spot_img
Monday, March 30, 2026
spot_img

ಬ್ರಹ್ಮಾವರ ಜಿ‌ಎಮ್‌ನಲ್ಲಿ ಶಿಕ್ಷಕ ರಕ್ಷಕ ಸಂಘದ ಮಹಾಸಭೆ

ಬ್ರಹ್ಮಾವರ: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

ಕಾರ್ಯಕ್ರಮಕ್ಕೆ ಉಡುಪಿ ಡಾ. ಎ. ವಿ. ಬಾಳಿಗ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ವಿರುಪಾಕ್ಷ ದೇವರಮನೆ ಆಗಮಿಸಿದ್ದರು. ಅವರು ಜನರೇಶನ್ ಪೇರೆಂಟಿಂಗ್ ವಿಷಯದ ಕುರಿತು ಪೋಷಕರಿಗೆ ಮಾಹಿತಿಯನ್ನು ನೀಡಿ, ನಾವು ಮಕ್ಕಳಿಗೆ ಸಮಯವನ್ನು ನೀಡಬೇಕು. ನಮ್ಮ ದಿನಚರಿಯ ಭಾಗದಲ್ಲಿ ಮಕ್ಕಳ ನೆನಪು ಇರಬೇಕು ಎಂದರು.

ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಮಕ್ಕಳು ಇಂದು ಮೊಬೈಲ್ ದಾಸರಾಗಿದ್ದಾರೆ. ಅವರಿಗೆ ತಾತ್ವಿಕ ಜೀವನದ ಅರಿವನ್ನು, ಸರಿ ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಬೆಳೆಸಬೇಕೆಂದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀನಿಧಿ ಸಚಿನ್ ಕುಮಾರ್ ಜಿ ಎಮ್ ವಿದ್ಯಾಸಂಸ್ಥೆಯ ಪ್ರತಿಯೊಂದು ಮಗುವಿಗೂ ಮೌಲ್ಯ ಶಿಕ್ಷಣದ ಜೊತೆಗೆ ವೈಯಕ್ತಿಕ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆ ಎಂದರು.

ಪಿಟಿ‌ಎ ಉಪಾಧ್ಯಕ್ಷ ನಾಗರಾಜ ಸೋಮಯಾಜಿ ಮಾತನಾಡಿ ನಾವೆಲ್ಲರೂ ಮಕ್ಕಳ ಮೊದಲ ಅಗತ್ಯತೆಗಳನ್ನು ಪೂರೈಸಬೇಕು, ಎಲ್ಲರೂ ಪೋಷಕರ ಸಭೆಗಳಲ್ಲಿ ಭಾಗವಹಿಸಿ ಮಕ್ಕಳ ಬಗ್ಗೆ ತಿಳಿದುಕೊಳ್ಳಬೇಕೆಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ಮಕ್ಕಳು ನಮ್ಮ ಆಸ್ತಿ, ಅವರಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಡುವುದು ನಮ್ಮ ಆದ್ಯತೆ. ನಿಮ್ಮೆಲ್ಲರ ಸಹಕಾರ ಹೀಗೆ ನಿರಂತರವಾಗಿರಲಿ ಎಂದರು.

ಪೋಷಕರು ವಿದ್ಯಾಸಂಸ್ಥೆಯ ಕುರಿತು ಅಭಿಮಾನದ ನುಡಿಗಳನ್ನಾಡಿದರು. ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ ಸೋಮಯಾಜಿ, ಉಪಾಧ್ಯಕ್ಷೆಯಾಗಿ ಪ್ರೀತಿ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ಪೋಷಕವೃಂದ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!