spot_img
Tuesday, March 31, 2026
spot_img

‘ನಮ್ಮ ಕುಂದಾಪ್ರ ಕನ್ನಡ ಬಳಗ’ ಗಲ್ಫ್ ವತಿಯಿಂದ ದುಬೈಯಲ್ಲಿ ಕುಂದಗನ್ನಡ ಉತ್ಸವ

ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ದುಬೈಯಲ್ಲಿ ಪ್ರತಿ ವರ್ಷದಂತೆ ಕುಂದಗನ್ನಡ ಉತ್ಸವನ್ನು ಅಕ್ಟೋಬರ್ 29ರಂದು ಯು‌ಎ‌ಇ ಅಜ್ಮನ್ ನಗರದಲ್ಲಿ ಆಯೋಜಿಸಲಾಗಿದೆ ಎಂದು ‘ನಮ್ಮ ಕುಂದಾಪ್ರ ಕನ್ನಡ ಬಳಗ’ದ ಮುಂದಾಳು ಎನ್.ರಘುರಾಮ ದೇವಾಡಿಗ ಹೇಳಿದರು.

ಅವರು ತ್ರಾಸಿಯ ಲಯನ್ಸ್ ಸಭಾ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

‘ನಮ್ಮ ಕುಂದಾಪ್ರ ಕನ್ನಡ ಬಳಗ’ ಪ್ರಾರಂಭದಿಂದ ಇಂದಿನ ತನಕವೂ ನಿರಂತರವಾಗಿ ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಬಾರಿ ವಿಶೇಷವಾಗಿ ಮಂದರ್ತಿ ಯಕ್ಷಗಾನ ಮೇಳವನ್ನು ದುಬೈಗೆ ಕರೆಸಿಕೊಳ್ಳಲಾಗುತ್ತಿದೆ. ಮಂದರ್ತಿ ಮೇಳದ ಕಲಾವಿದರು ಹಾಗೂ ಅನಿವಾಸಿ ಭಾರತೀಯ ಕಲಾವಿದರಿಂದ ಪಾಪಣ್ಣ ವಿಜಯ-ಗುಣಸುಂದರಿ ಎನ್ನುವ ಆಖ್ಯಾನದ ಪ್ರದರ್ಶನ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಸಾಧಕರಾದ ಗೋಪ್ರೇಮಿ ಸಂಜೀವ ದೇವಾಡಿಗ ಯಡ್ತರೆ, ನಾಟಿ ವೈದ್ಯರಾದ ಮ್ಯಾಕ್ಸಿಮ್ ಒಲಿವೆರಾ, ಜೀವರಕ್ಷಕ ಮುಳುಗು ತಜ್ಞ ದಿನೇಶ ಖಾರ್ವಿ ಅವರಿಗೆ ಕುಂದಾಪ್ರ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಉದ್ಯಮಿಗಳಾದ ವರದರಾಜ ಶೆಟ್ಟಿ, ಪ್ರವೀಣ ಕುಮಾರ್ ಶೆಟ್ಟಿ ವಕ್ವಾಡಿ, ಮೀರಾ ಸಾಹೇಬ್ ಶಿರೂರು ನಮ್ಮ ಕುಂದಾಪ್ರ ಕನ್ನಡ ಬಳಗದ ಮಹಾಪೋಷಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸದನ್, ಕಾರ್ಯದರ್ಶಿ ಸುಧಾಕರ ಪೂಜಾರಿ ಗೌರವಾಧ್ಯಕ್ಷರು, ಪದಾಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದರು.

ಪತ್ರಕರ್ತ ಅರುಣ್ ಕುಮಾರ್ ಶಿರೂರು ಮಾತನಾಡಿ, ನಮ್ಮ ಕುಂದಾಪ್ರ ಕನ್ನಡ ಬಳಗ ವಿಶೇಷವಾಗಿ ಅರಬ್ ರಾಷ್ಟ್ರದಲ್ಲಿ ನೆಲೆಸಿರುವ ಕುಂದಾಪುರ ಭಾಗದವರಿಗೆ ಸಮಸ್ಯೆಯಾದಾಗ ತಕ್ಷಣ ಸ್ಪಂದಿಸಿ ಅಗತ್ಯ ಮಾರ್ಗದರ್ಶನ, ನೆರವು ನೀಡುತ್ತಿದೆ. ಅಪಘಾತ ಇತ್ಯಾದಿಗಳು ನಿಧನರಾದ ಸಂದರ್ಭ ಅಂತಹ ಶವಗಳನ್ನು ಊರಿಗೆ ತರಲು, ತುರ್ತು ಊರಿಗೆ ಬರುವ ಸಂದರ್ಭದಲ್ಲಿ ನೆರವಾಗುತ್ತಿದೆ. ಕೊರೋನಾ ಸಂದರ್ಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಈ ಭಾಗದಲ್ಲಿ ಸಾಕಷ್ಟು ನೆರವು ನೀಡಿದೆ. ಮಾಸ್ಕ್, ಕಿಟ್ ಗಳನ್ನು ನೀಡಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಸಮವಸ್ತ್ರ ನೀಡಿದೆ. ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗದ ಸದಸ್ಯರಾದ ಶೀನ ದೇವಾಡಿಗ, ಗುಜ್ಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಸುಧಾಕರ ಆಚಾರ್ಯ ತ್ರಾಸಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!