spot_img
Saturday, March 28, 2026
spot_img

ಯೋಗಾಸನ ಸ್ಪರ್ಧೆ: ರಾಜ್ಯದ ಯೋಗ ಪಟುಗಳ ಅದ್ಭುತ ಪ್ರದರ್ಶನ

ಕುಂದಾಪುರ: ಹಲವು ಫೆಡರೇಷನ್‌ಗಳ ಸಹಯೋಗದಲ್ಲಿ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ದೆಹಲಿಯಲ್ಲಿ 4ನೇ ಅಂತರಾಷ್ಟ್ರೀಯ ಯೋಗ ಪಂದ್ಯಾವಳಿಗಳನ್ನು ಆಯೋಜಿಸಿತ್ತು.

ಭಾರತ ಒಳಗೊಂಡಂತೆ ಮಲೇಷಿಯಾ, ಸಿಂಗಾಪುರ್, ಫಿನ್ಲ್ಯಾಂಡ್, ಇರಾಕ್, ಇರಾನ್ ಸೇರಿ 8 ದೇಶಗಳ ಯೋಗ ಪಟುಗಳು ಪಾಲ್ಗೊಂಡಿದ್ದರು.

ಅಂತರಾಷ್ಟ್ರೀಯ ಖ್ಯಾತಿಯ ಯೋಗ ಗುರು ದೀಪಕ್ ಜೆ. ನೇತೃತ್ವದಲ್ಲಿ ಕರ್ನಾಟಕದಿಂದ 9 ಸ್ಪರ್ಧಿಗಳು ಕಿರಿಯರ ಹಾಗೂ ಅತಿ ಕಿರಿಯ ಪಂದ್ಯಾವಳಿಗಳಲ್ಲಿ ಅದ್ಬುತ ಪ್ರದರ್ಶನ ನೀಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

10 ಹಾಗೂ 10 ರಿಂದ 14 ವರ್ಷದೊಳಗಿನ ಬಾಲಕ-ಬಾಲಕಿಯರ ಪಂದ್ಯಾವಳಿಗಳಲ್ಲಿ ನೆಲಗದರನಹಳ್ಳಿಯ ಎಸ್‌ಎಸ್‌ಎಂ ಪಬ್ಲಿಕ್ ಶಾಲೆಯ ರಿಷಾ ಆರ್. ಶೆಟ್ಟಿ, ಪ್ರಥಮ ಸ್ಥಾನ ಪಡೆದರೆ, ಸಂಜಿತಾ ಖುಷಿ ಗೌಡ ಹಾಗೂ ಸಂಚಲ್ ಕೆ. ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅರ್ಜುನ್ ವೈ ಹಾಗೂ ಮಾಗಡಿ ಮುಖ್ಯ ರಸ್ತೆಯ ಮಾಚೋಹಳ್ಳಿಯ ವಿದ್ಯಾ ಸಂಸ್ಕಾರ್ ಶಾಲೆಯ ಹೇಮಂತ್ ಜಿ. ಹೆಚ್ ತೃತೀಯ ಸ್ಥಾನ ಪಡೆದಿದ್ದಾರೆ.

ಈ ವೇಳೆ ಮಾತನಾಡಿದ ಯೋಗ ಗುರು ದೀಪಕ್ ಜೆ. ಅಂತಾರಾಷ್ಟ್ರೀಯ ಯೋಗ ಪಂದ್ಯಾವಳಿಗಳಲ್ಲಿ ರಾಜ್ಯದ ಯೋಗ ಪಟುಗಳು ನಿರೀಕ್ಷೆಗೂ ಮೀರಿದ ಸಾಧನೆಗೈದು ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಜತೆಗೆ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!