spot_img
Saturday, March 28, 2026
spot_img

‘ಹೊಸ್ತು’ ಸಂಭ್ರಮಕ್ಕೆ ಈಗ ಕದಿರು ಸಮಸ್ಯೆ!

(ಜನಪ್ರತಿನಿಧಿ ವಾರ್ತೆ) ಈ ಬಾರಿ ನವರಾತ್ರಿ ವಿಳಂಬವಾಗಿರುವುದರಿಂದ ಹೊಸ್ತು ಅ.15 ಮತ್ತು 16ರಂದೇ ನಡೆಸಲಾಗುತ್ತಿದೆ. ಹೊಸ್ತು ಕನ್ಯೆ ತಿಂಗಳ ಯಾವುದಾದರೂ ಒಂದು ದಿನ ಆಚರಿಸುತ್ತಿದ್ದ ಹೊಸತು ಈ ಬಾರಿ ಎರಡೇ ದಿನ ಶೇ.98ರಷ್ಟು ಕಡೆ ಹೊಸ್ತು ನಡೆಯುತ್ತದೆ. ಪ್ರಾದೇಶಿಕ ಕೃಷಿ ಪರಂಪರೆಯಲ್ಲಿ ಹೊಸ್ತುವಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಇಂದಿನ ತನಕವೂ ಹೊಸ್ತು ಎನ್ನುವ ಕೃಷಿ ಸಂಬಂಧಿ ಆಚರಣೆ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಭತ್ತ ಬೇಸಾಯ ಸಂಪೂರ್ಣ ನೆನೆಗುದಿಗೆ ಸರಿದಿರುವುದರಿಂದ ಹೊಸ್ತು ಆಚರಣೆಯ ಕೇಂದ್ರಬಿಂದುವಾಗಿರುವ ಭತ್ತದ ತೆನೆಯದ್ದೇ ಸಮಸ್ಯೆಯಾಗಿದೆ.

ಈ ವರ್ಷವಂತೂ ಗ್ರಾಮಾಂತರ ಪ್ರದೇಶದ ಭತ್ತ ಬೇಸಾಯ ರಹಿತ ಕುಟುಂಬಗಳಿಗೆ ಭತ್ತದ ತೆನೆಯದ್ದೇ ಸಮಸ್ಯೆ. ಕೃಷಿ‌ಆಧಾರಿತ ಕುಟುಂಬಗಳು ಕದಿರು ಕೊಯ್ಯುವ ಸಂಪ್ರದಾಯವನ್ನು ಹೊಂದಿದೆ. ಮನೆಯ ಸಮೀಪ ಇರುಳಲ್ಲಿ ತಂದಿಟ್ಟ ಭತ್ತದ ಪೈರನ್ನು ಸಂಪ್ರದಾಯಬದ್ಧವಾಗಿ ಕೊಯ್ದು ತಲೆಯ ಮೇಲೆ ಹೊತ್ತು ಮನೆಯ ಒಳಗೆ ಕೊಂಡೊಯ್ಯುವ ಶಾಸ್ತ್ರವಿದೆ. ಈಗೀಗ ಭತ್ತ ಬೇಸಾಯ ಮಾಡುವ ಕೃಷಿಕರ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗಿರುವುದರಿಂದ ಪರಂಪರಿಕವಾಗಿ ನಡೆಸಿಕೊಂಡು ಬಂದ ಸಂಪ್ರದಾಯಗಳನ್ನು ನಡೆಸಲು ಮೂಲವಸ್ತುವೇ ಸಿಗದಂತಹ ಸ್ಥಿತಿ ಬಂದಿದೆ.

ಏನಿದು ಸಂಪ್ರದಾಯ?
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಹೊಸ್ತು ವಿಚಾರದಲ್ಲಿ ಒಂದು ವಿಶೇಷವಾದ ನಂಬಿಕೆ ಇದೆ. ರೈತರು ತಮ್ಮ ಗದ್ದೆಯಲ್ಲಿ ಬೆಳೆದ ಪೈರನ್ನು ಹೊಸ್ತಿಗೆ ಬಳಸುವ ಪದ್ದತಿ ಇಲ್ಲ. ಹೊಸ್ತುವಿನ ನಸುಕಿನ ವೇಳೆ ಬೇರೆಯವರ ಮನೆತ ಗದ್ದೆಯಿಂದ ಒಂದು ಹಿಡಿ ಭತ್ತದ ಪೈರನ್ನು ಕದ್ದು ತಂದು ಕದಿರು ಕೊಯ್ಯುವ ಸಂಪ್ರದಾಯವಿದೆ. (ಕೆಲವೆಡೆ ಗದ್ದೆಯಲ್ಲಿಯೇ ಕದಿರು ಕೊಯ್ಯುವ ಪದ್ದತಿಯೂ ಇದೆ) ಸಂಪ್ರದಾಯ ಆಚರಣೆಯಲ್ಲಿ ಪ್ರಾದೇಶಿಕವಾರು ಬದಲಾವಣೆ ಇದೆ.

ಆದರೆ ಈಗ ಭತ್ತದ ಗದ್ದೆ ಕಾಣಲು ಮೈಲುದೂರ ಹೋಗಬೇಕಾಗುತ್ತದೆ. ಈಗ ಇರುವ ಭತ್ತದ ಗದ್ದೆಗಳನ್ನು ಕಾಡುಪ್ರಾಣಿಗಳಿಂದ ಸಂರಕ್ಷಣೆ ಮಾಡಲು ಐಬೆಕ್ಸ್ ಬೇಲಿಗಳನ್ನು ಮಾಡುತ್ತಾರೆ. ಹಾಗಾಗಿ ಕದಿರು ತರಲು ಹೋಗುವುದು ಸುಲಭದ ವಿಚಾರವಲ್ಲ. ಇನ್ನೂ ಪಟ್ಟಣ ಪ್ರದೇಶದಲ್ಲಿ ಸ್ಥಳೀಯ ದೇವಸ್ಥಾನಗಳಲ್ಲಿ ಪೂಜಿಸಿ ಕದಿರು ನೀಡುತ್ತಾರೆ. ಹಾಗಾಗಿ ಅಲ್ಲಿ ಸಮಸ್ಯೆಯಿರುವುದಿಲ್ಲ. ಕದಿರು ಸಮಸ್ಯೆ ಆಗುವುದು ಗ್ರಾಮಾಂತರ ಪ್ರದೇಶದ ಸಂಪ್ರದಾಯಬದ್ದವಾಗಿ ಹೊಸ್ತು ಆಚರಿಸುವ ಜನರಿಗೆ.

ಬಹುತೇಕ ಆಚರಣೆಗಳು ಇವತ್ತು ನಶಿಸಿದ್ದರೂ ಕೂಡಾ ಹೊಸ್ತು ಮಾತ್ರ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಮೊದಲಿನಷ್ಟು ಅದ್ದೂರಿ ಇಲ್ಲದಿದ್ದರೂ ಸರಳವಾಗಿ ಸಂಪ್ರದಾಯದಂತೆ ಆಚರಣೆ ಮಾಡಲಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಭತ್ತ ಬೇಸಾಯ ಸಂಪೂರ್ಣವಾಗಿ ಅವನತಿಯ ಹಂತಕ್ಕೆ ತಲುಪಿರುವುದರಿಂದ ಹೊಸ್ತು ಮಾಡಲು ಕೂಡಾ ಕದಿರು ಸಿಗದಂತಹ ಸಂಕಷ್ಟ ಎದುರಾಗಿತ್ತಿದೆ. ಮುಂದೆ ಮುಂದೆ ಹೊಸ್ತು ಕದಿರು ಕಟ್ಟಲಿಕ್ಕಾದರೂ ನಾಲ್ಕು ಬುಡ ಭತ್ತದ ಸಸಿ ನೆಡಬೇಕಾದ ಸ್ಥಿತಿ ಬರಬಹುದು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!