Sunday, September 8, 2024

ಪರಶುರಾಮ ಥೀಮ್ ಪಾರ್ಕ್ ಹಗರಣ ಸರ್ಕಾರ ಸಿಬಿ‌ಐ ತನಿಖೆಗೆ ಒಳಪಡಿಸಲು ವಿಕಾಸ್ ಹೆಗ್ಡೆ ಆಗ್ರಹ

ಕುಂದಾಪುರ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನ ಪರಶುರಾಮ ಮೂರ್ತಿಯನ್ನು ಕಂಚಿನ ಮೂರ್ತಿ ಎಂದು ಸುಳ್ಳು ಕತೆ ಕಟ್ಟಿ ಪೈಬರ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಈಗ ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಪೈಬರ್ ಮೂರ್ತಿಯನ್ನು ಬದಲಾಯಿಸಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹೊರಟ ಹಾಗೂ ಇದರಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಸಂಬಂಧಿತ ಅಧಿಕಾರಿಗಳು, ಅಭಿಯಂತರರು ಹಾಗೂ ಈ ಹಗರಣದ ಪ್ರದಾನ ರೂವಾರಿ ಕಾರ್ಕಳ ಶಾಸಕರನ್ನು ಸಿಬಿ ಐ ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಸರಕಾರವನ್ನು ಆಗ್ರಹಿಸಿದ್ದಾರೆ.

ಕರಾವಳಿ ಎನ್ನುವುದು ಪರಶುರಾಮನ ಸೃಷ್ಟಿ ಜಗತ್ತಿನ ಹೆಚ್ಚಿನ ಕರಾವಳಿ ಪ್ರದೇಶದಲ್ಲಿ ಒಂದಲ್ಲ ಒಂದು ಪ್ರಾಕೃತಿಕ ವಿಕೋಪ ಮುಂತಾದವು ಸಂಭವಿಸಿದರೆ ನಾನು ಸುರಕ್ಷಿತವಾಗಿರಲು ಕಾರಣ ಪರಶುರಾಮನ ಆಶೀರ್ವಾದ ಎನ್ನುವುದು ನಮ್ಮ ನಂಬಿಕೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಏರಿದ ಕಾರ್ಕಳ ಶಾಸಕರು ನಮ್ಮೆಲ್ಲರ ಆರಾಧ್ಯ ದೇವರಾದ ಪರಶುರಾಮನ ಹೆಸರಿನಲ್ಲಿ ಮಾಡಿರುವ ಭ್ರಷ್ಟಾಚಾರ ಅವರ ಹಿಂದೂ ವಿರೋಧಿ ನಿಲುವಾಗಿದೆ ಹಾಗೂ ಸಮಸ್ತ ಹಿಂದೂ ಧರ್ಮಿಯರಿಗೆ ಮಾಡಿದ ದ್ರೋಹವಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬ್ರಹ್ಮಾಂಡ ಭ್ರಷ್ಟಾಚಾರದ ಪ್ರಕರಣವನ್ನು ಸಿಬಿ‌ಐ ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!