spot_img
Tuesday, March 31, 2026
spot_img

ಪ್ರಮೋದ್‌ ಮಧ್ವರಾಜ್‌ ಜನ್ಮದಿನದ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ | ಫಲಾಪೇಕ್ಷೆಯಿಲ್ಲದ ದಾನವೇ ರಕ್ತದಾನ : ಪ್ರಮೋದ್‌ ಮಧ್ವರಾಜ್‌

ಜನಪ್ರತಿನಿಧಿ ವಾರ್ತೆ : ರಾಜ್ಯ ಸರ್ಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜನ್ಮದಿನದ ಅಂಗವಾಗಿ ಇಂದು(ಅ.17, ಮಂಗಳವಾರ) ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಬಳಗ,‌ಕುಂದಾಪುರ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ರಿ.) ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಕೋಟದ ಪ್ರವರ್ತಕ ಆನಂದ ಸಿ. ಕುಂದರ್, ರಕ್ತಕ್ಕೆ ಪರ್ಯಾಯವಾಗಿ ಬೇರೆ ಯಾವುದೇ ಮಾರ್ಗ ಇಲ್ಲ. ಒಬ್ಬನ ಜೀವ ಉಳಿಸುವುದಕ್ಕೆ ರಕ್ತ ಬಹಳ ಮುಖ್ಯವಾದದ್ದು. ರಕ್ತಕ್ಕೆ ಬದಲಾಗಿ ಬೇರೆ ಮಾರ್ಗವನ್ನು ಕಂಡುಕೊಳ್ಳಲು ಯಾವ ವೈದ್ಯ ತಜ್ಞರಿಗಾಗಲಿ, ವಿಜ್ಞಾನಿಗಳಿಗಾಗಲಿ ಕಂಡು ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ. ಒಬ್ಬ ವ್ಯಕ್ತಿಯ ಜನ್ಮದಿನವನ್ನು ಅವರ ಅಭಿಮಾನಿಗಳು ಹೀಗೆ ಆಚರಿಸುವುದು ಸಮಾಜಕ್ಕೆ ಒಂದು ಮಾದರಿ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್ ಮಧ್ವರಾಜ್, ಹುಟ್ಟುಹಬ್ಬವನ್ನು ಆಚರಿಸುವುದರಲ್ಲಿ‌ ನನಗೆ ನಂಬಿಕೆ ಇಲ್ಲ. ಫಲಾಪೇಕ್ಷೆಯಿಲ್ಲದ ದಾನ ಯಾವುದೆಂದರೇ ಅದು ರಕ್ತದಾನ. ರಕ್ತದಾನ ಸರ್ವಶ್ರೇಷ್ಠವಾದ ದಾನ. ರಕ್ತವನ್ನು ಉತ್ಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರಿಗೆ ತಿಂಗಳಿಗೆ ಒಂದು ಯೂನಿಟ್ ರಕ್ತದ ಅವಶ್ಯಕತೆ ಇದೆ. ಒಂದು ಯೂನಿಟ್ ರಕ್ತದಿಂದ ಮೂರು ಜೀವವನ್ನು ಉಳಿಸಬಹುದು. ಇಂತಹ ರಕ್ತದಾನ ಶಿಬಿರಗಳಿಗೆ ನನ್ನ ಸದಾ ಬೆಂಬಲವಿದೆ. ನನ್ನ ಅಭಿಮಾನಿಗಳು ಹಿತೈಶಿಗಳು ನನ್ನ ಜನ್ಮದಿನವನ್ನು ಈ ಮೂಲಕ ಆಚರಿಸುತ್ತಿರುವುದು ಅತೀವ ಸಂತೋಷವಾಗಿದೆ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಕೃಷ್ಣಪ್ರಸಾದ್‌ ಕ್ಯಾಶ್ಯೂಸ್‌ ವಂಡಾರು ಇದರ ಮ್ಯಾನೇಜಿಂಗ್‌ ಡೈರೆಕ್ಟರ್‌ ಸಂಪತ್‌ ಶೆಟ್ಟಿ, ಇಂಡಿಯನ್‌ ರೆಡ್‌ ಕ್ರಾಸ್‌ ಸೊಸೈಟಿ(ರಿ.) ಕುಂದಾಪುರ ಇದರ ಸಭಾಪತಿ ಜಯಕರ್‌ ಶೆಟ್ಟಿ, , ಕೃಷ್ಣಾಕೃಪಾ ಕ್ಯಾಶ್ಯೂಸ್ ಜಪ್ತಿ, ಕುಂದಾಪುರ ಇದರ ನಿರ್ದೇಶಕ ಜಯಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಭಯಹಸ್ತ ಚಾರಿಟೇಬಲ್‌ ಟ್ರಸ್ಟ್‌ (ರಿ.) ಉಡುಪಿ ಇದರ ಅಧ್ಯಕ್ಷ ಸತೀಶ್ ಸಾಲಿಯಾನ್ ಮಣಿಪಾಲ ಪ್ರಸ್ತಾವಿಸಿ, ಸ್ವಾಗತಿಸಿದರು.‌ ನಾಗರಾಜ್‌ ಭಟ್ಕಳ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ ಮಟ್ಟದ ಉದ್ದ ಜಿಗಿತ‌ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ‌ಮಟ್ಟಕ್ಕೆ ಆಯ್ಕೆಗೊಂಡ  ಸುಶಾನ್ ಜಿ. ಸುವರ್ಣ  ಹಾಗೂ ರಕ್ತದಾನಿ ಶರತ್ ಕಾಂಚನ್ ಆನಗಳ್ಳಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಶಾಂತ್‌ ತಲ್ಲೂರು ಹಾಗೂ ಸತೀಶ್‌ ಪೂಜಾರಿ ಆನಗಳ್ಳಿ ಅವರನ್ನು ಗೌರವಿಸಲಾಯಿತು.‌

ಇನ್ನು, ದಾಖಲೆಯ 143 ಯೂನಿಟ್‌ ರಕ್ತ ಸಂಗ್ರಹವಾಗಿದೆ ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!