spot_img
Saturday, March 28, 2026
spot_img

ರಾಜ್ಯವನ್ನು ಮತ್ತೊಂದು ತಾಲಿಬಾನ್‌ ಮಾಡಲು ಕಾಂಗ್ರೆಸ್‌ “ಸಿದ್ದ”ವಾಗಿದೆ : ಶಿವಮೊಗ್ಗ ಪ್ರಕರಣದ ಬಗ್ಗೆ ಬಿಜೆಪಿ ಆಕ್ರೋಶ

ಜನಪ್ರತಿನಿಧಿ ವಾರ್ತೆ : ಶಿವಮೊಗ್ಗದ ರಾಗಿಗುಡ್ಡ ಹಾಗೂ ಶಾಂತಿ ನಗರ ಪ್ರದೇಶಗಳಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಗಲಭೆಯ ಹಿನ್ನೆಲೆ ಸದ್ಯ ಶಿವಮೊಗ್ಗ ನಗರದಾದ್ಯಂತ ಸೆಕ್ಷನ್​ 144 ಜಾರಿಯಾಗಿದೆ. ಈ ಪ್ರಕರಣವನ್ನು ಸಣ್ಣ ಘಟನೆ ಎಂದು ಹೇಳಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆಗೆ ರಾಜ್ಯ ಬಿಜೆಪಿ ಈಗ ತೀವ್ರವಾಗಿ ತಿರುಗೇಟು ನೀಡಿದೆ.

ಹಿಂದೂಗಳ ಮನೆಗೆ ಕಲ್ಲೆಸೆಯುವುದು, ಹಿಂದೂಗಳ ಮನೆಗೆ ಬೆಂಕಿ ಹಚ್ಚುವುದು, ಹಿಂದೂಗಳ ಮೇಲೆ ಮನಬಂದಂತೆ ಜಿಹಾದಿಗಳು ಹಲ್ಲೆ ಮಾಡುವುದು, ಗೃಹ ಸಚಿವರಿಗೆ ಸಣ್ಣ ವಿಷಯವಂತೆ ! ಎಂದು ಸಾಮಾಜಿಕ ಜಾಲತಾಣ ʼಎಕ್ಸ್‌ʼ ಅಧಿಕೃತ ಖಾತೆಯ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ.

ಇನ್ನೂ ಮುಂದುವರಿದು  ಕಾಂಗ್ರೆಸ್‌ನನ್ನು ಟೀಕಿಸಿದ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ, ಬಂದಿದ್ದು, ಭಯೋತ್ಪಾದಕರಿಗೆ ಹಾಗೂ ಜಿಹಾದಿ ರಕ್ಕಸರಿಗೆ ಕರ್ನಾಟಕ ಸ್ವರ್ಗವಾಗಿ ಮಾರ್ಪಟ್ಟಿದೆ ಎಂದಿದೆ.

ಉಡುಪಿಯಲ್ಲಿ ಹಿಂದೂ ಯುವತಿಯರ ಖಾಸಗಿ ವಿಡಿಯೋಗಳ ರಹಸ್ಯ ಚಿತ್ರೀಕರಣ. ರಾಮನಗರದಲ್ಲಿ  ಹಾಡುಹಗಲೇ ಗೋವುಗಳ ಕಳ್ಳತನ ಹಾಗೂ ವಧೆ. ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್‌ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಗುಂಪು ಹಲ್ಲೆ. ಭದ್ರಾವತಿಯಲ್ಲಿ ಹಿಂದೂ ಯುವಕನ ಮೇಲೆ, ಜಿಹಾದಿ ಸಂಘಟನೆಗಳಿಂದ ಮಾರಣಾಂತಿಕ ಹಲ್ಲೆ. ಹಾಸನದಲ್ಲಿ ಹಾಡುಹಗಲೇ ಗನ್‌ ಹಿಡಿದು, ಜಿಹಾದಿ ಯುವಕರಿಂದ ಪುಂಡಾಟ. ಚಿಕ್ಕಬಳ್ಳಾಪುರದಲ್ಲಿ ಹಿಂದೂ ಯುವಕನ ಮೇಲೆ ಜಿಹಾದಿಗಳ ನೈತಿಕ ಪೊಲೀಸ್‌ ಗಿರಿ. ಶಿವಮೊಗ್ಗದಲ್ಲಿ ಹಿಂದೂಗಳ ಮನೆ, ವಾಹನಗಳ ಮೇಲೆ ಕಲ್ಲೆಸೆತ – ತಲ್ವಾರ್‌ನಿಂದ ಕೊಲೆ ಯತ್ನಗಳನ್ನು ಭಾವನಾತ್ಮಕವಾದ ಬ್ಲ್ಯಾಕ್‌ಮೇಲ್‌ ಮಾಡಿದಂತೆ ಜನರ ಎದುರು ಬಿಚ್ಚಿಟ್ಟಿದೆ.

ತಾವೆಂತಹ ದೇಶದ್ರೋಹದ ಕೆಲಸವನ್ನು ಮಾಡಿದರೂ, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲಕ್ಕಿರಲಿದೆ ಎಂಬ ಕಾರಣಕ್ಕೆ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಕರ್ನಾಟಕವನ್ನು ಮತ್ತೊಂದು ತಾಲಿಬಾನ್‌ ಮಾಡಲು ಕಾಂಗ್ರೆಸ್‌ “ಸಿದ್ದ”ವಾಗಿ ನಿಂತಂತೆ ಕಾಣುತ್ತಿದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿಡಿದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!