spot_img
Monday, March 30, 2026
spot_img

ಓಕ್‌ವುಡ್ ಇಂಡಿಯನ್ ಸ್ಕೂಲ್ ಮತ್ತು ಯುರೋ-ಕಿಡ್ಸ್ ಇಂಟರ್‌ನ್ಯಾಶನಲ್ ಪ್ರಿ-ಸ್ಕೂಲ್: ವಾರ್ಷಿಕ ಕ್ರೀಡಾಕೂಟ

ಕುಂದಾಪುರ: ಕುಂದಾಪುರದ ಫೋರ್ಟ್‌ಗೇಟ್ ಎಜುಕೇಶನ್ ಟ್ರಸ್ಟ್‌ನ ಘಟಕವಾದ ಓಕ್‌ವುಡ್ ಇಂಡಿಯನ್ ಸ್ಕೂಲ್ ಮತ್ತು ಯುರೋ-ಕಿಡ್ಸ್ ಇಂಟರ್‌ನ್ಯಾಶನಲ್ ಪ್ರಿ-ಸ್ಕೂಲ್‌ನ ವತಿಯಿಂದ ವಾರ್ಷಿಕ ಕ್ರೀಡಾಕೂಟವನ್ನು ಅಕ್ಟೋಬರ್ 13 ರಂದು ಶಾಲಾ ಮೈದಾನದಲ್ಲಿ ನಡೆಸಲಾಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಕುಂದಾಪುರದ ತಹಶೀಲ್ದಾರ್ ಶೋಭಾ ಲಕ್ಷ್ಮಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಫೋರ್ಟ್‌ಗೇಟ್ ಎಜುಕೇಶನ್ ಟ್ರಸ್ಟ್‌ನ ಜಾಯಿಂಟ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಶಾಲೆಯ ನಿರ್ದೇಶಕ ಅಭಿನಂದನ್ ಶೆಟ್ಟಿ ವಹಿಸಿದ್ದರು.

ಇನ್ನೋರ್ವ ಜಾಯಿಂಟ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಕಾರ್ಯದರ್ಶಿ ನೀತಾ ಶೆಟ್ಟಿ, ಶಾಲೆಯ ಪ್ರಾಂಶುಪಾಲೆ ಜ್ಯೋತಿ ಸುರೇಶ್ ಮತ್ತು ಶಾಲಾ ಆಡಳಿತಾಧಿಕಾರಿ ಸಹನಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಯೂರೋ ಕಿಡ್ಸ್ ವಿದ್ಯಾರ್ಥಿಗಳ ಕವಾಯತ್, ಓಕ್‌ವುಡ್ ಶಾಲಾ ವಿದ್ಯಾರ್ಥಿಗಳ ಮಾಸ್ ಡ್ರಿಲ್, ಜುಂಬಾ ಪರ್ಫಾರ್ಮೆನ್ಸ್, ಹೂಪ್ ಡ್ಯಾನ್ಸ್ ಮತ್ತು ಸ್ಟಿಕ್ ವರ್ಕೌಟ್ ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಸಂಸ್ಥೆಯ ದೈಹಿಕ ಶಿಕ್ಷಕ ಪ್ರಶಾಂತ್ ಶೆಟ್ಟಿ ಮತ್ತು ವಿದ್ಯಾರ್ಥಿಗಳಿಗೆ ಹಸ್ತಾಂತರಿಸುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ವಿದ್ಯಾರ್ಥಿಗಳನ್ನು ಸಿಟ್ರಸ್, ಸಿಪ್ರಸ್, ಮೇಪಲ್, ಕಾನಿಫರ್ ನಾಲ್ಕು ಹೌಸ್‌ಗಳಾಗಿ ವಿಂಗಡಿಸಲಾಗಿದ್ದು ಸಿಪ್ರಸ್ ಹೌಸ್ ಈ ವರ್ಷದ ಕ್ರೀಡಾ ಚಾಂಪಿಯನ್ ಆಗಿ ಮೂಡಿಬಂದಿತ್ತು.

ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಅನಿರುದ್ಧ ಶೆಣೈ ಮತ್ತು ಶ್ರೇಯ ಲಕ್ಷ್ಮಣ್ ನೆರವೇರಿಸಿ, ಕ್ರೀಡಾಕೂಟದ ನಿರೂಪಣೆಯನ್ನು ಶಿಕ್ಷಕಿ ವಿಜಯೇತಾ ಪೂಜಾರಿ ಮತ್ತು ಸಿಲ್ವಿಯಾ ಫೆರ್ನಾಂಡಿಸ್ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!