Sunday, September 8, 2024

ಆಯುಷ್ಮಾನ್‌ ಭವ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳ ಮನವಿ

ಜನಪ್ರತಿನಿಧಿ ವಾರ್ತೆ : ಉಡುಪಿ ಜಿಲ್ಲೆಯಲ್ಲಿ ದಿನಾಂಕ 17.09.2023ರಿಂದ ಆಯುಷ್ಮಾನ್‌ ಭವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಜನಸಾಮಾನ್ಯರಿಗೆ ಉಚಿತವಾಗಿ ವಿವಿಧ ಆರೋಗ್ಯ ಸೇವೆಗಳನ್ನು ತಲುಪಿಸುವ ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರ, 62 ಪ್ರಾಥಮಿಕ ಆರೋಗ್ಯ ಕೇಂದ್ರ, 2 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 249ಆರೋಗ್ಯ ಮತ್ತು ಕ್ಷೇಮ ಉಪ ಕೇಂದ್ರಗಳಲ್ಲಿ ನಿರಂತರವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಇನ್ನು, ಮನೆ ಮನೆಗೆ ಭೇಟಿ ನೀಡಿ PMJAY ಕಾರ್ಡ್‌ಗಳ ಬಗ್ಗೆ ಅರಿವು ಮೂಡಿಸಿ ಗ್ರಾಮ ಒನ್‌ ಸೆಂಟರ್‌ ಗಳಲ್ಲಿ PMJAY ಕಾರ್ಡ್‌ ಗಳನ್ನು ಮಾಡಿಕೊಡಲಾಗುತ್ತಿದೆ. ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಷ ವೈದ್ಯರುಗಳಿಂದ ಶಿಬಿರವನ್ನು ಆಯೋಜಿಸಲಾಗಿದೆ. ಸ್ವಚ್ಛತಾ ಸಪ್ತಾಹ ಅಂಗವಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕೇಂದ್ರದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌, ಜೀವನ ಶೈಲಿ ನಿರ್ವಹಣೆ, ಕ್ಷಯ ರೋಗ, ಕುಷ್ಠರೋಗ, ಕಣ್ಣು ಚರ್ಮ ಮುಂತಾದ ರೋಗಗಳ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳು, ಅಂಗಾಂಗದಾನ ನೊಂದಣಿಗಳು ಈಗಾಗಲೇ ನಡೆಯುತ್ತಿದೆ. ಮುಂದೆಯೂ ಸಹ ಆಯುಷ್ಮಾನ್‌ ಭವ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಡಳಿತ ಕರೆ ನೀಡಿದೆ.

ಶಿಬಿರ ನಡೆಯುವ ಸ್ಥಳ ಮತ್ತು ದಿನಾಂಕ

ಬಿಜೂರು ( ಬೈಂದೂರು) – 28.09.2023

ಬನ್ನಂಜೆ ನಾರಾಯಣ ಗುರು ಸಭಾಭವನ (ಉಡುಪಿ), ಪ್ರಾ. ಆ. ಕೇಂದ್ರ ಶಂಕರನಾರಾಯಣ, ಪ್ರಾ. ಆ.ಕೇಂದ್ರ ಹಿರೆಬೆಟ್ಟು  – 01.10.2023

ಕೆಮ್ಮಣ್ಣು, ವಂಡ್ಸೆ, ಗುಜ್ಜಾಡಿ – 03.10.2023

ನಂದಳಿಕೆ, ಬಿದ್ಕಲ್ಕಟ್ಟೆ – 05.10.2023

ಹೆಮ್ಮಾಡಿ(ಗಂಗೊಳ್ಳಿ), ಬೆಳ್ಮಣ್ಣು – 06.10.2023

ಕಂಡ್ಲೂರು, ಹಿರ್ಗಾನ – 08.10.2023

ಅಮಾಸೆಬೈಲು, ಹಾಲಾಡಿ – 09.10.2023

ಮರವಂತೆ, ಹಕ್ಲಾಡಿ, ಮಣಿಪುರ, ಸಾಯಬರಕಟ್ಟೆ, ಆಜ್ರಿ(ಸಿದ್ದಾಪುರ), ಇನ್ನಾ, ಉಚ್ಚಿಲ(ಪಡುಬಿದ್ರೆ) -10.10.2023

ಹಳ್ಳಿಹೊಳೆ – 11.10.2023

ಗಂಗೊಳ್ಳಿ, ಮಡಾಮಕ್ಕಿ (ಬೆಳ್ವೆ) – 12.10.2023

ಕೊರಂಗ್ರಪಾಡಿ ಮಣಿಪುರ – 15.10.2023

ಕುಚ್ಚೂರು(ಹೆಬ್ರಿ), ಬಹಗೋಳಿ, ಮರವಂತೆ – 17.10.2023

ತೆಕ್ಕಟ್ಟೆ(ಕುಂಭಾಶಿ) –18.10.2023

ಕೋಟೇಶ್ವರ – 20.10.2023

ಬಿದ್ಕಲ್‌ ಕಟ್ಟೆ, ದುರ್ಗಾ, ವಂಡ್ಸೆ – 25.10.2023

ಬಡಾಕೆರೆ (ನಾಡಾ) – 26.10.2023

ಮಂದಾರ್ತಿ, ವಕ್ವಾಡಿ, ಕೊರ್ಗಿ –  31.10.2023

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!