spot_img
Friday, May 1, 2026
spot_img

ಭಗವಾನ್‌ ಶಿವನಿಂದ ಪ್ರೇರಿತವಾದ ಬೃಹತ್‌ ಕ್ರಿಕೆಟ್‌ ಸ್ಟೇಡಿಯಂ ಗೆ ಮೋದಿ ಶಂಕುಸ್ಥಾಪನೆ

ವಾರಣಾಸಿ (ಜನಪ್ರತಿನಿಧಿ ವಾರ್ತೆ) : ದೇಶದ ಕ್ರಿಕೆಟ್‌ ಅಭಿಮಾನಿಗಳಿಗೆ ,ಅದರಲ್ಲೂ ಉತ್ತರ ಪ್ರದೇಶದ ಕ್ರಿಕೆಟ್‌ ಅಭಿಮಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಕೊಡುಗೆಯನ್ನೆ ನೀಡಿದ್ದಾರೆ. ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದಾರೆ.  

ಈ ಕ್ರಿಕೆಟ್‌ ಸ್ಟೇಡಿಯಂ ವಿಶಿಷ್ಟ ಮಾದರಿಯಲ್ಲಿ ರಚನೆಯಾಗುತ್ತಿದೆ. ಶಿವನಿಗೆ ಸಂಬಂಧಿಸಿದ ವಿಷಯದ ಮೇಲೆ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ ಪಂದ್ಯಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರಿಗೂ ವಾರಣಾಸಿಗೂ ವಿಶೇಷ ಸಂಬಂದವಿದ್ದು, ಮೋದಿ ಅವರು ಇಲ್ಲಿನ ಸಂಸದರೂ ಆಗಿದ್ದಾರೆ, ಅದಕ್ಕಾಗಿಯೇ ಈ ಕ್ರೀಡಾಂಗಣವು ವಿಶೇಷವಾಗಿದೆ.

30 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಈ ಸ್ಟೇಡಿಯಂ ಸುಮಾರು 450 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಈ ಸ್ಟೇಡಿಯಂ ಶಿವನಿಗೆ ಸಂಬಂಧಿಸಿದ ವಿಷಯಗಳ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವುದರಿಂದ ಬಹಳ ಸುದ್ದಿ ಮಾಡುತ್ತಿದೆ.

ಈ ಸ್ಟೇಡಿಯಂ ಯಾಕೆ ವಿಶೇಷ ಮತ್ತು ಭಿನ್ನ ?

ವಾರಣಾಸಿಯ ರಿಂಗ್ ರೋಡ್ ಬಳಿ ಈ ಸ್ಟೇಡಿಯಂನನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ ಯುಪಿ ಸರ್ಕಾರ ಸುಮಾರು 120 ಕೋಟಿ ರೂ. ಮತ್ತು ಬಿಸಿಸಿಐ 330 ಕೋಟಿ ರೂ. ವೆಚ್ಚ ಮಾಡುತ್ತಿದೆ. ಈಗ ಪ್ರಧಾನಿ ಮೋದಿ ಈ ಕ್ರೀಡಾಂಗಣದ ಶಂಕುಸ್ಥಾಪನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ, ಭಾರತ ರತ್ನ ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ತಾರಾ ಕ್ರಿಕೆಟಿಗರು ಉಪಸ್ಥಿತರರಿರುತ್ತಾರೆ.

ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ನೀಡಿರುವ ಮಾಹಿತಿಯ ಪ್ರಕಾರ, ಈ ಸ್ಟೇಡಿಯಂ ನ ವಾಸ್ತುಶಿಲ್ಪವು ಭಗವಾನ್ ಶಿವನಿಂದ ಪ್ರೇರಿತವಾಗಿದ್ದು, ಇದು ಅರ್ಧಚಂದ್ರಾಕಾರದ ಛಾವಣಿಯ ಹೊದಿಕೆ ಮತ್ತು ತ್ರಿಶೂಲದ ಆಕಾರದ ಫ್ಲಡ್-ಲೈಟ್ಗಳನ್ನು ಹೊಂದಿದೆ. ಅಲ್ಲದೆ ಸ್ನಾನ ಘಟ್ಟಗಳ ಮೆಟ್ಟಿಲುಗಳ ಮಾದರಿಯಲ್ಲಿ ಪ್ರೇಕ್ಷಕರ ಗ್ಯಾಲರಿಯು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಸುಮಾರು 30 ಸಾವಿರ ಅಭಿಮಾನಿಗಳು ಏಕಕಾಲದಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದ್ದು, ಈ ಕ್ರೀಡಾಂಗಣದ ನಿರ್ಮಾಣ ಕೆಲಸ ಡಿಸೆಂಬರ್ 2025 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ.

ಇನ್ನು, ಸನಾತನ ಹಿಂದೂ ಧರ್ಮೀಯರ ಪುಣ್ಯಭೂಮಿ, ವಿಶ್ವನಾಥನ ಆದಿನೆಲ ವಾರಣಾಸಿ ‘ಕಾಶಿ’ಯಲ್ಲಿ ಪರಶಿವನ ಸ್ವರೂಪಗಳಾದ ಡಮರುಗ, ಬಿಲ್ವಪತ್ರೆ ಹಾಗೂ ತ್ರಿಶೂಲಗಳನ್ನು ಹೋಲುವ ಆಕೃತಿಗಳೊಂದಿಗೆ ನಿರ್ಮಾಣವಾಗಲಿರುವ ನೂತನ ಅಂತಾರಾಷ್ಟ್ರೀಯ ‘ಕ್ರಿಕೆಟ್’ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವೈಭವಯುತ ಹಿಂದೂ ನಾಗರೀಕತೆಯ ಪ್ರತೀಕವಾಗಿಯೂ ಈ ಕ್ರೀಡಾಂಗಣ ಪ್ರಜ್ವಲಿಸಲಿದೆ ಎಂದು  ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ರಾಜ್ಯ ಬಿಜೆಪಿ ಮಾಹಿತಿ ಹಂಚಿಕೊಂಡಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!