Sunday, September 8, 2024

ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ: 68ಲಕ್ಷ ಲಾಭ | ಶೇ.11 ಡಿವಿಡೆಂಡ್ ಘೋಷಣೆ

ಕುಂದಾಪುರ, ಸೆ.25: ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘವು ವರ್ಷದಿಂದ ವರ್ಷಕ್ಕೆ ಗುರಿ ಮೀರಿದ ಸಾಧನೆಯೊಂದಿಗೆ ಅಭಿವೃದ್ದಿ ಹೊಂದುತ್ತಾ ಬಂದಿದೆ. ಸಂಘವು ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ವರದಿ ವರ್ಷದ ಅಂತ್ಯಕ್ಕೆ ರೂ.41,45,18,292.48 ಠೇವಣಾತಿ ಹೊಂದುವುದರೊಂದಿಗೆ ಠೇವಣಾತಿ ಸಂಗ್ರಹಣೆಯಲ್ಲಿ ಶೇ.15ರಷ್ಟು ಪ್ರಗತಿಯನ್ನು ಸಾಧಿಸಿದೆ. ಪ್ರಸ್ತುತ ವರದಿ ಸಾಲಿನಲ್ಲಿ ರೂ.68,00,561 ಲಾಭ ಗಳಿಸಿದೆ. ಶೇ.11 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್.ಮಂಜಯ್ಯ ಶೆಟ್ಟಿ ಹೇಳಿದರು.

ಅವರು ಸೆ.25ರಂದು ಆಲೂರು ಶ್ರೀ ಮೂಕಾಂಬಿಕಾ ಸಭಾ ಭವನದಲ್ಲಿ ನಡೆದ ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ಒಟ್ಟು ರೂ.3,18,10,305 ವಿವಿಧ ನಿಧಿಗಳನ್ನು ಹೊಂದಿದೆ. ಸದಸ್ಯರಿಗೆ ಕಡಿಮೆ ಬಡ್ಡಿಯ ಕೃಷಿ ಸಾಲಗಳ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ರೈತ ಸದಸ್ಯರುಗಳಿಗೆ ಕ್ರಮಿಕ ಪತ್ತಿನ ಯಾದಾಸ್ತು ಮಿತಿ ನಿರ್ಧರಿಸಿಕೊಳ್ಳಲು ಪ್ರೋತ್ಸಾಹಿಸಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ರೂ.10,54,65,609 ಸಾಲ ಪಡೆಯಲಾಗಿದೆ. ವರದಿ ಸಾಲಿನಲ್ಲಿ ರೂ.40 ಕೋಟಿಯಷ್ಟು ಸಾಲ ನೀಡಲಾಗಿದೆ ಎಂದರು.

ಸಂಘವು ರಾಷ್ಟ್ರೀಯ ಜನಪರ ಕಲ್ಯಾಣ ಕಾರ್ಯಕ್ರಮವಾದ ನವೋದಯ ಸ್ವಸಹಾಯ ಗುಂಪು ಯೋಜನೆ ಅನುಷ್ಠಾನಿಸಿದೆ. ವರದಿ ವರ್ಷಕ್ಕೆ 130 ಸ್ವಸಹಾಯ ಗುಂಪುಗಳಿಂದ ರೂಪಾಯಿ 48.98 ಲಕ್ಷ ಠೇವಣಿ ಹೊಂದಿದೆ. ಸಂಘವು ತನ್ನ ಸದಸ್ಯರು ಹಾಗೂ ಗ್ರಾಹಕರಿಗೆ ನಿಯಂತ್ರಿತ ಪಡಿತರ ಸಾಮಗ್ರಿ ಪೂರೈಸುತ್ತಿದ್ದು ವರ್ಷಾಂತ್ಯಕ್ಕೆ ರೂ.7,31,183 ವ್ಯಾಪಾರ ಲಾಭ ಗಳಿಸಿದೆ ಎಂದರು.

ಸಂಘವು ಸದಸ್ಯರ ಅಭಿವೃದ್ದಿಗೆ ಒತ್ತು ನೀಡುತ್ತಿದೆ. ಕೃಷಿ ಸಾಲಗಳನ್ನು ನೀಡುವ ಮೂಲಕ ಕೃಷಿಕರನ್ನು ಪ್ರೋತ್ಸಾಹಿಸುತ್ತಿದೆ. ಸಂಘದ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ ಪ್ರಶಸ್ತಿ ಲಭಿಸಿದೆ ಎಂದರು.

ಸಂಘದ ವಾರ್ಷಿಕ ವರದಿ ಮಂಡಿಸಿದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ ಅವರು, ಸಂಘವು ಒಟ್ಟು 5,339 ಸದಸ್ಯರನ್ನು ಹೊಂದಿರುವ ಸಂಘವು ರೂ.1,40,24,657 ಪಾಲು ಹಣವನ್ನು ಹೊಂದಿದೆ. ಸಂಘವು ವರ್ಷದಿಂದ ವರ್ಷಕ್ಕೆ ಎಲ್ಲ ವಿಭಾಗಗಳಲ್ಲಿ ಮುನ್ನೆಡೆ ಸಾಧಿಸುತ್ತಿದೆ. ಲಾಭ ಗಳಿಕೆಯಲ್ಲಿಯೂ ಕೂಡಾ ಏರಿಕೆಯನ್ನು ಕಂಡುಕೊಳ್ಳುತ್ತಾ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಸಭೆಯಲ್ಲಿ ಸಂಘದ ವ್ಯಾಪ್ತಿಯ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಸಂಘದ ಉಪಾಧ್ಯಕ್ಷರಾದ ಎನ್.ಸಂತೋಷ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ರತ್ನಾಕರ ಎಂ.ಆಚಾರ್ಯ, ಹೆಚ್.ಶಂಕರ ಶೆಟ್ಟಿ, ಎಂ.ಚಂದ್ರಶೇಖರ ಶೆಟ್ಟಿ, ಗಂಗಾಧರ ಆಚಾರ್ಯ, ಸುಬ್ಬ ಪೂಜಾರಿ,ರಾಜೇಶ ದೇವಾಡಿಗ, ಅಮರನಾಥ ಶೆಟ್ಟಿ, ಸುರೇಂದ್ರ, ಹರೀಶ್, ಶ್ರೀಮತಿ ಲಲಿತಾ ಕುಲಾಲ್, ಶ್ರೀಮತಿ ಅಕ್ಕಯ್ಯ ಯಾನೆ ಆಶಾ ಉಪಸ್ಥಿತರಿದ್ದರು.

ಸಂಘದ ಮೆನೇಜರ್ ಎ.ಸಂಜೀವ ಪೂಜಾರಿ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಗಣೇಶ್ ವಂದಿಸಿದರು. ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!