Sunday, September 8, 2024

ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕಿರಿಮಂಜೇಶ್ವರ: ರೂ. 39 ಲಕ್ಷ ಲಾಭ, ಶೇ.15 ಡಿವಿಡೆಂಡ್ ಘೋಷಣೆ


ಕಿರಿಮಂಜೇಶ್ವರ, ಸೆ.23: ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನಿ., ಕಿರಿಮಂಜೇಶ್ವರ ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ನಾಗೂರು ವಡೇರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಸೆ.23ರಂದು ಸಂಘದ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಉಡುಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷೀಯ ಮಾತುಗಳನ್ನಾಡಿದ ಶ್ರೀಮತಿ ಅನ್ನಪೂರ್ಣ ಉಡುಪ ಅವರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ರೂ.54,05,500 ಪಾಲುಬಂಡವಾಳವನ್ನು ಹೊಂದಿದ್ದು ವರ್ಷಾಂತ್ಯಕ್ಕೆ ರೂ.24,97,01,719ರಷ್ಟು ಠೇವಣಾತಿಯನ್ನು ಹೊಂದಿದೆ. ವರದಿ ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ ಶೇ.10.73% ರಷ್ಟು ಹೆಚ್ಚಳವಾಗಿದೆ. ವಾರ್ಷಿಕವಾಗಿ ರೂ.87 ಕೋಟಿಗೂ ಅಧಿಕ ವ್ಯವಹಾರ ನಡೆಸಿದೆ. 21.80 ಕೋಟಿ ಸಾಲ ನೀಡಿದೆ. ವರದಿ ವರ್ಷದಲ್ಲಿ ರೂ.39,23,322.65 ಲಾಭ ಗಳಿಸಿದೆ ಎಂದು ಹೇಳಿದ ಅವರು ಶೇ.15% ಡಿವಿಡೆಂಡ್ ಘೋಷಣೆ ಮಾಡಿದರು.

ಸಂಘವು ಪಡಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದು ರೂ.56,121.96 ವ್ಯಾಪಾರ ಲಾಭ ಗಳಿಸಿದೆ. ಮುದ್ರಣ ವಿಭಾಗದಲ್ಲಿ ರೂ. 1.87,026 ರಷ್ಟು ವ್ಯಾಪಾರ ಲಾಭ ಗಳಿಸಿದೆ. ಕೃಷಿ ಉತ್ಪನ್ನಗಳ ಮಾರಾಟದಿಂದ ರೂ.1,31,050.63 ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ಎ ತರಗತಿಗೆ ವರ್ಗೀಕರಿಸಲಾಗಿದೆ. ಸಂಘದ ವ್ಯಾಪ್ತಿಯಲ್ಲಿ 42 ಮಹಿಲಾ ಸ್ವ-ಸಹಾಯ ಗುಂಪುಗಳನ್ನು ರಚಿಸಿದ್ದು ಮಹಿಳಾ ಸಶಕ್ತೀಕರಣಕ್ಕಾಗಿ ರೂ.2,79,57000 ಸಾಲ ನೀಡಲಾಗಿದೆ. ಕೇವಲ 11% ಬಡ್ಡಿ ದರದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಸಂಘದ ಗ್ರಾಹಕರಿಗಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ. ಸದಸ್ಯರ ಅನುಕೂಲಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಶಾರದ, ನಿರ್ದೇಶಕರಾದ ಶ್ರೀಮತಿ ಬಿ.ರತ್ನ ಹೆಬ್ಬಾರ್, ಶ್ರೀಮತಿ ನಾಗವೇಣಿ ಕಾರಂತ, ಶ್ರೀಮತಿ ಪುಷ್ಪಲತಾ ಶ್ಯಾನುಭೋಗ್, ಶ್ರೀಮತಿ ಗಾಯತ್ರಿ ಜಿ.ಶ್ಯಾನುಭಾಗ್, ಶ್ರೀಮತಿ ವಸಂತಿ ಪೂಜಾರಿ, ಶ್ರೀಮತಿ ಲಕ್ಷ್ಮೀ ದೇವಾಡಿಗ, ಶ್ರೀಮತಿ ಜಯಲಕ್ಷ್ಮೀ ಹೊಳ್ಳ, ಶ್ರೀಮತಿ ಯಶೋಧ ಕೆ.ಭಟ್, ಶ್ರೀಮತಿ ಕಮಲಾಕ್ಷಿ ವಿ.ನಾವಡ, ಶ್ರೀಮತಿ ನಾಗವೇಣಿ ಕೆದ್ಲಾಯ ಉಪಸ್ಥಿತರಿದ್ದರು.

ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಘವೇಂದ್ರ ಕೆ ವರದಿ ಮಂಡಿಸಿದರು. ಸಂಘದ ಸಿಬ್ಬಂದಿಗಳು ವಿವಿಧ ಕಾರ್ಯಕಲಾಪಗಳನ್ನು ನಿರ್ವಹಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಾಮಾನ್ಯ ಸಭೆಯನ್ನು ಯಶಸ್ವಿಗೊಳಿಸಿದರು. ರಾಘವೇಂದ್ರ ಕೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!