spot_img
Wednesday, January 22, 2025
spot_img

ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲು ನಿಧನ


ಕುಂದಾಪುರ: ಬಡಗುತಿಟ್ಟಿನ ಪ್ರಸಿದ್ಧ ಭಾಗವತ, ಸಿದ್ಧಾಪುರ ತಾಲೂಕಿನ ರಾಮಚಂದ್ರ ಜಿ ನಾಯ್ಕ ಹೆಮ್ಮನಬೈಲು ಸೆ.21ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ಪ್ರಾಯವಾಗಿತ್ತು.

ಬಡಗುತಿಟ್ಟಿನ ಹಲವಾರು ಮೇಳಗಳಲ್ಲಿ ಅವರು ತಿರುಗಾಟ ಮಾಡಿದ್ದರು. ಉತ್ತಮ ಕಂಠಸಿರಿ ಹೊಂದಿದ್ದ ಅವರು ಗಾನವೈಭವ, ತಾಳಮದ್ದಳೆಗಳಿಗೆ ಬೇಡಿಕೆಯ ಭಾಗವತರಾಗಿದ್ದರು. ಪ್ರಸಂಗ ರಚನೆಯಲ್ಲಿಯೂ ಗುರುತಿಸಿಕೊಂಡಿದ್ದ ರಾಮಚಂದ್ರ ನಾಯ್ಕರು ಪುರಾಣ ಆಧರಿತ, ಕಾಲ್ಪನಿಕ ಪ್ರಸಂಗಳನ್ನು ರಚಿಸಿ, ನಿರ್ದೇಶಿಸಿ ಯಶಸ್ವಿ ಪ್ರಯೋಗವನ್ನು ಮಾಡಿದ್ದರು. ಸಾಲಿಗ್ರಾಮ ಮೇಳದಲ್ಲಿಯೂ ತಿರುಗಾಟ ಮಾಡಿದ ಅವರು ಸಾಮಾಜಿಕ ಪ್ರಸಂಗಗಳಿಗೆ ಅದ್ಭುತವಾಗಿ ಜೀವ ತುಂಬಿದ್ದರು. ಇತ್ತೀಚೆಗೆ ಅವರು ಸಿಗಂದೂರು ಮೇಳದಲ್ಲಿ ತಿರುಗಾಟ ಮಾಡಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!