spot_img
Friday, May 1, 2026
spot_img

ಬಂಟ ಸಮಾಜದ ಹತ್ತು ಮಂದಿ ಹಿರಿಯ ಸಾಧಕರಿಗೆ ‘ದಶಮ ಸಂಭ್ರಮ’ ಪ್ರಶಸ್ತಿ

ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಹತ್ತು ಮಂದಿ ಹಿರಿಯ ಸಾಧಕರಿಗೆ ದಶಮ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರೊ. ಇ‌ಆರ್. ಮೊಳಹಳ್ಳಿ ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವೈ ಎಸ್ ಹೆಗ್ಡೆ ಹಿರಿಯ ನೇತ್ರ ಶಸ್ತ್ರಚಿಕಿಸ್ತಕರು ಕುಂದಾಪುರ, ಲೆಕ್ಕಪರಿಶೋಧನ ಕ್ಷೇತ್ರದಲ್ಲಿ ಸುಧಾಕರ ಹೆಗ್ಡೆ ಹಿರಿಯ ಲೆಕ್ಕ ಪರಿಶೋಧಕರು ಕುಂದಾಪುರ, ನ್ಯಾಯಾಂಗ ಕ್ಷೇತ್ರದಲ್ಲಿ ಎ.ಬಿ ಶೆಟ್ಟಿ ಹಿರಿಯ ವಕೀಲರು ಕುಂದಾಪುರ, ಉದ್ಯಮ ಕ್ಷೇತ್ರದಲ್ಲಿ ಅರುಣ್ ಕುಮಾರ್ ಶೆಟ್ಟಿ ಹೋಟೆಲ್ ಹರಿಪ್ರಸಾದ್ ಕುಂದಾಪುರ, ಪರಿಸರ ಕ್ಷೇತ್ರದಲ್ಲಿ ಕೊರ್ಗಿ ವಿಟ್ಟಲ್ ಶೆಟ್ಟಿ ಪರಿಸರ ಪ್ರೇಮಿ ಕುಂಭಾಶಿ, ಶಿಕ್ಷಣ ಕ್ಷೇತ್ರದಲ್ಲಿ ವೀರಣ್ಣ ಶೆಟ್ಟಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಮೇರ್ಡಿ, ಸಂಶೋಧನ ಕ್ಷೇತ್ರದಲ್ಲಿ ಡಾ. ಜಗದೀಶ್ ಶೆಟ್ಟಿ ಬೇಳೂರು ನಿವೃತ್ತ ಪ್ರಾಂಶುಪಾಲರು ಹಂದಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಜಯಕರ ಶೆಟ್ಟಿ ಕೈಗಾರಿಕೋದ್ಯಮಿ ಗಿರಿಜಾ ಟೈಲ್ಸ್ ನೆಲ್ಲಿಕಟ್ಟೆ, ಹೈನುಗಾರಿಕಾ ಕ್ಷೇತ್ರದಲ್ಲಿ ಸುಧಾಕರ ಶೆಟ್ಟಿ ಜನ್ಸಾಲೆ ಉದ್ಯಮಿ ನೆಲಗೊಂಡ ಇವರಿಗೆ ದಶಮ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಈ ಕಾರ್ಯಕ್ರಮ ಸೆಪ್ಟಂಬರ್ 24ರ ಭಾನುವಾರ ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!