spot_img
Saturday, March 28, 2026
spot_img

ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ‘ನಾಡಪ್ರಭು ಕೆಂಪೆಗೌಡ ರಾಜ್ಯಪ್ರಶಸ್ತಿ’ ಪ್ರದಾನ

ಕುಂದಾಪುರ : ಪ್ರಸಂಗಕರ್ತ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರು ಸತತ 38 ವರ್ಷಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾರಣ ಇತ್ತೀಚೆಗೆ ಬೆಂಗಳೂರು ಹಂಪಿ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೆಗೌಡ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕರಾದ ಸತೀಶ್ ಕುಮಾರ್ ಹೊಸ್ಮನೆಯವರು ಪ್ರದಾನ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಕೃಷ್ಣಪ್ಪನವರು ವಹಿಸಿದ್ದರು. ಮಧುಸೂಧನ ನಂದಾಪುರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಡಾ. ಆಚಾರ್ಯ ಮಹಾ ಮಂಡಲೇಶ್ವರ ಸ್ವಾಮೀಜಿಯವರು ಶುಭ ಹಾರೈಸಿದರು.

ಚಲನಚಿತ್ರ ನಿರ್ಮಾಪಕ ಮಹೇಂದ್ರ ಮುನ್ನೋತ್, ಹುಬ್ಬಳಿ ಶಾಂತಿನಿಕೇತನ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಡಾ. ಕ್ಯಾಥರಿನ್ ದಿನೇಶ್, ಚಿತ್ರನಟ, ಖ್ಯಾತ ಗಾಯಕರಾದ ಡಾ. ಶಶಿಧರ್ ಕೋಟೆ, ಎಂ.ಎಸ್. ಡೆವೆಲಪರ್‍ಸ್ ಮಿರಾಡೆ, ಸಮಾಜ ಸೇವಕರಾದ ಪ್ರವೀಣ್ ಶೆಟ್ಟಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ಎಚ್.ಎನ್.ಬಸವರಾಜ್, ಸಂಗೀತ ಹಾಗೂ ನೃತ್ಯ ನಿದೇರ್ಶಕ ಯಾದಗಿರಿ ಗೋಪಾಲ್ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಡಾ. ಸುದರ್ಶನ ಯಾದವ್ ಸ್ವಾಗತಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!