spot_img
Saturday, May 2, 2026
spot_img

ತೊಂಬಟ್ಟು: ನಾಪತ್ತೆಯಾಗಿದ್ದ ಯುವಕ ಪತ್ತೆ

ಕುಂದಾಪುರ, ಸೆ.23: ಸೆ.16ರಂದು ನಾಪತ್ತೆಯಾಗಿದ್ದ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ಎನ್ನುವ ಯುವಕ ಸೆ.23ರಂದು ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ. ಕಬ್ಬಿನಾಲೆಯ ಮನೆಯೊಂದರ ಸಮೀಪ ಪತ್ತೆಯಾಗಿದ್ದಾರೆ.

ಇವರು ಕಳೆದ ಎಂಟು ದಿನಗಳಿಂದ ಅರಣ್ಯದಲ್ಲಿಯೇ ಇದ್ದರೆಂದು ತಿಳಿದುಬಂದಿದೆ. ಅನ್ನ ಆಹಾರವಿಲ್ಲದೆ ನಿತ್ರಾಣರಾಗಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕರೆದುಕೊಂಡು ಬರಲಾಗಿದೆ. ಕಳೆದ ಎಂಟು ದಿನಗಳಿಂದ ಅವರು ದಟ್ಟವಾದ ಕಾಡಿನಲ್ಲಿಯೇ ಅಲೆದಾಡುತ್ತಿದ್ದರು ಎನ್ನಲಾಗಿದೆ. ಅವರೊಂದಿಗೆ ಅವರ ಮನೆಯ ಸಾಕುನಾಯಿ ಕೂಡಾ ಎಂಟು ದಿನಗಳಿಂದ ಅವರೊಂದಿಗೆ ಇತ್ತು ಎನ್ನುವುದು ವಿಶೇಷ. ಇವತ್ತು ವಿವೇಕಾನಂದ ಮನೆಗೆ ಬಂದಿದ್ದು, ನಾಯಿ ಕೂಡಾ ಅವರನ್ನು ಹಿಂಬಾಲಿಸಿ ಬಂದಿದೆ.
ಕಳೆದ ಎಂಟು ದಿನಗಳಿಂದ ವಿವೇಕಾನಂದರಿಗಾಗಿ ವ್ಯಾಪಕ ಹುಡುಕಾಟ ನೆಡೆಸಲಾಗುತ್ತಿತ್ತು. ಸ್ಥಳೀಯರು, ಪೊಲಿಸರು ಹತ್ತಾರು ಕಿ.ಮೀ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಕೂಡಾ ಪತ್ತೆಯಾಗಿರಲಿಲ್ಲ.

ಇವತ್ತು ವಿವೇಕಾನಂದ ಪತ್ತೆಯಾಗುತ್ತಿದ್ದಂತೆ ಊರಿನಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ಶಾಸಕ ಗುರುರಾಜ ಗಂಟಿಹೊಳೆಯವರು ವಿವೇಕಾನಂದರ ಮನೆಗೆ ಭೇಟಿ ನೀಡಿದ್ದಾರೆ. ಪೊಲೀಸ್ ಇಲಾಖಾ ಅಧಿಕಾರಿಗಳು, ಕಂದಾಯ ಇಲಾಖೆ, ಗ್ರಾ.ಪಂ. ಇತರ ಅಧಿಕಾರಿಗಳು ಮನೆಗೆ ಭೇಟಿ ನೀಡಿದ್ದಾರೆ.

ಗಮನ ಸಳೆದ ಶ್ವಾನ:
ನಾಯಿ ನಿಯುತ್ತಿಗೆ ಹೆಸರಾದ ಪ್ರಾಣಿ. ಇಲ್ಲಿಯೂ ಕೂಡಾ ಅದು ದೃಢಪಟ್ಟಿದೆ. ವಿವೇಕಾನಂದರ ಜೊತೆಗೆ ಸಾಕುನಾಯಿಯೂ ಕೂಡಾ ಆಹಾರವಿಲ್ಲದೆ ಕಾಲ ಕಳೆದಿದೆ. ಮಳೆ ಬಿಸಿಲಿಲ್ಲಿ ಅವರೊಂದಿಗೆ ಸಾಥ್ ನೀಡಿದೆ. ಈ ಶ್ವಾನದ ನಿಷ್ಠೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಎಂಟು ದಿನದಿಂದ ಹಸಿದಿರುವ ನಾಯಿಗೂ ಆಹಾರ ನೀಡಿ ಬೆನ್ನು ಸವರುತ್ತಿರುವ ದೃಶ್ಯ ತೊಂಬಟ್ಟುವಿನಲ್ಲಿ ಕಂಡುಬಂತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!