Sunday, September 8, 2024

ಗಂಗೊಳ್ಳಿ-ಕುಂದಾಪುರ ಮಾರ್ಗದ ಬಗ್ಗೆ ಕೆ‌ಎಸ್‌ಆರ್‌ಟಿಸಿ ಕುಂದಾಪುರ ಡಿಪೋ ಅಧಿಕಾರಿಗಳು ಅಸಡ್ಡೆ: ಪ್ರಯಾಣಿಕರ ಆಕ್ರೋಶ


ಕುಂದಾಪುರ: ಗಂಗೊಳ್ಳಿ-ಕುಂದಾಪುರ ಮಾರ್ಗದ ಬಗ್ಗೆ ಕೆ‌ಎಸ್‌ಆರ್‌ಟಿಸಿ ಕುಂದಾಪುರ ಡಿಪೋ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದು, ಪ್ರತಿನಿತ್ಯ ಪ್ರಯಾಣಿಸುವ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಸುಮಾರು 15 ವರ್ಷಗಳಿಂದ ಗಂಗೊಳ್ಳಿ-ಕುಂದಾಪುರ ನಡುವೆ ಎರಡು ಕೆ‌ಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸುತ್ತಿದ್ದು ಉತ್ತಮ ಆದಾಯ ಬರುತ್ತಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆ‌ಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿದೆ. ಉತ್ತಮ ಆದಾಯ ಬರುತ್ತಿರುವ ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ಕೆ‌ಎಸ್‌ಆರ್‌ಟಿಸಿ ಬಸ್ ಓಡಿಸಲು ಕುಂದಾಪುರ ಡಿಪೋ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ದಿನಕ್ಕೊಂದು ಬಸ್, ದಿನಕ್ಕೊಬ್ಬ ಚಾಲಕ ನಿರ್ವಾಹರನ್ನು ಹಾಕಿ ಗಂಗೊಳ್ಳಿ-ಕುಂದಾಪುರ ಮಾರ್ಗವನ್ನು ಅವ್ಯವಸ್ಥೆ ಮಾಡಿ ಬಸ್ ಸಂಚಾರವನ್ನೇ ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ಲಾಬಿಗೆ ಮಣಿದು ಕೆ‌ಎಸ್‌ಆರ್‌ಟಿ ಬಸ್ ಸಂಚಾರವನ್ನೇ ಸ್ಥಗಿತಗೊಳಿಸುವ ಷಡ್ಯಂತ್ರ ನಡೆಯುತ್ತಿದ್ದು, ಕುಂದಾಪುರ ಡಿಪೋ ಅಧಿಕಾರಿಗಳು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಅಧಿಕಾರಿಗಳ ಅಸಡ್ಡೆ ಧೋರಣೆ ಹಾಗೂ ಕೆ‌ಎಸ್‌ಆರ್‌ಟಿ ಬಸ್ ಸಂಚಾರದಲ್ಲಿ ಆಗುತ್ತಿರುವ ತೊಂದರೆಯನ್ನು ಧೋರಣೆ ಖಂಡಿಸಿ ಹಾಗೂ ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ಕೆ‌ಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ತೊಂದರೆ ನೀಡುವುದನ್ನು ಮುಂದುವರಿಸಿದ್ದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಕುಂದಾಪುರ ಡಿಪೋ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗುವುದು ಎಂದು ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಸಂಚಾಲಕ ರಾಘವೇಂದ್ರ ಪೈ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!