spot_img
Saturday, March 28, 2026
spot_img

ʼಅಭಿರಾಮಚಂದ್ರʼ ಪ್ರೀಮಿಯರ್‌ ಶೋ : ಅಕ್ಟೋಬರ್‌ 6ಕ್ಕೆ ರಾಜ್ಯಾದ್ಯಂತ ಸಿನೆಮಾ ತೆರೆಗೆ.

ಜನಪ್ರತಿನಿಧಿ ವಾರ್ತೆ :  ʼಅಭಿರಾಮಚಂದ್ರʼ ಎಂಬ ಕನ್ನಡ ಸಿನೆಮಾದ ಪ್ರೀಮಿಯರ್‌ ಶೋ ಕುಂದಾಪುರದ ಭಾರತ್‌ ಸಿನೆಮಾಸ್‌ ನಲ್ಲಿ ಇಂದು (ಅ. 02, ಸೋಮವಾರ) ನಡೆಯಿತು.

ಪ್ರೀಮಿಯರ್‌ ಶೋ ನನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಸಿನೆಮಾವನ್ನು ಉದ್ದೇಶಿಸಿ ಮಾತನಾಡಿದ ಅವರು,ನಮಗೆ ಧಾರಾಳವಾಗಿ ಮಾಡಬಹುದಾದ ಸುಲಭದ ಕೆಲಸ ಯಾವುದು ಅಂದರೆ, ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಕೊಡುವುದು ಮತ್ತು ಪ್ರೋತ್ಸಾಹಿಸುವುದು. ಈ ಸಿನೆಮಾ ಕರಾವಳಿಯಿಂದ ಹುಟ್ಟುವ ಕಥೆಯನ್ನು ಆಧರಿಸಿಕೊಂಡಿದೆ. ಸಿನೆಮಾ ಹೊರತರುವಲ್ಲಿ ನಿರ್ದೇಶಕರು ಮತ್ತು ಇಡೀ ತಂಡದ ಶ್ರಮಕ್ಕೆ ಜಯ ಸಿಗಲಿ ಎಂದು ಅವರು ಶುಭ ಹಾರೈಸಿದರು.  

ಈ ಸಂದರ್ಭದಲ್ಲಿದ್ದು ಸಿನೆಮಾ ತಂಡವನ್ನು ಉದ್ದೇಶಿಸಿ ಮಾತನಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು, ಅಭಿರಾಮಚಂದ್ರ, ಸಿನೆಮಾದ ಗಟ್ಟಿತನವೇ ಸಿನೆಮಾದ ಪರಿಶ್ರಮವನ್ನು ತೋರಿಸುತ್ತದೆ. ವಾಸ್ತವಕ್ಕೆ ಹತ್ತಿರವಾಗಿರುವ ಕಥೆಯಾಗಿ ಈ ಸಿನೆಮಾ ಗೆಲ್ಲುತ್ತದೆ ಎಂಬ ಭರವಸೆ ಇದೆ. ಹೊಸ ತಂಡದ ದಾರಿಗೆ ಬೆಳಕು ತೋರುವ ಶಕ್ತಿ ಇಂತಹ ಸಿನೆಮಾಕ್ಕಿದೆ ಎಂದು ಅವರು ಹೇಳಿದರು.  

ಸಿನೆಮಾ ನಿರ್ದೇಶಕ ನಾಗೇಂದ್ರ ಗಾಣಿಗ, ನಟ ರಥಕಿರಣ್, ಸಿದ್ದು ಮೂಲಿಮನೆ, ನಾಟ್ಯರಂಗ, ನಟಿ ಶಿವಾನಿ ರೈ, ಶಿಲ್ಪ ಶೆಟ್ಟಿ,  ಹಿರಿಯ ನಟ ಪ್ರಭಾಕರ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರೀಮಿಯರ್‌ ಶೋ ನಡೆಯಿತು. ಆಹ್ವಾನಿತರು, ಸಿನೆಮಾ ಅಭಿಮಾನಿಗಳು ಸಿನೆಮಾವನ್ನು ಕಣ್ತುಂಬಿಕೊಂಡರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!