Sunday, September 8, 2024

ಜಗತ್ತಿನ ಎತ್ತರದ ಪ್ರದೇಶಕ್ಕೆ ಕುಂದಾಪುರ ಮೂಲದ ಅಮ್ಮ ಮಗಳ ಜೋಡಿಯ ಬೈಕ್‌ ರೈಡ್‌

ಜನಪ್ರತಿನಿಧಿ ವಾರ್ತೆ : ವಿಲ್ಮಾ ಕ್ರಾಸ್ತಾ ಕರ್ವಾಲೋ ಮತ್ತು ಅವರ ಪುತ್ರಿ ಚೆರಿಶ್‌ ಕರ್ವಾಲೋ ಎಂಬ ಕುಂದಾಪುರ ಮೂಲದ ಅಮ್ಮ-ಮಗಳು ಜೋಡಿ ಜಗತ್ತಿನ ಅತ್ಯಂತ ಎತ್ತರದ ಮೊಟಾರಬಲ್‌ ಪ್ರದೇಶವಾದ ಉಮ್ಲಿಂಗ್‌ ಪಾಸ್‌ಗೆ ತೆರಳಿ ಗಮನ ಸೆಳೆದಿದ್ದಾರೆ.

ಸಮುದ್ರ ಮಟ್ಟಕ್ಕಿಂತ ಸುಮಾರು 19,024 ಅಡಿ ಎತ್ತರದಲ್ಲಿರುವ ಉಮ್ಲಿಂಗ್‌ ಪಾಸ್‌ ಪ್ರದೇಶ ಭಾರತ – ಚೀನಾ ಗಡಿಯಲ್ಲಿದೆ. ಲಡಾಕ್‌ ನಲ್ಲಿರುವ ಸಾಹಸಿ ಬೈಕ್‌ ರೈಡರ್‌ಗಳು ಮಾತ್ರ ತಲುಪಬಹುದಾದ ಪ್ರದೇಶವಾದ ಈ ಉಮ್ಲಿಂಗ್‌ ಪಾಸ್ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. 55 ವರ್ಷದವರಾದ ವಿಲ್ಮಾ ಕ್ರಾಸ್ತಾ ಇಷ್ಟು ಎತ್ತರವನ್ನು ಬೈಕ್‌ ರೈಡ್‌ ಮೂಲಕ ತಲುಪಿರುವುದು ವಿಶೇಷ.  

ಮಗಳು ಚೆರಿಶ್‌ ಕರ್ವಾಲೋ ಬಗ್ಗೆ ಹೆಮ್ಮೆ ಪಡುವ ತಾಯಿ ವಿಲ್ಮಾ ಕ್ರಾಸ್ತಾ ಕರ್ವಾಲೋ, ಲಡಾಖ್‌ ಗೆ ಮೂರನೇ ಬಾರಿ ಬೈಕ್‌ ರೈಡ್‌ ಮೂಲಕ ತೆರಳಿದ್ದು ಮಗಳ ಸಾಹಸಯಾತ್ರೆಯಿಂದ ಸಾದ್ಯವಾಗಿದೆ ಎನ್ನುತ್ತಾರೆ. ವೃತ್ತಿಯಲ್ಲಿ ಕಾರ್ಪೋರೇಟರ್‌ ಟ್ರೈನರ್‌ ಆಗಿರುವ ವಿಲ್ಮಾ, ಯೋಗ, ಪ್ರಾಣಾಯಾಮ, ಧ್ಯಾನದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ನೆಲೆ ನಿಂತಿದ್ದಾರೆ.

ಈ ಹಿಂದೆಯೂ ಇದೇ ತಾಯಿ ಮಗಳ ಜೋಡಿ ಜಗತ್ತಿನ ಎರಡನೇ ಅತ್ಯಂತ ಎತ್ತರದ ಪ್ರದೇಶವಾದ ಖರ್ದುಂಗ್ಲಾ ಪಾಸ್‌ಗೆ ಬೈಕ್‌ ರೈಡ್‌ ಮೂಲಕ ತೆರಳಿ ಗಮನ ಸೆಳೆದಿದ್ದರು. ಈಗ ಜಗತ್ತಿನ ಅತ್ಯಂತ ಎತ್ತರದ ಪ್ರದೇಶ ಉಮ್ಲಿಂಗ್‌ ಪಾಸ್‌ಗೆ ತೆರಳಿದ್ದಲ್ಲದೇ, ಕರುನಾಡ ಧ್ವಜ ಮತ್ತು ದೇಶದ ತ್ರಿವರ್ಣ ಧ್ವಜ ಹಿಡಿದು ತಮ್ಮ ನಾಡು ಮತ್ತು ದೇಶದ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!