Sunday, September 8, 2024

ನಾಂದೇಡ್‌ ಆಸ್ಪತ್ರೆ ದುರಂತ ಪ್ರಕರಣ : ಪ್ರಚಾರಕ್ಕೆ ಸಾವಿರಾರು ಕೋಟಿ ಬಿಜೆಪಿ ಖರ್ಚು ಮಾಡುತ್ತದೆ, ಬಡವರ ಜೀವಕ್ಕೆ ಬೆಲೆ ಇಲ್ಲ : ರಾಹುಲ್‌ ಕಿಡಿ

ಜನಪ್ರತಿನಿಧಿ ವಾರ್ತೆ : ನಾಂದೇಡ್‌ ಸರ್ಕಾರಿ ಆಸ್ಪತ್ರೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼ ನತಮ್ಮ ಅಧಿಕೃತ ಖಾತೆಯ ಮೂಲಕ ಬೇಸರ ವಕ್ತಪಡಿಸಿದ ರಾಹುಲ್‌, ಬಿಜೆಪಿ ಮಕ್ಕಳ ಔಷಧಿಗೆ ಬೇಕಾಗಿ ಹಣ ನೀಡುವುದಕ್ಕೆ ಹಿಂದೆ ಮುಂದೆ ನೋಡುತ್ತದೆ. ಆದರೇ ತನ್ನ ರಾಜಕೀಯ ಪ್ರಚಾರಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಬಿಜೆಪಿ ದೃಷ್ಟಿಯಲ್ಲಿ ಬಡವರಿಗೆ ಜೀವಗಳಿಗೆ ಇಲ್ಲಿ ಬೆಲೆ ಇಲ್ಲ ಎಂದು ಅವರು ಹೇಳಿದ್ದಾರೆ.  

ಈ ಬಗ್ಗೆ ಮರುಕ ವ್ಯಕ್ತ ಪಡಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ವಾದ್ರಾ ಗಾಂಧಿ, ಮಹಾರಾಷ್ಟ್ರದ ನಾಂದೇಡ್‌ ಸರ್ಕಾರಿ ಆಸ್ಪತ್ರೆಯಲ್ಲಿ 12 ನವಜಾತ ಶಿಶುಗಳು ಮತ್ತು 24 ಜನರು ಮೃತಪಟ್ಟಿರುವುದು ತಿಳಿದು ದುಃಖವಾಗಿದೆ. ಮೃತ ಆತ್ಮಗಳಿಗೆ ಶಾಂತಿ ದೊರಕಲಿ. ಅವರನ್ನು ಕಳೆದುಕೊಂಡಕುಟುಂಬಕ್ಕೆ ಸಂತಾಪ ವ್ಯಕ್ತ ಪಡಿಸುತ್ತೇನೆ. ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಶಿಕ್ಷೆಯಾಗಬೇಕು, ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌,ಇದೊಂದು ಗಂಭೀರವಾದ ವಿಚಾರ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ. ಪ್ರಚಾರಕ್ಕಿಂತ ಮಿಗಿಲಾಗಿ ತಳಮಟ್ಟದಿಂದ ಕೆಲಸ ಮಾಡಬೇಕು ಎಂದು ಬಿಜೆಪಿಯನ್ನು ಟೀಕಿಸಿದೆ.

24ಗಂಟೆಯಲ್ಲಿ 12 ನವಜಾತು ಶಿಶುಗಳು ಸೇರಿ 24 ಮಂದಿ ಸಾವು :

ನಾಂದೇಟ್‌ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅಧಿಕಾರಿಗಳು, 12 ನವಜಾತು ಶಿಶುಗಳನ್ನು ಒಳಗೊಂಡು 24 ಮಂದಿ 24 ಗಂಟೆಯೊಳಗೆ ಮೃತರಾಗಿದ್ದಾರೆ.

ʼಒಂದು ದಿನದಿಂದ ನಾಲ್ಕು ದಿನಗಳ ಒಳಗಿನ 12 ನವಜಾತ ಶಿಶುಗಳು ಮೃತಪಟ್ಟಿವೆ. ತಲಾ ಆರು ಮಂದಿ ಪುರುಷರು ಹಾಗೂ ಮಹಿಳೆಯರು ಕೂಡ ಮೃತ ಮಟ್ಟಿದ್ದಾರೆ. ಈ ಪೈಕಿ ಹೆಚ್ಚಿನವರು ಹಾವಿನ ಕಡಿತಕ್ಕಾಗಿ ಚಿಕಿತ್ಸೆಗಾಗಿ ಬಂದಿದ್ದರು ಎಂದು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಶ್ಯಾಮರಾವ್‌ ವಾಕೋಡೆ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಆಸ್ಪತ್ರೆಯಲ್ಲಿ ಮೃತರ ಸಂಖ್ಯೆ 31ಕ್ಕೆ ಏರಿದೆ. ಔಷಧಿಗಳ ಕೊರೆತೆ ಹಾಗೂ ವೈದ್ಯರ ನಿರ್ಲಕ್ಷ್ಯದಿಂದ ಈ ಆಘಾತಕರ ಘಟನೆ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!