Sunday, September 8, 2024

ಚೈತ್ರಾ ಕುಂದಾಪುರ ಪ್ರಕರಣ : ಈ ಮಹಾ ಸುಭಗಧ್ವಯರು ಸುಮ್ಮನಿದ್ದಿದ್ದೇಕೆ? : ಚಕ್ರವರ್ತಿ ಸೂಲಿಬೆಲೆ, ಸಿ.ಟಿ ರವಿ ಬಗ್ಗೆ ಕಾಂಗ್ರೆಸ್‌ ಟೀಕೆ

ಜನಪ್ರತಿನಿಧಿ ವಾರ್ತೆ : ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ ರಾಜ್ಯ ಕಾಂಗ್ರೆಸ್‌ ಬಿಜೆಪಿಯನ್ನು ಟೀಕಿಸಿದೆ.

ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಈ ಬಗ್ಗೆ ಟೀಕಿಸಿದ ಕರ್ನಾಟಕ ಕಾಂಗ್ರೆಸ್‌, ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್ ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, ಸಿ.ಟಿ ರವಿ ಅವರಿಗೂ ತಿಳಿದಿತ್ತಂತೆ.ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ? ಎಂದು ಪ್ರಶ್ನಿಸಿದೆ.

ಈ ಚೈನ್ ಚೈತ್ರ ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ ಎಂದು ಕಿಡಿ ಕಾರಿದೆ.

ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ ಹೆಸರು ಪ್ರಸ್ತಾಪವಾದ ಬೆನ್ನಲ್ಲೆ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಕಯಿಸಿದ ಸೂಲಿಬೆಲೆ, ನನಗೂ ಈ ಪ್ರಕರಣಕ್ಕೂ ಯಾವುದೆ ಸಂಬಂಧವಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಚೈತ್ರಾ ಕುಂದಾಪುರ ಅವರನ್ನು ಒಮ್ಮೆ ನೋಡಿದ್ದೆ. ನಾನು ಈ ಹಿಂದೆಯೇ ಸಿ.ಟಿ ರವಿ ಗಮನಕ್ಕೂ ಈ ವಿಚಾರ ತಂದಿದ್ದೆ. ಬಿಜೆಪಿಯಲ್ಲಿ ಈ ರೀತಿಯ ವಿಚಾರ ನಡೆಯುವುದಿಲ್ಲ ಎಂದು ಜನರಿಗೆ ಗೊತ್ತಾಗಬೇಕು ಎಂದು ಸಿ.ಟಿ ರವಿ ಹೇಳಿರುವುದಾಗಿ ಹೇಳಿದ್ದರು.

ಇನ್ನು, ಈ ಬಗ್ಗೆ ಮಾಧ್ಯಮಗಳಿಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಜೆಪಿಯಲ್ಲಿ ಹೀಗೆಲ್ಲಾ ಸಾಧ್ಯವಿದೆಯೇ ಎಂದು ಹಣ ಕೊಡುವುದಕ್ಕೆ ಮೊದಲೆ ಯೋಚಿಸಬೇಕಿತ್ತು. ಚಕ್ರವರ್ತಿ ಸೂಲಿಬೆಲೆ ಅವರು ನನಗೆ ಈ ವಿಚಾರ ಹೇಳಿದಾಗ, ಈ ತರದ್ದು ಯಾವುದೇ ನಮ್ಮ ಪಾರ್ಟಿಯಲ್ಲಿ ನಡೆಯುವುದಿಲ್ಲ. ಯಾರೋ ಮೋಸ ಮಾಡಿದ್ದಾರೆ. ಮೋಸ ಮಾಡುವ ಮನಸ್ಥಿತಿಗೆ ನಾವು ರಕ್ಷಣೆ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!