್‍ಯಾಂಕಿಂಗ್ಸ್ ಅತ್ಯುತ್ತಮ ಡೇ ಕಮ್ ಬೋರ್ಡಿಂಗ್ ಸ್ಕೂಲ್ ೨೦೨೩-೨೦೨೪ರ ರಾಷ್ಟ್ರಪ್ರಶಸ್ತಿಯು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಗೆ ದೊರೆಕಿದೆ.

ಶೈಕ್ಷಣಿಕ ಖ್ಯಾತಿ, ಕ್ರೀಡಾಶಿಕ್ಷಣ, ವಿದ್ಯಾರ್ಥಿಗಳತ್ತ ವಯಕ್ತಿಕ ಗಮನ, ಸಹಪಠ್ಯಶಿಕ್ಷಣ, ನಾಯಕತ್ವ/ನಿರ್ವಹಣೆಯ ಗುಣಮಟ್ಟ, ವಿಶೇಷ ಅಗತ್ಯಗಳ ಶಿಕ್ಷಣ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಗಳು ಇತ್ಯಾದಿ ಅಂಶಗಳನ್ನು ಆಧರಿಸಿ “ಅತ್ಯುತ್ತಮ ಡೇ ಕಮ್ ಬೋರ್ಡಿಂಗ್ ಸ್ಕೂಲ್” ಎಂಬ ಪ್ರಶಸ್ತಿಯನ್ನು ಎಜುಕೇಶನ್ ವರ್ಲ್ಡ್ ಇಂಡಿಯಾ ರವರು ಜೆ.ಡಬ್ಲ್ಯು.ಮ್ಯಾರಿಯೋಟ್ ಹೋಟೆಲ್ ಎರೋಸಿಟಿ, ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ, ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ಶ್ರೀಮತೀ ವೀಣಾ ರಶ್ಮಿ ಎಮ್.ರವರು ಉಪಸ್ಥಿತರಿದ್ದು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕುಂದಾಪುರ ತಾಲೂಕಿನಲ್ಲಿ “ಅತ್ಯುತ್ತಮ ಡೇ ಕಮ್ ಬೋರ್ಡಿಂಗ್ ಸ್ಕೂಲ್” ಎಂಬ ಪ್ರಶಸ್ತಿ ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿ‌ಅಂಗಡಿ ಭಾಜನವಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!