spot_img
Saturday, March 28, 2026
spot_img

ನವರಾತ್ರಿಯಲ್ಲಿ ಅಕ್ಟೋಬರ್ 15ರಿಂದ ಯಕ್ಷಗಾನ ಸಾಂಪ್ರದಾಯಿಕ ಕಲೆ ಹೂವಿನಕೋಲು ಅಭಿಯಾನ

ತೆಕ್ಕಟ್ಟೆ: ಕಳೆದ ಹಲವಾರು ವರ್ಷಗಳಿಂದ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಕೆಲವು ಚಿಣ್ಣರಿಗೆ ಹೂವಿನಕೋಲು ಪ್ರದರ್ಶನಕ್ಕೆ ತಯಾರಿ ನಡೆಸಿ ಅಕ್ಟೋಬರ್ 15ರಿಂದ 24ರವರೆಗೆ ನವರಾತ್ರಿ ಸಂದರ್ಭದಲ್ಲಿ ಆಯ್ದ ಮನೆ ಮನೆಗಳಿಗೆ ಪ್ರದರ್ಶನ ನೀಡಲು ತೆರಳುತ್ತಿದ್ದಾರೆ. ಪ್ರತೀ ದಿನ ಬೆಳಿಗ್ಗೆ ೮ರಿಂದ ಸಂಜೆ ಗಂಟೆ 7ರ ತನಕ ಕುಂದಾಪುರ, ಉಡುಪಿ, ಮಂಗಳೂರು ಭಾಗದಲ್ಲಿ 20 ಪೌರಾಣಿಕ ಪ್ರಸಂಗದ ತುಣುಕುಗಳನ್ನು ಅಭ್ಯಸಿಸಿ, ಕಲಾಸಕ್ತರ ಮನೆಗಳಿಗೆ ತೆರಳಿ ’ಧನ ಕನಕ, ಸಂಪತ್ತು ಸಮೃದ್ಧಿಯಾಗಲೆಂದು’ ಹಾರೈಸುವುದಕ್ಕಾಗಿ ಯಶಸ್ವೀ ಕಲಾವೃಂದ ಚಿಣ್ಣರ ಪಡೆ ಪ್ರತೀ ವರ್ಷದಂತೆ ಈ ವರ್ಷವೂ ಅಭಿಯಾನ ರೂಪದ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ. ಈ ಅಳಿವಿನಂಚಿನಲ್ಲಿರುವ ಕಲಾ ಪ್ರಕಾರವನ್ನು ಪುನಃರುಜ್ಜೀವನಗೊಳಿಸುವಲ್ಲಿ ಸತತ 15 ವರ್ಷಗಳಿಂದ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕಲಾಸಕ್ತರು ತಮ್ಮ ಮನೆಗೂ ಆಹ್ವಾನಿಸುವುದಿದ್ದರೆ ಸಂಪರ್ಕ ಸಂಖ್ಯೆ: 9945947771 ಸಂಪರ್ಕಿಸಬಹುದೆಂದು ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!