Sunday, September 8, 2024

ಉಚ್ಚಿಲ ದಸರಾದಲ್ಲಿ ಏಕಕಾಲದಲ್ಲಿ 151 ವೀಣಾವಾದನ-ಶತವೀಣಾವಲ್ಲರಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ 151ಕಲಾವಿದರು ಏಕಕಾಲದಲ್ಲಿ ವೀಣೆ ನುಡಿಸುವ ಮೂಲಕ ದೇವಿಯೆದುರು ಏಕಪಂಚಷತ್ಯಧಿಕ ಏಕಶತಮ್ ವೀಣಾವಲ್ಲರಿ ಸೇವೆ ಸಲ್ಲಿಸಿದರು.

ವಿದುಷಿ ಪವನ ಬಿ.ಆಚಾರ್ ನಿರ್ದೇಶನದಲ್ಲಿ ವೀಣಾ ವಾದಕರು ಏಕಕಾಲದಲ್ಲಿ 151ವೀಣೆಗಳನ್ನು ನುಡಿಸಿದರು. ಒಂದು ಗಂಟೆಯ ಕಾಲ ಈ ಶತವೀಣಾವಲ್ಲರಿ ನಡೆಯಿತು.

ವಿದುಷಿ ಪವನ ಬಿ.ಆಚಾರ್ ಅವರಿಗೆ ವೀಣಾ ವಿಭೂಷಣೆ ಪ್ರಶಸ್ತಿಯನ್ನು ಕ್ಷೇತರದ ಗೌರಲ ಸಲಹೆಗಾರರಾದ ಡಾ.ಜಿ.ಶಂಕರ್ ಹಾಗೂ ಶ್ರೀಮತಿ ಶಾಲಿನಿ ಜಿ ಶಂಕರ್ ಪ್ರದಾನಿಸಿದರು.

ಕಳೆದ ಬಾರಿ 100ವೀಣೆಗಳ ವಾದನ ನಡೆದಿತ್ತು. ಈ ಬಾರಿ 151 ವೀಣೆಗಳ ವಾದನ ನಡೆದಿದೆ. ಬರುವ ವರ್ಷ 200 ವೀಣೆಗಳ ವಾದನ ನಡೆಸಲಾಗುವುದು ಎಂದು ಡಾ. ಶಂಕರ್ ತಿಳಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದೇವಳದ ಅರ್ಚಕ ರಾಘವೇಂದ್ರ ಉಪಾದ್ಯಾಯ, ವ್ಯವಸ್ಥಾಪಕ ಸತೀಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!