Sunday, September 8, 2024

ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ನಿಷ್ಕ್ರೀಯತೆಯೇ ಕಟ್ಟಡ ಸಾಮಾಗ್ರಿಗಳ ಪೂರೈಕೆ ಸಮಸ್ಯೆಗಳಿಗೆ ಕಾರಣ : ವಿಕಾಸ್‌ ಹೆಗ್ಡೆ ಆರೋಪ

ಜನಪ್ರತಿನಿಧಿ ವಾರ್ತೆ : ಹಲವು ವರ್ಷಗಳ ಗಣಿ ಮತ್ತು ಖನಿಜ ಕಾಯ್ದೆಯಲ್ಲಿನ ಸಡಲೀಕರಣದ ಬೇಡಿಕೆಗೆ ಸ್ಪಂದಿಸಬೇಕಾದ ಶಾಸನ ಸಭೆಯ ಸದಸ್ಯರುಗಳ ನಿಷ್ಕ್ರೀಯತೆಯೇ ಕಟ್ಟಡ ಸಾಮಾಗ್ರಿಗಳ ಪೂರೈಕೆ ಸಮಸ್ಯೆಗಳಿಗೆ ಕಾರಣ. ಜನರು ಶಾಸಕರನ್ನು ಅವರ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ. ಅಧಿವೇಶನದಲ್ಲಿ ಪ್ರಶ್ನೆ ಮಾಡಿ, ಶೂನ್ಯ ವೇಳೆ, ನಿಯಮ 330ರ ಅಡಿಯಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಿಗಿಸಿಕೊಡುವುದಕ್ಕಾಗಿ. ಅದನ್ನು ಬಿಟ್ಟು ಜಿಲ್ಲೆಯ ಐದು ಶಾಸಕರು ಧರಣಿ ನಿರತರ ಜೊತೆಗೆ ಫೋಟೋ ತೆಗೆಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಜಿಲ್ಲಾಡಳಿತ, ಪೊಲೀಸ್‌ ಅಥವಾ ಗಣಿ ಮತ್ತು ಭೂ ವಿಜ್ಙಾನ ಇಲಾಖೆಯವರಿಗೆ ಮರಳು,  ಕಲ್ಲು, ಜಲ್ಲಿ, ಮಣ್ಣು ಮೊದಲಾದವುಗಳ ಸಾಗಾಣಿಕೆಗೆ ಕಾನೂನು ಮೀರಿ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಈ ಬಗ್ಗೆ ಇಲ್ಲಿನ ಐದೂ ಶಾಸಕರಿಗೆ ನೈಜ ಕಾಳಜಿ ಇದ್ದಿದ್ದರೇ ಕಳೆದ ಬಾರಿ ಬಿಜೆಪಿ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗಲೇ ಗಣಿ ಮತ್ತು ಖನಿಜ ಕಾಯ್ದೆಯಲ್ಲಿ ಸುಧಾರಣೆ ತರುವುದನ್ನು ಮಾಡಬೇಕಿತ್ತು. ಕೇಂದ್ರದಲ್ಲಿ ಇವರದ್ದೇ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಸಿಆರ್‌ಝಡ್‌ ಮರಳುಗಾರಿಕೆಯ ನೀತಿಯಲ್ಲಿನ ಸಡಲೀಕರಣದ ಜವಾಬ್ದಾರಿ ಇರುವುದು ಕೇಂದ್ರ ಸರ್ಕಾರಕ್ಕೆ. ಮನಸ್ಸು ಮಾಡಿದರೆ, ಸರ್ಕಾರವನ್ನು ಒತ್ತಾಯಿಸಿ ಈ ಸಮಸ್ಯೆಗಳಿಗೆ ಪರಿಹಾರ ತಂದುಕೊಡಬಹದು. ಅದನ್ನು ಬಿಟ್ಟು ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಅಧಿಕಾರಿಗಳಿಂದ ತಪ್ಪು ಮಾಡಿಸುವುದನ್ನು ಮನಸ್ಥಿತಿ ಹೊಂದಿದ್ದಾರೆ. ಜಿಲ್ಲೆಯ ಶಾಸಕರ ಈ ಮನಸ್ಥಿತಿ ಸಂವಿಧಾನ ವಿರೋಧಿ ನಿಲುವು ಎಂದು ಅವರು ಕಿಡಿ ಕಾರಿದ್ದಾರೆ.

ಹಿಂದೆ ಕೃಷಿ ಭೂಮಿ ಸಮತಟ್ಟು ಮಾಡುವುದಕ್ಕೆ, ರೈತ ಬಾವಿ ತೋಡಲು ಹಿರಿಯ ಭೂ ವಿಜ್ಙಾನಿಯ ಅನುಮತಿ ಅಗತ್ಯ ಏನಿತ್ತು. ಹಿಂದೆ ಸರ್ಕಾರ ಶೇಂದಿ ನಿಷೇಧ ಮಾಡಿದಾಗೀ ಜಿಲ್ಲೆಯ ಮೂರು ಕಾಂಗ್ರೆಸ್‌ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದಾಹರಣೆ ನಮ್ಮ ಮುಂದಿದೆ. ಇನ್ನಾದರೂ ಜಿಲ್ಲೆಯ ಚುನಾಯಿತ ಶಾಸಕರು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ತಂದುಕೊಡುವಲ್ಲಿ ಪ್ರಾಮಾಣಿಕ ಕೆಲಸ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!