Sunday, September 8, 2024

ವಂಡ್ಸೆಯಲ್ಲಿ ಶ್ರೀಯಾ ಕನ್ವೆನ್‌ಷನ್ ಹಾಲ್ ಉದ್ಘಾಟನೆ

ಕುಂದಾಪುರ, ಸೆ.24: ಹೋಬಳಿ ಕೇಂದ್ರವಾಗಿರುವ ವಂಡ್ಸೆಗೆ ತಾಲೂಕು ಕೇಂದ್ರವಾಗುವ ಎಲ್ಲ ಆರ್ಹತೆಗಳನ್ನು ಹೊಂದಿದೆ. ಬೆಳೆಯುತ್ತಿರುವ ವಂಡ್ಸೆಯ ಪ್ರಗತಿಗೆ ಮೂಲ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಈ ಸಭಾಭವನ ಸಹಕಾರಿಯಾಗಲಿದೆ. ಕಲ್ಮಾಡಿ ಪೂಜಾರಿ ಮನೆ ಕುಟುಂಬಸ್ಥರು ಧರ್ಮ, ಪರೋಪಕಾರಕ್ಕೆ ಪ್ರಸಿದ್ದರು. ಈ ಕುಟುಂಬದ ಗೋಪಾಲ ಪೂಜಾರಿಯವರು ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜಕ್ಕೆ ಕಲ್ಮಾಡಿ ಮನೆತನದವರ ಕೊಡುಗೆ ಸಾಕಷ್ಟಿದೆ. ಶ್ರೀಯಾ ಕನ್ವೆನ್‌ಷನ್ ಹಾಲ್ ವಂಡ್ಸೆಗೆ ಮಹತ್ವದ ಕೊಡುಗೆ ಎಂದು ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ಅವರು ಸೆ.24ರಂದು ವಂಡ್ಸೆಯಲ್ಲಿ ಕಲ್ಮಾಡಿ ಪಂಜು ಪೂಜಾರಿ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

ಎಂ.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಚಿತ್ತೂರು ಇದರ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಸಭಾಭವವನ್ನು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ ವಂಡ್ಸೆಗೊಂದು ಸಭಾಭವನ ಅಗತ್ಯದ ಅವಶ್ಯಕತೆ ಇತ್ತು. ಅದು ಈಗ ಈಡೇರಿದೆ. ಜನರ ಅಗತ್ಯತೆಗಳನ್ನು ಪೂರೈಸಿದಾಗ ಊರಿನ ಆರ್ಥಿಕ ಅಭಿವೃದ್ದಿಯೂ ಸಾಧ್ಯವಾಗುತ್ತದೆ. ಈ ಸಭಾಂಗಣ ಯಶಸ್ವಿಯಾಗಿ ಮುನ್ನೆಡೆಯಲಿ ಎಂದರು.

ಹವಾನಿಯಂತ್ರಿತ ಸಭಾಭವನವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಸಭಾಭವನದಿಂದ ಪ್ರತ್ಯೆಕ್ಷ ಹಾಗೂ ಪರೋಕ್ಷವಾಗಿಯೂ ಪ್ರಯೋಜನವಾಗುತ್ತದೆ. ಗ್ರಾಮಾಂತರ ಪ್ರದೇಶದ ಆರ್ಥಿಕತೆ ಬೆಳೆಯಲು ಕಾರಣವಾಗುತ್ತದೆ. ಆರ್ಥಿಕ ಚಟುವಟಿಕೆಗಳು ಸಕ್ರಿಯಗೊಳ್ಳುತ್ತದೆ. ಸಾಧನೆ ಮಾಡುವ ಕನಸುಗಳು ಮೂಡಿದಾಗ ವ್ಯವಹಾರಿಕವಾಗಿಯೂ ಪ್ರಗತಿ ಹೊಂದಲು ಸಾಧ್ಯ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಂಡ್ಸೆಯಿಂದ ಬಾಳಿಕೆರೆ ತನಕ ನದಿ ಭಾಗವನ್ನು ಕಟ್ಟುವ ನದಿ ಸಂರಕ್ಷಣೆಗೆ ಒತ್ತು ನೀಡುವ ಬೇಡಿಕೆ ಜನರಿಂದ ವ್ಯಕ್ತವಾಗಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯ ಮೂಲಕ ಬಗ್ವಾಡಿ, ಕೊಡೇರಿಗಳಲ್ಲಿ ಅನುಮೋದನೆ ದೊರೆಯುವ ಹಂತದಲ್ಲಿದೆ. ವಂಡ್ಸೆಯ ಅರಣ್ಯ ಇಲಾಖೆಯ ಡಿಪೋ ಸ್ಥಳದಲ್ಲಿ ಸರ್ಕಾರಿ ಕಛೇರಿಗಳು ನಿರ್ಮಾಣವಾದರೆ ಅನುಕೂಲ. ಆ ಹಿನ್ನೆಲೆಯಲ್ಲಿ ಪರ್ಯಾಯ ಸ್ಥಳವನ್ನು ಗುರುತಿಸಿ,, ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಪುತ್ರನ್ ಮಾತುಗಳನ್ನಾಡಿ , ಊರಿಗೆ ನೀಡುವ ಕೊಡುಗೆ ಶಾಶ್ವತವಾಗಿರುತ್ತದೆ. ನಮ್ಮ ಕೊಡುಗೆಗಳು ಜೀವಿತೊತ್ತರವಾಗಿಬೇಕು. ಊರಿನ ಬೆಳವಣಿಗೆಗೆ ಮೂಲಭೂತ ಸೌಲಭ್ಯವನ್ನು ಒದಗಿಸಿಕೊಡುವ ಮೂಲಕ ಶ್ರೀನಿವಾಸ ಪೂಜಾರಿ ಅವರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅವಿನಾಶ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಕೊಲ್ಲೂರು ರಮೇಶ ಗಾಣಿಗ, ಅರಣ್ಯ ಇಲಾಖೆಯ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ರಘುರಾಮ ದೇವಾಡಿಗ ಆಲೂರು, ವಂಡ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಜಿ.ಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಸಿವಿಲ್ ಗುತ್ತಿಗೆದಾರರಾದ ರುದ್ರಯ್ಯ ಆಚಾರ್ಯ ಆತ್ರಾಡಿ, ಬೆಂಗಳೂರು ಉದ್ಯಮಿ ಬಿ.ಎಂ ಬಾಳಿಕೆರೆ, ತಾ.ಪಂ.ಮಾಜಿ ಸದಸ್ಯ ನರಸಿಂಹ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.
ಸುಜನ ಮತ್ತು ತಂಡ ಪ್ರಾರ್ಥನೆ ಮಾಡಿದರು. ತಾ.ಪಂ ಮಾಜಿ ಸದಸ್ಯ ಉದಯ ಪೂಜಾರಿ ಸ್ವಾಗತಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಯಲಕ್ಷ್ಮೀ ಎಸ್.ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ ಕಲ್ಮಾಡಿ ಅತಿಥಿಗಳನ್ನು ಗೌರವಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಶಶಿಧರ ಶೆಟ್ಟಿ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ ಮಾಜಿ ಸದಸ್ಯ ಗುಂಡು ಪೂಜಾರಿ ಹರವರಿ ವಂದಿಸಿದರು.

ಸಭಾಭವನದ ವಿಶೇಷತೆಗಳು:
ಈ ಸಭಾಭವನ ಮಾರುಕಟ್ಟೆ ರಸ್ತೆಯ ಚಕ್ರನದಿ ತಟದಲ್ಲಿದೆ. ಅತ್ಯಂತ ಸುಂದರವಾದ ಪರಿಸರದಲ್ಲಿ ಸಭಾಭವವಿದೆ. ಎಸಿ ಮತ್ತು ನಾನ್ ಎಸಿ ಸೌಲಭ್ಯವನ್ನು ಈ ಹಾಲ್ ಹೊಂದಿದೆ. 500 ಜನ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ಸಾಮಥ್ರ್ಯವಿರುವ ಶ್ರೀಯಾ ಕನ್ವೆನ್‌ಷನ್ ಹಾಲ್ ಆಕರ್ಷಣೀಯವಾದ ವೇದಿಕೆ, ವಧು-ವರರ ಕೊಠಡಿ ಸಹಿತ ಎಲ್ಲಾ ವ್ಯವಸ್ಥೆಗಳಿವೆ. ತಳ ಮಹಡಿಯಲ್ಲಿ ಭೋಜನಶಾಲೆ ಇದ್ದು ಏಕಕಾಲದಲ್ಲಿ 250 ಜನ ಕುಳಿತು ಊಟ ಮಾಡುವ ಸಾಮಥ್ರ್ಯ ಹೊಂದಿದೆ.

ವಾಹನ ನಿಲುಗಡೆ ಸಾಕಷ್ಟು ವಿಸ್ತಾರವಾದ ಪಾರ್ಕಿಂಗ್ ಸ್ಥಳವಿದೆ. ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ಕ್ಯಾಟರಿಂಗ್ ವ್ಯವಸ್ಥೆ ಇದೆ. ಮದುವೆ, ಆರತಕ್ಷತೆ, ನಿಶ್ಚಿತಾರ್ಥ, ಸೀಮಂತ ಮುಂತಾದ ಕಾರ್ಯಕ್ರಮಗಳಿಗೆ ಅತ್ಯಂತ ಪೂರಕವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!