spot_img
Friday, April 3, 2026
spot_img

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ -ಐರೋಡಿ: ಹೂವಿನಕೋಲು ಅಭಿಯಾನ ಉದ್ಘಾಟನೆ

ಕುಂದಾಪುರ: ಯಕ್ಷಗಾನ ಬೆಳವಣಿಗೆಯಲ್ಲಿ ಹೂವಿನಕೋಲು ಕಲಾ ಪ್ರಾಕಾರದ ಕೊಡುಗೆ ಬಹು ದೊಡ್ಡದು. ನಶಿಸುತ್ತಿದ್ದ ಈ ಕಲೆಯ ಉಳಿವಿಕೆಗಾಗಿ ಯಕ್ಷಗಾನ ಕಲಾಕೇಂದ್ರವು ಕಳೆದ ಇಪ್ಪತ್ತು ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದೆ. ಫಲಿತಾಂಶವಾಗಿ ಪರಿಸರದಲ್ಲಿ ಆರೇಳು ತಂಡಗಳು ನವರಾತ್ರಿ ಸಮಯದಲ್ಲಿ ಹೂವಿನಕೋಲು ಪ್ರದರ್ಶನ ನೀಡುತ್ತಿವೆ. ಈ ವರ್ಷ ಕೇಂದ್ರವು ಐವತ್ತರ ಸಂಭ್ರಮದಲ್ಲಿ ಹೂವಿನಕೋಲು ಅಭಿಯಾನವನ್ನು ಹಮ್ಮಿಕೊಂಡಿದೆ. ಇವರ ಪ್ರಯತ್ನ ಸಫಲವಾಗಲಿ, ಅಭಿಯಾನ ಯಶಸ್ವಿಯಾಗಲಿ ಎಂದು ಕಲಾಕೇಂದ್ರದ ಅಧ್ಯಕ್ಷ ಹಾಗೂ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಶುಭ ಹಾರೈಸಿದರು.

ಆನಂದ ಕುಂದರ್ ಅವರ ಗೃಹದಲ್ಲಿ ಹಮ್ಮಿಕೊಳ್ಳಲಾದ ಯಕ್ಷಗಾನ ಕಲಾಕೇಂದ್ರದ ಐವತ್ತರ ಸಂಭ್ರಮದ ಪ್ರಯುಕ್ತ ಆಚರಿಸುತ್ತಿರುವ ಹೂವಿನಕೋಲು ಅಭಿಯಾನವನ್ನು ಮಕ್ಕಳಿಗೆ ಹೂವಿಕೋಲು ನೀಡುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ, ಶ್ರೀಮತಿ ಆನಂದ ಕುಂದರ್, ರಕ್ಷಿತ್ ಕುಂದರ್, ಪ್ರಶಾಂತ ಕುಂದರ್, ಬಸ್ರೂರು ಪ್ರಭಾಕರ ಐತಾಳ್, ಭಾಗವತ ರಾಘವೇಂದ್ರ ಮಯ್ಯ, ವಿಶ್ವೇಶ್ವರ ಹೊಳ್ಳ, ಯಕ್ಷಗಾನ ಕಲಾವಿದ ಕೋಟ ಶಿವಾನಂದ,ವಿಪ್ರ ವೇದಿಕೆ ಐರೋಡಿಯ ರಾಮನಾಥ ಅಲ್ಸೆ,ಅರವಿಂದ ಹೆಬ್ಬಾರ, ಸೀತಾರಾಮ ಸೋಮಯಾಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಹೂವಿನಕೋಲು ಇದರ ವಿವರ ನೀಡಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!