Sunday, September 8, 2024

ಪರಿಸರ ಸಂರಕ್ಷಣೆಯಲ್ಲಿ ಮನುಕುಲದ ಉಳಿವು ಇದೆ : ಅಹ್ಲೂವಾಲಿಯ | ತಲ್ಲೂರು ನುಡಿಮಾಲೆ -2023 ಕಾರ್ಯಕ್ರಮ | ʼಎಂ. ಡಾಕ್ಯುಮೆಂಟ್‌ʼ ಪುಸ್ತಕ ಬಿಡುಗಡೆ  

ಜನಪ್ರತಿನಿಧಿ ವಾರ್ತೆ :  ದೇಶದ ಆರ್ಥಿಕ ಸುಧಾರಣೆ ಅಗತ್ಯವಿದೆ. ಚೀನಾ ಹಾಗೂ ಅಮೆರಿಕಾ ದೇಶಗಳ ಆರ್ಥಿಕತೆಗೆ ತುಲನೆ ಮಾಡಿದರೆ ಭಾರತ ಇನ್ನೂ ಹಿಂದಿದೆ. ದೇಶದ ಆರ್ಥಿಕ ಚೇತರಿಕೆಗಾಗಿ ಹೂಡಿಕೆ ಕ್ಷೇತ್ರಗಳ ಮೇಲೆ ಹೆಚ್ಚು ಒತ್ತು ನೀಡಬೇಕು. ಮೂಲ ಸೌಕರ್ಯ ಕ್ಷೇತ್ರಗಳ ಚೇತರಿಕೆ ಆಗಬೇಕು ಎಂದು ಅರ್ಥಶಾಸ್ತ್ರಜ್ಞ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲೂವಾಲಿಯ ಅಭಿಪ್ರಾಯ ಪಟ್ಟರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.) ತಲ್ಲೂರು, ಕರಾವಳಿ ಕಟ್ಟು ಬಳಗ, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ಟೌನ್ ಹಾಲ್ ಅಜ್ಜರಕಾಡು ಉಡುಪಿಯಲ್ಲಿ ನಡೆದ ತಲ್ಲೂರು ನುಡಿಮಾಲೆ -2023 ಕಾರ್ಯಕ್ರಮದಲ್ಲಿ ‘ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿಗೆ ಹೊಸ ಸವಾಲುಗಳು’ ಉಪನ್ಯಾಸವನ್ನು ಉದ್ದೇಶಿಸಿ ಅವರು ಮಾತನಾಡಿದರು.‌

೨೦೪೭ರೊಳಗೆ ವಿಶ್ವ ಮಟ್ಟದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಅದರಲ್ಲಿ ವಿಶೇಷತೆ ಏನಿಲ್ಲ. ದೇಶದ ಆರ್ಥಿಕ ಅಭಿವೃದ್ಧಿಯ ದರ ಸದ್ಯ ಇರುವ ವೇಗದಲ್ಲಿಯೇ ನಡೆದರೆ ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಉದ್ಯಮ ಕ್ಷೇತ್ರಗಳಲ್ಲಿ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಕೆಲಸ ದೇಶಕ್ಕೆ ತುರ್ತಿದೆ. ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ವಹಿವಾಟಿನಲ್ಲಿ ಪಾಲುದಾರಿಕೆಯನ್ನು ಹೊಂದುವುದು ಅಗತ್ಯವಿದೆ. ಈ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಎದುರಾಗುತ್ತಿರುವ ಅಡತಡೆಗಳನ್ನು ನಿರ್ಮೂಲನೆ ಮಾಡಬಹುದು ಎಂದರು.

ದಿಜಿಟಲ್‌ ಕಡೆಗೆ ದೇಶದ ಆರ್ಥಿಕತೆ ೧೯೯೧ರ ನಂತರ ಹೆಚ್ಚು ಒತ್ತು ನೀಡಿ ಬೆಳೆಯಿತು. ತಂತ್ರಜ್ಙಾನ ಆಧಾರಿತ ಆವಿಷ್ಕಾರಗಳು ಉದ್ಯಮ ಕ್ಷೇತ್ರಗಳಲ್ಲಿ ಹೆಚ್ಚಾಗಿ ಆರಂಭವಾಯಿತು. ಈ ಹಂತದಲ್ಲಿ ಆರ್ಥಿಕತೆಗೆ ಎದುರಾದ ಹಲವು ಸವಾಲುಗಳು ಭವಿಷ್ಯದ ಆರ್ಥಿಕ ಪ್ರಗತಿಯ ಮುನ್ನೋಟಕ್ಕೆ ಮಾರ್ಗದರ್ಶಿಯಾಗುತ್ತದೆ. ದೇಶದ ಆರ್ಥಿಕ ಸ್ಥಿತಿ ಮತ್ತು ಅದಕ್ಕೆ ಪೂರಕವಾದ ವಾತಾವರಣ ಅಗತ್ಯವಾಗಿ ಸೃಷ್ಟಿ ಮಾಡುವ ತುರ್ತಿದೆ ಎಂದು ಅವರು ಹೇಳಿದರು.

ಇನ್ನು, ಕಚ್ಚಾತೈಲಗಳ ಮೇಲೆ ಅವಂಬನೆಯನ್ನು ಕಡಿಮೆಗೊಳಿಸಿ ಪ್ರರ್ಯಾಯ ವ್ಯವಸ್ಥೆಯ ಮೂಲಕವೂ ದೇಶ ಅಭಿವೃದ್ಧಿಯನ್ನು ಕಾಣಬಹುದು. ಕಾರ್ಬನ್‌ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಹವಮಾನ ಬದಲಾವಣೆ ಜಗತ್ತಿಗೆ ಭವಿಷ್ಯದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ೨೦೭೦ರ  ಹೊತ್ತಿಗೆ ದೇಶ ಜ್ಹೀರೋ ಕಾರ್ಬನ್‌ ಗುರಿ ಇಟ್ಟುಕೊಂಡಿರುವುದು ಸ್ತುತ್ಯಾರ್ಹ. ಪರಿಸರ ಸಂರಕ್ಷಣೆಯಲ್ಲಿ ಮನುಕುಲದ ಉಳಿವು ಇದೆ. ವಿಶ್ವ ಶೀಘ್ರಮುಖವಾಗಿ ಕಾರ್ಬನ್ ಮುಕ್ತವಾಗದೆ ಇದ್ದರೇ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ಖಚಿತ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.   

ಮೊಂಟೆಕ್ ಸಿಂಗ್ ಅಹ್ಲೂವಾಲಿಯ ಅವರ ʼಬ್ಯಾಕ್‌ಸ್ಟೇಜ್‌ʼ ಕೃತಿಯ ಅನುವಾದಿತ ಕೃತಿ ʼಎಂ. ಡಾಕ್ಯುಮೆಂಟ್‌ʼ ಪುಸ್ತಕವನ್ನು ಪರಿಚಯಿಸಿ, ಸಂವಾದ ನಡೆಸಿಕೊಟ್ಟ ಆರ್ಥಿಕ ತಜ್ಙ, ಐಐಎಂಬಿ ಯ ಪ್ರೊ. ಎಂ ಎಸ್.‌ ಶ್ರೀರಾಮ್ ಮಾತನಾಡಿ, ದೇಶದ ಆರ್ಥಿಕ ಚರಿತ್ರೆಯ ಕುರಿತಾದ ಗಂಭೀರವಾದ ಪುಸ್ತಕ ಕನ್ನಡಕ್ಕೆ ಬರುವುದು ಅಗತ್ಯ. ‌ದೇಶದ ಆರ್ಥಿಕ ಸುಧಾರಣೆ ಹೇಗೆ ಆಗಬೇಕು ಎನ್ನುವ ಮಾರ್ಗದರ್ಶನ ಈ ಪುಸ್ತಕ ಕೊಡುತ್ತದೆ. ಕನ್ನಡದ್ದೇ ಪುಸ್ತಕ ಎಂಬಷ್ಟರ ಮಟ್ಟಿಗೆ ಈ ಕೃತಿ ಹೊರಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಕಣಕಾರ ರಾಜಾರಾಂ ತಲ್ಲೂರು, ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.)ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದ ಕಟ್ಟೆ, ಕಲಾವಿದ ಎಲ್. ಎನ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.  

2023ರೊಳಗೆ ದೇಶ ಶೇ.30ರಷ್ಟು ಎಲಕ್ಟ್ರಾನಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿಯನ್ನು ಹೊಂದಿದೆ. ಸದ್ಯ ಪ್ರತಿ ವರ್ಷ ಕೇವಲ ಶೇ. 1ರಷ್ಟು ಮಾತ್ರ ಎಲೆಕ್ಟ್ರಾನಿಕ್‌ ವಾಹನಗಳು ಮಾರುಕಟ್ಟೆಯಲ್ಲಿ ಇವೆ. ಇದೇ ವೇಗದಲ್ಲಿ ಸಾಗಿದರೆ ದೇಶದ ಈ ಗುರಿಯನ್ನು ತಲುಪಬಹುದೇ ?

-ಮೊಂಟೆಕ್‌ ಸಿಂಗ್‌ ಅಹ್ಲೂವಾಲಿಯ

ನಾನು ವಿಜ್ಞಾನದ ವಿದ್ಯಾರ್ಥಿ, ಅರ್ಥಶಾಸ್ತ್ರದ ಬಗ್ಗೆ ಹೆಚ್ಚಿನ ಅರಿಕೆಗೂ ಮೊಂಟೆಕ್‌ ಸಿಂಗ್‌ ಅಹ್ಲೂವಾಲಿಯ ಬ್ಯಾಕ್ಸಸ್ಟೇಜ್‌ ಕೃತಿಯ  ಅನುವಾದ ಸಹಕರಿಸಿದೆ. ಆರ್ಥಿಕ ಚರಿತ್ರೆಯ ಪುಸ್ತಕವಾದರೂ ಇದು ಇವತ್ತಿಗೂ ಪ್ರಸ್ತುತ. ದೇಶದ ಆರ್ಥಿಕ ಸನ್ನಿವೇಶಗಳ ಅರ್ಥ ಮಾಡಿಕೊಳ್ಳುವುದಕ್ಕೆ ಈ ಪುಸ್ತಕ ಸಹಕಾರಿಯಾಗಬಹುದು. ವರ್ತಮಾನದ‌ ತುರ್ತಿನ ಓದಿಗೆ ದಕ್ಕಬೇಕಾದ‌ ಕೃತಿ. ಉದಾರೀಕರಣದ ಒಳ್ಳೆಯ ಚರ್ಚೆಯನ್ನು ಈ ಕೃತಿ ಹುಟ್ಟಿಸಬಹುದು.

ರಾಜರಾಂ ತಲ್ಲೂರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!