Sunday, September 8, 2024

ಚರ್ಮರೋಗ ಅಲಕ್ಷಿಸುವುದು ಸರಿಯಲ್ಲ- ಡಾ. ಕೆ. ಪ್ರೇಮಾನಂದ

ಕುಂದಾಪುರ: ಚರ್ಮರೋಗ ಮರಣಾಂತಿಕ ಅಲ್ಲ ಎಂದುಕೊಂಡು ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಈ ಕಾಯಿಲೆ ಉಲ್ಬಣಗೊಂಡಾಗ ದೇಹದ ಅನ್ಯ ವ್ಯವಸ್ಥೆಗಳ ಮೇಲೂ ಪ್ರಭಾವಬೀರಿ ಸಮಸ್ಯೆ ಸೃಷ್ಟಿಸುವುದರಿಂದ ಅದನ್ನು ಗಮನಿಸಿದ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ. ಪ್ರೇಮಾನಂದ ಹೇಳಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನ ವಿಭಾಗ, ತಾಲ್ಲೂಕು ಆರೋಗ್ಯ ಇಲಾಖೆ, ಸಾಧನಾ ಜನಾರ್ದನ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ಚರ್ಮರೋಗ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಕುಷ್ಠರೋಗದ ಕುರಿತು ಮಾಹಿತಿ ನೀಡಿದ ಚರ್ಮರೋಗ ತಜ್ಞ ಡಾ. ಉಮೇಶ ನಾಯಕ್ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವ ಬಿಳಿ ಅಥವಾ ತಾಮ್ರ ವರ್ಣದ ನೋವಿಲ್ಲದ ಕಲೆ ಕುಷ್ಠರೋಗದ ಆರಂಭಿಕ ಚಿಹ್ನೆ. ಅದನ್ನು ತಕ್ಷಣ ವೈದ್ಯರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದರೆ ಅದು ಪೂರ್ಣ ಗುಣವಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಸಾಧನಾ ಜನಾರ್ದನ ಪ್ರತಿಷ್ಠಾನದ ಆಡಳಿತ ವಿಶ್ವಸ್ತ ಎಸ್. ಜನಾರ್ದನ ಮರವಂತೆ ಮತ್ತು ವಿಶ್ವಸ್ತೆ ಡಾ. ರೂಪಶ್ರೀ ಉದ್ಘಾಟಿಸಿದರು. ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಗಣೇಶ ಭಟ್ಟ ಇದ್ದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ ಸ್ವಾಗತಿಸಿದರು. ಆರೋಗ್ಯ ಸುರಕ್ಷಣಾಧಿಕಾರಿ ಅನಿಸ್ ಸ್ಕರಿಯಾ ವಂದಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಹುಲಿಯಪ್ಪ ಗೌಡ ನಿರೂಪಿಸಿದರು. ಶಿಬಿರದಲ್ಲಿ ೧೧೫ ಜನರ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!