Sunday, September 8, 2024

ಪರಶುರಾಮ ಥೀಂ ಪಾರ್ಕ್‌ ವಿವಾದ : ಸರ್ಕಾರ ಸಿಬಿಐ ತನಿಖೆ ಮಾಡಿಸಲಿ : ಶಾಸಕ ಸುನೀಲ್‌ ಕುಮಾರ್‌

ಜನಪ್ರತಿನಿಧಿ ವಾರ್ತೆ : ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಪರಶುರಾಮ ಮೂರ್ತಿಯ ಬದಲಾವಣೆ ಮತ್ತು ನಕಲಿ ವಿಚಾರದ ಚರ್ಚೆಗೆ ಸಂಬಂಧಿಸಿ ಜನಪ್ರತಿನಿಧಿ ಪತ್ರಿಕೆಗೆ ಪ್ರಕ್ರಿಯಿಸಿದ ಶಾಸಕ ಸುನೀಲ್‌ ಕುಮಾರ್‌, ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ  ಸ್ಥಾಪಿಸಲಾಗಿರುವ ಮೂರ್ತಿ ಕಂಚಿನಿಂದ ಮಾಡಲ್ಪಟ್ಟಿದೆ. ಸ್ವತಃ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಗಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್‌ನವರು ಈಗ ಪ್ರವಾಸೋದ್ಯಮಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ನಿರ್ಮಿತಿ ಕೇಂದ್ರ ಈ ಥೀಮ್‌ ಪಾರ್ಕ್‌ ನಿರ್ಮಿಸಿದೆ. ತಾಂತ್ರಿಕ ಅಂಶಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ತಾಂತ್ರಿಕ ಅಂಶ ಎಲ್ಲವನ್ನು ನೋಡಿಕೊಂಡಿದ್ದು ನಿರ್ಮಿತಿ ಕೇಂದ್ರ ಎಂದು ಅವರು ಹೇಳಿದ್ದಾರೆ.

ಪರಶುರಾಮ ಮೂರ್ತಿಯ ʼನಕಲಿʼ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಸಿದ ಅವರು, ಪ್ರತಿಮೆಯನ್ನು ಕಂಚಿನಿಂದಲೇ ನಿರ್ಮಾಣ ಮಾಡಿದ್ದು, ಕಾಂಗ್ರೆಸ್‌ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಆರೋಪ ಮಾಡುವವರು ಯಾವುದೇ ದಾಖಲೆ ಹಿಡಿದುಕೊಂಡು ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಅವರದ್ದೇ ಸರ್ಕಾರ ಅಧಿಕಾರದಲ್ಲಿದೆ. ಸಮಗ್ರ ತನಿಖೆ ಮಾಡಲಿ, ಸಿಬಿಐ ತನಿಖೆ ನಡೆಸಲಿ ಎಂದರು.

ಬಿಜೆಪಿಯರು ನಿನ್ನೆ(ಅ.19) ಪರಶುರಾಮ ಮೂರ್ತಿಗೆ ಸುತ್ತಿಗೆಯಿಂದ ಬಡಿದು ಕಂಚಿನ ಮೂರ್ತಿ ಎಂದು ಸಾಬೀತು ಮಾಡುವುದಕ್ಕೆ ಪ್ರಯತ್ನಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡ್ರೋನ್‌ ಕ್ಯಾಮೆರಾದಲ್ಲಿ ಶೂಟ್‌ ಮಾಡಿಸಿದವರು ಕಾಂಗ್ರೆಸ್‌ ನವರು, ಕಾಂಗ್ರೆಸ್‌ ರಾಜಕೀಯ ದುರುದ್ದೇಶದಿಂದ ಈ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಿರ್ಮಿತಿ ಕೇಂದ್ರದಿಂದ ಪರಶುರಾಮ ಮೂರ್ತಿಯನ್ನು ಕಂಚಿನಿಂದಲೇ ತಯಾರು ಮಾಡಲಾಗಿದೆ. ಮರುವಿನ್ಯಾಸಕ್ಕಾಗಿ ಪ್ರತಿಮೆಯನ್ನು ತೆಗೆಯಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ಮಾಹಿತಿಯನ್ನು ಮತ್ತು ನಿರ್ಮಿತಿ ಕೇಂದ್ರ ನೀಡಿರುವ ಮಾಹಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ತಾಂತ್ರಿಕ ವಿಚಾರಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನೋಬ್ಬ ಚುನಾಯಿತ ಜನಪ್ರತಿನಿಧಿ ಅಷ್ಟೆ. ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದೆ. ಬೇಕಾದ ಅನುದಾನ ತಂದುಕೊಡುವ ಕೆಲಸ ಮಾಡಿದ್ದೇನೆ. ಹೆಚ್ಚಿನ ಮಾಹಿತಿಯನ್ನು ನಿರ್ಮಿತಿ ಕೇಂದ್ರದವರಿಂದಲೇ ಪಡೆಯಿರಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!