Sunday, September 8, 2024

ಸುಳ್ಳು ಸುದ್ದಿಗಳ ವಿರುದ್ಧ ರಾಜ್ಯ ಸರ್ಕಾರ ಸಮರ : ಫ್ಯಾಕ್ಟ್‌ ಚೆಕ್‌ ವಿಭಾಗ ಆರಂಭಿಸಲು ಏಜೆನ್ಸಿಗಳಿಗೆ ಸರ್ಕಾರ ಆಹ್ವಾನ

ಜನಪ್ರತಿನಿಧಿ ವಾರ್ತೆ : ರಾಜ್ಯದಲ್ಲಿ ಅಧಿಕಾರಕ್ಕೆ ಏರಿದ ಆರಂಭದಿಂದಲೇ ಸದಾ ಸುಳ್ಳು ಸುದ್ದಿಗಳ ವಿರುದ್ಧ ಸಮರ ಸಾರಿದ ರಾಜ್ಯ ಕಾಂಗ್ರೆಸ್‌ ಸರ್ಕಾರ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಈಗ ಫ್ಯಾಕ್ಟ್‌ ಚೆಕ್‌ ಆರಂಭಿಸುವ ಉದ್ದೇಶದಿಂದ ಏಜೆನ್ಸಿಗಳಿಗೆ ಆಹ್ವಾನ ನೀಡಿದೆ.

ರಾಜ್ಯ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ) ಇಲಾಖೆಯು ‘ಮಾಹಿತಿ ಅಸ್ವಸ್ಥತೆ ಟ್ರ್ಯಾಕಿಂಗ್ ಘಟಕ’ (ಐಡಿಟಿಯು) ಸ್ಥಾಪಿಸಲು ಆಸಕ್ತ ಏಜೆನ್ಸಿಗಳಿಗೆ (ಇಒಐ) ಆಹ್ವಾನ ನೀಡಿದೆ. ಸರ್ಕಾರದಿಂದ ನೇಮಕಗೊಂಡ ಏಜೆನ್ಸಿಯು ಸುಳ್ಳು ಸುದ್ದಿಗಳನ್ನು ನಿಯಂತ್ರಣಿಸುವ ಕೆಲಸವನ್ನು ಸರ್ಕಾರದ ಪರವಾಗಿ ಮಾಡಲಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್‌ʼ ಜಾಲತಾಣದಲ್ಲಿ ಮಾಹಿತಿ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸುಳ್ಳು ಸುದ್ದಿ ಹರಡುವವರ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ. ರಾಜ್ಯದಲ್ಲಿ ನಕಲಿ ಸುದ್ದಿ ಹರಡುವುದನ್ನು ತಡೆಗಟ್ಟಲು ಮತ್ತುಯ ನಿಯಂತ್ರಿಸಲು ಮೂರು ಘಟಕಗಳಿಗೆ ಏಜೆನ್ಸಿಗಳ ನೋಂದಾವಣೆಗಾಗಿ ಆಹ್ವಾನ ನೀಡಲಾಗಿದೆ. ಇದರಲ್ಲಿ ಫ್ಯಾಕ್ಟ್ ಚೆಕ್ ಟೀಮ್, ಅನಲಿಟಿಕ್ಸ್‌ ತಂಡ ಮತ್ತು ಕೆಪಾಸಿಟಿ ಬಿಲ್ಡಿಂಗ್‌ ತಂಡ ಇರಲಿದ್ದು, ಸರ್ಕಾರದ ಆದೇಶದ ಪ್ರಕಾರ ಮೂರು ತಂಡಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

1. ಫ್ಯಾಕ್ಟ್ ಚೆಕ್ ಟೀಮ್ :

ಕರ್ನಾಟಕ ಸರ್ಕಾರದಿಂದ ನೋಂದಾಯಿತರಾದ ಸ್ವತಂತ್ರ ಫ್ಯಾಕ್ಟ್‌ ಚೆಕ್‌ ಏಜೆನ್ಸಿಗಳನ್ನು ಹೊಂದಿರುತ್ತದೆ. ಅಲ್ಲದೆ ಮಾಹಿತಿ ಅಸ್ವಸ್ಥತೆಯನ್ನು ಗುರುತಿಸುವುದು ಇದರ ಉದ್ದೇಶವಾಗಿರುತ್ತದೆ.

2. ಅನಲಿಟಿಕ್ಸ್‌ ತಂಡ:

ಡಾಟಾ ಅನಲಿಟಿಕ್ಸ್‌ ಹಾಗೂ ಕೃತಕ ಬುದ್ದಿವಂತಿಕೆಯ ತಂತ್ರಜ್ಞಾನದ ಬುನಾದಿಯನ್ನು ಅಳವಡಿಸಿ ಹರಡಲ್ಪಡುವ ಸುಳ್ಳು ಮಾಹಿತಿಯ ಬಗ್ಗೆ ಕಲೆಹಾಕಿ, ಅದನ್ನು ನಿಯಂತ್ರಣ ಮಾಡುವಲ್ಲಿ ಕಾಯ ನಿರ್ವಹಿಸಲಿದೆ.

3. ಕೆಪಾಸಿಟಿ ಬಿಲ್ಡಿಂಗ್‌ ತಂಡ:

ಸಾರ್ವಜನಿಕರಿಗೆ ಮಾಹಿತಿ ಕೊರತೆ ಮತ್ತು ಅದರ ಪ್ರಭಾವದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನಗಳನ್ನು (ಕ್ಯಾಂಪೇನ್‌ ಗಳನ್ನು) ನಡೆಸಲಿದೆ.

ಭಾರತದಲ್ಲಿ ನೋಂದಾಯಿತ ಏಜೆನ್ಸಿಗಳಿಗೆ ಮುಕ್ತ ಪ್ರವೇಶವಿದ್ದು, ಕಳೆಗೆ ಸೂಚಿಸಲಾದ ಅರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.

1. ಶಾಸನಬದ್ಧವಾಗಿರಬೇಕು, ಭಾರತದಲ್ಲಿ ನೋದಾಯಿತವಾಗಿರಬೇಕು.

2. ಆಗಸ್ಟ್‌ 31 ಕ್ಕೆ ಅನ್ವಯವಾಗುವಂತೆ ಕನಿಷ್ಟ 3 ವರ್ಷಗಳ ಚಾಲ್ತಿಯಲ್ಲಿರಬೇಕು.

3. ಫ್ಯಾಕ್ಟ್‌ ಚೆಕ್ಕಿಂಗ್‌ ಸೇವೆಯಲ್ಲಿ ನಿರತರಾಗಿರಬೇಕು ಮತ್ತು ಇದೇ ರೀತಿಯ ಚಟುವಟಿಕೆಗಳನ್ನು ಮಾಡಿರುವ ದಾಖಲೆ ಹೊಂದಿರಬೇಕು.

4. ಧನಸಹಾಯದಲ್ಲಿ ಪಾರದರ್ಶಕತೆ- ಕಳೆದ ಮೂರು ಹಣಕಾಸು ವಾರ್ಷಿಕವಾಗಿ ಏಜೆನ್ಸಿಯು ಒಟ್ಟಾರೆ ಆದಾಯದ ತನ್ನ ಲೆಕ್ಕಪತ್ರದಲ್ಲಿ ಸ್ವೀಕರಿಸಿದ ೫% ಅಥವಾ ಹೆಚ್ಚಿನ ಧನಸಹಾಯವು ತಮ್ಮ ವೆಬ್‌ ಸೈಟ್‌ ನಲ್ಲಿ ಲಭ್ಯವಿರಬೇಕು.

5. ಏಜೆನ್ಸಿ ಅಥವಾ ಇವರ ನಿರ್ದೇಶಕರ ವಿರುದ್ಧ ಯಾವುದೇ ಅಪರಾಧ ಪ್ರಕ್ರಿಯೆಗಳು ಅಥವಾ ಯಾವುದೇ ಗಂಭೀರ ಅಪರಾಧ ಅಥವಾ ನೀತಿ ಸಂಹಿತೆ ಅಪರಾಧಗಳ ದಾಖಲೆಗಳು ಇರಬಾರದು.

6. ಇ ಪ್ರೊಕ್ಯೂರ್‌ ಮೆಂಟ್‌ ಪೋರ್ಟಲ್‌ http://kppp.karnataka.gov.in  ನಲ್ಲಿ ಲಭ್ಯವಿರುವ ನಮೂನೆಯಲ್ಲಿ ಭರ್ತಿ ಮಾಡಿದ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಏಜೆನ್ಸಿಗಳು ತಮ್ಮ ಆಸಕ್ತಿಯ ಯಾವುದಾದರೂ ತಂಡಕ್ಕೆ ಭಾಗಿಯಾಗಿ ಅಥವಾ ಎಲ್ಲ ತಂಡಗಳಿಗೂ ಅನ್ವಯಿಸುವಂತೆ ವ್ಯಕ್ತಪಡಿಸಬಹುದು.

ವಿವರಗಳು http://kppp.karnataka.gov.in ಮತ್ತು http://itibtst.karnataka.gov.in ನಲ್ಲಿ ಲಭ್ಯವಿದೆ. ದಾಖಲೆಗಳಲನ್ನು ಸಲ್ಲಿಸಲು ಕಡೆಯ ದಿನಾಂಕ ಅಕ್ಟೋಬರ್‌ 16 ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!