spot_img
Saturday, March 28, 2026
spot_img

ಬಗ್ವಾಡಿಯಲ್ಲಿ ಶುಕ್ರವಾರದ ಅನ್ನದಾಸೋಹಕ್ಕೆ ಉತ್ತಮ ಪ್ರತಿಕ್ರಿಯೆ

ಕುಂದಾಪುರ, ಅ.13: ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರದ ಅನ್ನದಾಸೋಹಕ್ಕೆ ಅ.6ರಂದು ನಾಡೋಜ ಡಾ.ಜಿ.ಶಂಕರ್ ಅವರು ಚಾಲನೆ ನೀಡಿದ್ದು ಪ್ರಥಮ ಶುಕ್ರವಾರದ ಅನ್ನದಾಸೋಹ ಅ.13ರಂದು ನಡೆಯಿತು.

ಪ್ರಥಮ ಶುಕ್ರವಾರದ ಅನ್ನಸಂತರ್ಪಣೆಗೆ ಭಕ್ತಾದಿಗಳಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂತು. ಸುಮಾರು 450ಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಅನ್ನಸಂತರ್ಪಣೆ ಆರಂಭವಾಗಿದ್ದರಿಂದ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಳವಾಗಿತ್ತು. ದೂರದೂರದಿಂದಲೂ ಭಕ್ತಾದಿಗಳು ಬಗ್ವಾಡಿಗೆ ಆಗಮಿಸಿರುವುದು ಕಂಡುಬಂತು. ಮೊದಲ ವಾರವೇ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಕಂಡು ಬಂತು.

ಶುಚಿ-ರುಚಿಯಾದ ಅನ್ನದಾಸೋಹದಲ್ಲಿ ಉಪ್ಪಿನಕಾಯಿ, ಚಟ್ನಿ, ಅಲಸಂಡೆ ಪಲ್ಯ, ಅನ್ನ ಸಾರು, ಅನ್ನ ಹುಳಿ, ಪಾಯಸ ಇತ್ತು. ದೂರ ದೂರದಿಂದ ಬರುವ ಭಕ್ತಾದಿಗಳಿಗೆ ಬಗ್ವಾಡಿಯಲ್ಲಿ ಮಧ್ಯಾಹ್ನ ಊಟಕ್ಕೆ ಯಾವುದೇ ಹೊಟೇಲ್ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿ ಮಧ್ಯಾಹ್ನ ಅನ್ನದಾಸೋಹ ಆರಂಭವಾಗಿರುವುದು ಅನುಕೂಲವಾಗಿದೆ.

ಮೊದಲ ಶುಕ್ರವಾರದ ಅನ್ನದಾಸೋಹದ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿಯ ಶಾಖಾಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು, ಮೊಗವೀರ ಯುವ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು, ಮೊಗವೀರ ಸ್ತ್ರೀಶಕ್ತಿಯ ಪದಾಧಿಕಾರಿಗಳು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!