spot_img
Wednesday, January 22, 2025
spot_img

ಸಿದ್ದಾಪುರ ಸರಕಾರಿ ಪ್ರೌಢಶಾಲೆ: ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೋಡುಗೆ

ಸಿದ್ದಾಪುರ: ಯಾವ ದೇಶದ ಬೌದ್ಧಿಕ ಗುಣಮಟ್ಟವೂ ಆಯಾ ದೇಶದ ಶಿಕ್ಷಕನ ಬೌದ್ಧಿಕತೆಗಿಂತ ಹೆಚ್ಚಿರಾಲಾರದು. ದೇಶದ ಅಪಾರ ಬೌದ್ಧಿಕ ಆಸ್ತಿಯನ್ನು ಶ್ರೀಮಂತ ಗೊಳಿಸುವ ಪವಿತ್ರ ಕಾರ್ಯದಲ್ಲಿ ತೊಡಗಿಕೊಂಡ ಶಿಕ್ಷಕನ ವೃತ್ತಿ ಎಲ್ಲ ವೃತ್ತಿ ಕಸುಬುಗಳಿಗೆ ಮಾತೃ ಸದೃಷವಾದುದು, ಅದಕ್ಕಾಗಿಯೇ ಸಮಾಜ ಶಿಕ್ಷಕರಿಗೆ ಋಣಿಯಾಗಿದೆ.ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಹೊಂದಿರುವ ಶಿಕ್ಷಕರ ಅಗಾಧ ಸೇವೆ ಮಕ್ಕಳ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತು ಅವರ ಹೃದಯ ಸಂಸ್ಕಾರ ಮಾಡಿದೆ ಎಂದು ಸಿದ್ದಾಪುರ ಸರಕಾರಿ ಪ್ರೌಢ ಶಾಲಾ ಎಸ್. ಡಿ.ಎಂ ಸಿ.ಅಧ್ಯಕ್ಷ ವಿಶ್ವನಾಥ ತುಂಬಿಕಲ್ಲಾಯ ಹೇಳಿದರು.

ಅವರು ಸಿದ್ದಾಪುರ ಸರಕಾರಿ ಪ್ರೌಢಶಾಲೆಯಿಂದ ವಿವಿಧ ಶಾಲೆಗಳಿಗೆ ವರ್ಗಾವಣೆ ಹೊಂದಿದ ಶಿಕ್ಷಕರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವರ್ಗಾವಣೆ ಹೊಂದಿದ ಶಿಕ್ಷಕರುಗಳಾದ ಉದಯ್ ಗಾಂವ್ಕರ್, ರಮಾನಂದ ನಾಯಕ್, ಶ್ರೀಕಾಂತ್, ಕೃಷ್ಣ ದೇವಾಡಿಗ ಅವರನ್ನು ಸಂಸ್ಥೆಯ ವತಿಯಿಂದ ಹಾಗೂ ಸಿದ್ದಾಪುರ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗೌರವಪೂರ್ವಕವಾಗಿ ಸಮ್ಮಾನಿಸಲಾಯಿತು.

ವಿದ್ಯೆ ಕಲಿಸಿ ವರ್ಗಾವಣೆಗೊಂಡ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಾದ ಬ್ರಾಹ್ಮೀಶ್ರೀ, ಸಿಂಚನ, ಶಮನ್, ಕೀರ್ತೇಶ್,ಧನ್ಯ, ಸ್ಪಂದನ ತಮ್ಮ ಭಾವ ಪೂರ್ಣ ಅನಿಸಿಕೆಗೆ ದನಿಯಾದರು. ವಿದ್ಯಾರ್ಥಿಗಳಾದ ಕುಮಾರಿ ಶ್ರೀನಿಧಿ ,ಹರ್ಶಿನಿ, ಶ್ರೀಶಾಂತ್, ಪ್ರಣತಿ ಸಮ್ಮಾನ ಪತ್ರ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರ ಕುಲಾಲ್ ಈ ಶಿಕ್ಷಕರು ಸಂಸ್ಥೆಗೆ ತಮ್ಮನ್ನು ಅರ್ಪಿಸಿಕೊಂಡ ಬಗ್ಗೆ ಮಾತನ್ನಾಡಿ ಭಾವುಕರಾದರು.

ಸ್ಥಳೀಯ ಪಂಚಾಯತ್ ಸದಸ್ಯರಾದ ಭಾಸ್ಕರ್ ಶೆಟ್ಟಿ ,ವಿಶ್ರಾಂತ ಶಿಕ್ಷಕ ರವೀಂದ್ರ ಶೆಟ್ಟಿ, ಎಸ್‌ಡಿ ಎಂ ಸಿ ಸದಸ್ಯರು ಊರ ನಾಗರಿಕರು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಮತ್ತು ಸರ್ವ ಸದಸ್ಯರು, ಊರ ನಾಗರಿಕರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿರಿಯ ಶಿಕ್ಷಕ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಗಣಿತ ಶಿಕ್ಷಕ ಉದಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸನತ್ ಕುಮಾರ್ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!