spot_img
Tuesday, March 31, 2026
spot_img

ಮಾತೃಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ : ವಾರಂಬಳ್ಳಿ ಶಾಖೆ ಉದ್ಘಾಟನೆ

ಬ್ರಹ್ಮಾವರ: ಸಹಕಾರ ತತ್ವದಡಿ ಎಲ್ಲ ವರ್ಗದವರನ್ನು ಪರಸ್ಪರ ಜೋಡಿಸುವ ಪ್ರಕ್ರಿಯೆ ಸಹಕಾರಿ ಸಂಘಗಳಿಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ ವಿಭಾಗ ಕಾರ್ಯವಾಹ ಡಾ. ವಾದಿರಾಜ್ ಹೇಳಿದರು.

ಅವರು ಬ್ರಹ್ಮಾವರ ಆಕಾಶವಾಣಿ ಸಮೀಪ ತುಂಗಾ ನಾರಾಯಣ ಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿ ಮಾತೃಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನೂತನ ವಾರಂಬಳ್ಳಿ ಶಾಖೆ ಉದ್ಘಾಟಿಸಿ ಮಾತನಾಡಿದರು.

ಖ್ಯಾತ ಕಿರುತೆರೆ ನಿರ್ದೇಶಕ ಆರೂರು ಜಗದೀಶ್ ಗಣಕ ಯಂತ್ರ ಉದ್ಘಾಟಿಸಿ ಶಿಂದು ರಾಷ್ಟ್ರೀಯ ಬ್ಯಾಂಕ್‌ಗಳಿಗಿಂತ ಸಹಕಾರಿ ಸಂಘಗಳು ತ್ವರಿತವಾಗಿ ಸ್ಪಂದಿಸುತ್ತಿವೆ ಎಂದರು.

ದ.ಕ. ಸಹಕಾರ ಹಾಲು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ. ರವಿರಾಜ್ ಹೆಗ್ಡೆ ಭದ್ರತಾ ಕೋಶ ಉದ್ಘಾಟಿಸಿ ಮಾತನಾಡಿ ಮಾತೃಶ್ರೀ ಸಹಕಾರಿ ಬದ್ಧತೆಯ ಸೇವೆ ನೀಡುತ್ತಿದೆ ಎಂದರು.

ಕಟ್ಟಡ ಮಾಲಕ ಜಿ. ಬಾಲಕೃಷ್ಣ ಶೆಟ್ಟಿ ಸಂಘದ ಮೂಲಕ ಸಮಾಜದ ಬೆಳವಣಿಗೆಯಾಗಲಿ ಎಂದರು.
ಸಹಕಾರಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಆಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್. ಗಿರೀಶ್ ಪೈ, ನಿರ್ದೇಶಕರಾದ ವಿನಯ ಕುಮಾರ್, ಡಾ| ಜಯರಾಮ ಶೆಟ್ಟಿಗಾರ್, ಎ. ಬಾಲಕೃಷ್ಣ ಶೆಟ್ಟಿ, ಕೆ. ಬಾಲಕೃಷ್ಣ ಶೆಟ್ಟಿ, ನಾಗರಾಜ ಸೋಮಯಾಜಿ, ಟಿ. ಕೃಷ್ಣಯ್ಯ ಶೆಟ್ಟಿ, ರಮಾನಂದ ರಾವ್, ಸದಾನಂದ ದಾಸ್, ಜಾನಕಿ ಹಂದೆ, ವೀಣಾ ವಿ. ನಾಯ್ಕ್, ವಂದನಾ ಶೆಟ್ಟಿ, ಲಲಿತಾ ಎಂ. ಶೆಟ್ಟಿ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಚರಣ್ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!