Sunday, September 8, 2024

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಮಟಪಾಡಿ ಶಾಖೆ ಉದ್ಘಾಟನೆ


ಸಹಕಾರಿ ಕ್ಷೇತ್ರಕ್ಕೆ ಸರಕಾರದ ಹೆಚ್ಚಿನ ಬೇಕು-ಡಾ. ಎಂ.ಎನ್.ರಾಜೇಂದ್ರ ಕುಮಾರ್

ಬ್ರಹ್ಮಾವರ : ಸಹಕಾರಿ ಸಂಘಗಳು ಪ್ರಸ್ತುತ ನಷ್ಟವನ್ನು ಭರಿಸಿಕೊಂಡು ಸದಸ್ಯರಿಗೆ ಅಲ್ಪಾವಧಿ, ಮಧ್ಯಮಾವಧಿ ಸಾಲವನ್ನು ನೀಡುತ್ತಿವೆ. ಸಹಕಾರಿ ಸಂಘಗಳ ಸಹಕಾರ ಮನೋಭಾವಕ್ಕೆ ತಕ್ಕಂತೆ ಸರಕಾರಗಳು ಸೂಕ್ತ ಸಹಕಾರ ನೀಡಿದಾಗ ವಾಣಿಜ್ಯ ಬ್ಯಾಂಕ್‌ಗಳೊಂದಿಗೆ ಇನ್ನಷ್ಟು ಪೈಪೋಟಿ ನೀಡಿ ಇನ್ನೂ ಹೆಚ್ಚಿನ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಸರಕಾರಗಳು ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಅ.15ರಂದು ಮಟಪಾಡಿಯಲ್ಲಿ ಪ್ರತಿಷ್ಠಿತ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ 9ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘ ಪ್ರತಿ ಗ್ರಾಮದಲ್ಲಿ ಶಾಖೆ ತೆರೆಯುವ ಅನಿವಾರ್‍ಯತೆ ಇದೆ. ಉತ್ತಮ ಸಂವಹನ, ಸಂಸ್ಕೃತಿಯ ಸೇವೆಯು ಸಹಕಾರಿ ಸಂಘಗಳಲ್ಲಿ ಮಾತ್ರ ಎಂದರು.

108 ವರ್ಷಗಳ ಇತಿಹಾಸ ಹೊಂದಿ, 184 ಕೋಟಿ ರೂ. ಠೇವಣಿಯೊಂದಿಗೆ ಕಳೆದ 20 ವರ್ಷಗಳಿಂದ ಶೇ.18 ಡಿವಿಡೆಂಡ್ ನೀಡುತ್ತಿರುವ ಬ್ರಹ್ಮಾವರ ಸಂಘವು ಜಿಲ್ಲೆಯಲ್ಲೇ ಅಪರೂಪದ ಸಂಸ್ಥೆ. 11 ಗ್ರಾಮ ವ್ಯಾಪ್ತಿಯಲ್ಲಿ 9 ಶಾಖೆಗಳನ್ನು ಹೊಂದಿದ ಈ ಸಂಸ್ಥೆಗೆ ಇನ್ನೂ ಎರಡು ನೂತನ ಶಾಖೆಯ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಕಾನೂನಿನ ತೊಡಕು ಇರುವುದರಿಂದ ಪ್ರತಿ ಗ್ರಾಮದಲ್ಲೂ ಶಾಖೆಯನ್ನು ತೆರೆಯಬೇಕಾದ ಅವಶ್ಯಕತೆ ಇದೆ. ಈ ಸಂಸ್ಥೆಯ ನೂತನ ಎರಡು ಶಾಖೆಗೆ 10 ಲಕ್ಷ ರೂ. ಧನಸಹಾಯ ನೀಡುವುದಾಗಿ ಎಂ.ಎನ್.ಆರ್. ಘೋಷಿಸಿದರು.

ಸಂಘದ ಅಧ್ಯಕ್ಷ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ ಅಧ್ಯಕ್ಷತೆ ವಹಿಸಿ, ಬ್ರಹ್ಮಾವರ ಸಹಕಾರಿಯ ಬೆಳವಣಿಗೆ ಹಾಗು ಅಭಿವೃದ್ಧಿಗೆ ಎಲ್ಲರ ನಿಸ್ವಾರ್ಥ ಕೊಡುಗೆಯೇ ಕಾರಣವೆಂದು ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಜನಸಾಮಾನ್ಯರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಸಲ್ಲಿಸಿದ ಕೀರ್ತಿ ಸಹಕಾರಿ ಸಂಘಕ್ಕೆ ಸಲ್ಲುತ್ತದೆ. ಪ್ರಾಮಾಣಿಕ ಆಡಳಿತ ಮಂಡಳಿ, ಸಿಬಂದಿ ಹಾಗೂ ಸದಸ್ಯರಿಂದ ಸಹಕಾರಿ ಕ್ಷೇತ್ರ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಆರ್ಥಿಕ ಶಿಸ್ತು, ಗ್ರಾಹಕರ ವಿಶ್ವಾಸಾರ್ಹತೆ ಗಳಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಪೈಪೋಟಿ ನೀಡುವಂತಾಗಬೇಕು ಎಂದರು. ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಉತ್ತಮ ಇತಿಹಾಸವುಳ್ಳ ಬ್ರಹ್ಮಾವರ ವ್ಯ.ಸೇ.ಸ. ಸಂಘವು ಸರ್ವರ ತ್ಯಾಗ, ಸೇವೆಯಿಂದ ಉತ್ನನ ಮಟ್ಟಕ್ಕೆ ಏರಿದೆ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು. ಎಸ್.ಸಿ.ಡಿ.ಸಿ.ಸಿ ನಿರ್ದೇಶಕ ಡಾ| ಐ. ದೇವಿಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್ ಪಾಂಗಾಳ, ತಾ.ವ್ಯ.ಉ. ಸಹಕಾರ ಮಾರಾಟ ಸಂಘದ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಮೈರ್ಮಾಡಿ, ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ., ಹಂದಾಡಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಪೂಜಾರಿ, ಸಿ‌ಎ ಜೀವನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ವೆಂಕಟ್ರಾಯ ನಾಯಕ್, ನಿರ್ದೇಶಕರಾದ ಬಿರ್ತಿ ರಾಜೇಶ್ ಶೆಟ್ಟಿ, ಗಣೇಶ್ ಪ್ರಸಾದ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಸದಾನಂದ ಪೂಜಾರಿ, ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್, ನಳಿನಿ ಪ್ರದೀಪ್ ರಾವ್, ನಾಗವೇಣಿ ಪಂಡರಿನಾಥ, ಸಂಜೀವ ನಾಯ್ಕ, ಪ್ರಕಾಶ್, ಸಹ ಸದಸ್ಯ ಮೋಹನ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಸುಭಾಶ್ಚಂದ್ರ ಶೆಟ್ಟಿ, ಶಾಖಾ ವ್ಯವಸ್ಥಾಪಕ ರಘುರಾಮ ಗಾಣಿಗ ಅತಿಥಿಗಳನ್ನು ಗೌರವಿಸಿದರು.

ಪಡಿತರ ಗೋದಾಮು, ನವರತ್ನ ಮಿನಿ ಸಭಾಂಗಣ, ಭದ್ರತಾ ಕೋಶ, ಅಧಿಕಾರಿಗಳ ಕೊಠಡಿ, ಕಡತಗಳ ಕೊಠಡಿಗಳ ಉದ್ಘಾಟನೆ ಜರಗಿತು. ಮಾಜಿ ಅಧ್ಯಕ್ಷ ರಾಮಣ್ಣ ಅಡಿಗ ಅವರನ್ನು, ಅತಿಥಿಗಳನ್ನು ಹಾಗು ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸಮ್ಮಾನಿಸಲಾಯಿತು.

ಸಂಘದ ನಿರ್ದೇಶಕ ಜ್ಞಾನ ವಸಂತ ಶೆಟ್ಟಿ ಸ್ವಾಗತಿಸಿ, ಸತೀಶ್ಚಂದ್ರ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!