spot_img
Saturday, March 28, 2026
spot_img

ಕೆರ್ಜಾಡಿ ಗರಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ: ಸಾಧಕರಿಗೆ ಸನ್ಮಾನ


ಕುಂದಾಪುರ: ಬ್ರಹ್ಮ ಬೈದರ್ಕಳ ಗರಡಿ ಕೆರ್ಜಾಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಬೆಳ್ವೆ ವಲಯ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಜೀವ ಪೂಜಾರಿ ಶೇಡಿಮನೆ ವಹಿಸಿದ್ದರು. ಜೆ.ಸಿ.ಐ ಹೆಬ್ರಿ ಇದರ ಪೂರ್ವ ಅಧ್ಯಕ್ಷರು, ವಲಯ ತರಬೇತುದಾರರಾದ ಪ್ರಕಾಶ್ ಪೂಜಾರಿ ಗುರುತತ್ವ ಸಂದೇಶವನ್ನು ನೀಡಿದರು.

ಕುಂದಾಪುರ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಅಶೋಕ್ ಬೀಜಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಸ್ಥಾಪನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಕೃಷ್ಣ ಪೂಜಾರಿ ಅಮಾವಾಸೆಬೈಲು, ಗರಡಿ ಅಧ್ಯಕ್ಷರಾದ ಜಯಂತ ಹೆಗ್ಡೆ, ಶೇಡಿಮನೆ, ಸಂಘದ ಕಾರ್ಯದರ್ಶಿ ಉದಯ್ ಪೂಜಾರಿ ಶಾಂದ್ರಬೆಟ್ಟು, ಸಂಘದ ಗೌರವ ಸಲಹೆಗಾರ ಉದಯಕುಮಾರ್ ಪೂಜಾರಿ ಬೆಳ್ವೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಡಾ.ಸಿಂಚನ್ ಪೂಜಾರಿ ಹಾಗೂ ನಾಟಿ ವೈದ್ಯರಾದ ರಾಜು ಕೊಠಾರಿ ಅವರನ್ನು ಸನ್ಮಾನಿಸಲಾಯಿತು. ಮುದ್ದುಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳನ್ನು ಅಭಿನಂದಿಸಲಾಯಿತು.

ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಪೂಜಾರಿ ಪಾಟ್ಲಮಕ್ಕಿ ಸ್ವಾಗತಿಸಿದರು. ಆನಂದ ಪೂಜಾರಿ ಜಟ್ಟಿನಹಾಡಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!