Sunday, September 8, 2024

ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣಕ್ಕೆ ಮತ್ತಷ್ಟು ತಿರುವು | 10 ದಿನ ಸಿಸಿಬಿ ಕಸ್ಟಡಿಗೆ ಹಾಲಶ್ರೀ : ಕೋರ್ಟ್‌ ಆದೇಶ

ಜನಪ್ರತಿನಿಧಿ ವಾರ್ತೆ : ಚೈತ್ರಾ ಕುಂದಾಪುರ ಬಹುಕೋಟಿ ವಂಚನೆ ಪ್ರಕರಣ ದಿನದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಹುಕೋಟಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಮತ್ತು ತಂಡದ ಬಗ್ಗೆ ಈಗ ಸಾಕಷ್ಟು ಅನುಮಾನ ಮೂಡುತ್ತಿದೆ. ಸಿಸಿಬಿ ವಿಚಾರಣೆಗೆ ಕರೆದುಕೊಂಡು ಹೋಗುವಾಗ ಚೈತ್ರಾ ಹೇಳಿದ ʼಸ್ವಾಮೀಜಿ ಬಂಧನವಾದರೇ, ದೊಡ್ಡದೊಡ್ಡವರೆಲ್ಲಾ ಸಿಕ್ಕಿ ಬೀಳ್ತಾರೆ, ಇಂದಿರಾ ಕ್ಯಾಂಟೀನ್ ಬಿಲ್ ಪೆಡ್ಡಿಂಗ್ ವಿಚಾರ ಸಂಚಲನ ಸೃಷ್ಟಿ ಮಾಡಿತ್ತು.

ಉದ್ಯಮಿ ಗೋವಿಂದ ಬಾಬು ಪೂಜಾರಿ ಚೆಫ್ ಟಾಕ್ ಸಂಸ್ಥೆಯ ಮಾಲೀಕರಾಗಿದ್ದು, ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಾಗಿದ್ದರು. ೨೦೧೭ರಿಂದಲೇ ಚೆಫ್ ಟಾಕ್ ಎಂಬ ಕಂಪನಿ ಅಡಿಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ಚೈತ್ರಾ ಕುಂದಾಪುರ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಚೈತ್ರಾ ಕುಂದಾಪುರ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಗೆ ಷಡ್ಯಂತ್ರ ಹೇಳಿಕೆ‌ಗೆ ಸಂಬಂಧಿಸಿದಂತೆ ಬಿಬಿಎಂಪಿ‌ ಚೀಫ್ ಕಮಿಷನರ್ ತುಷಾರ್ ಗಿರಿ ನಾಥ್ ಸ್ಪಷ್ಟನೆ ನೀಡಿದ್ದರು. ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಬಹುತೇಕ ಕ್ಲಿಯರ್ ಮಾಡಲಾಗಿದೆ. ಕೆಲವು ಸಣ್ಣ ಪುಟ್ಟ ಬಿಲ್ ಬಾಕಿ ಇರಬೇಕು, ಅದನ್ನು ಹೆಲ್ತ್ ಕಮಿಷನರ್​ ಗೆ ನೋಡಿಕೊಳ್ಳಲು ಹೇಳಿದ್ದೇನೆ ಎಂದಿದ್ದರು. ಇಂದಿರಾ ಕ್ಯಾಂಟೀನ್ ಬಿಲ್ ಅನ್ನು ಕಾನೂನಾತ್ಮಕವಾಗಿ ಪಾವತಿ ಮಾಡಲಾಗಿದೆ. ಯಾವುದೇ ರೀತಿಯ ಬಿಲ್ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ತುಷಾರ್ ಗಿರಿ ನಾಥ್ ತಿಳಿಸುವವರೆಗೆ. ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕನೋರ್ವ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಗೆ ಈ ಬಗ್ಗೆ ದೂರು ನೀಡುವುದಕ್ಕೆ ಒತ್ತಾಯಿಸಿದ್ದರು ಎಂಬ ಊಹಾಪೋಹಗಳು ಹರಿದಾಡಿದ್ದವು.

ಕಾಂಗ್ರೆಸ್‌ ವಕ್ತಾರೆ ಮನೆಯಲ್ಲಿ ಆಶ್ರಯ ಸುಳ್ಳು ?

ಕಾಂಗ್ರೆಸ್ ಮಾಧ್ಯಮ ವಕ್ತಾರೆ ಸುರಯ್ಯ ಅಂಜುಮ್ ಅವರ ಅಪಾರ್ಟ್‍ಮೆಂಟ್‍ನಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದಾಳೆಂಬ ಮಾಹಿತಿ ಅನ್ವಯ ಸಿಸಿಬಿ ಈಗ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪರ ವಿರೋಧ ಚರ್ಚೆಗೂ ಕಾರಣವಾಗಿತ್ತು. ಆದರೇ, ಈ ಬಗ್ಗೆ ಸ್ಪಷ್ಟನೆ ನೀಡಿದ ಸುರಯ್ಯ ಅಂಜುಮ್, ಈ ಬಂಧಿತ ಚೈತ್ರಾಳಿಗೆ ನಾನು ನಮ್ಮ ಮನೆಯಲ್ಲಿ ಆಶ್ರಯ ನೀಡಿಲ್ಲವೆಂದು, ಹರಿದಾಡುತ್ತಿರುವ ಸುದ್ದಿ ಸುಳ್ಳು.  ನಾನು ಅವರಿಗೆ ಆಶ್ರಯ ಕೊಟ್ಟಿಲ್ಲ. ಸುದ್ದಿ ವಾಹಿನಿಯೊಂದರಲ್ಲಿ ಕೆಲವು ವರ್ಷಗಳ ಕಾಲ ನಾನು ಮತ್ತು ಚೈತ್ರಾ ಕಾರ್ಯ ನಿರ್ವಹಿಸಿದ್ದೆವು. ಕೆಲಸ ಬಿಟ್ಟ ನಂತರ ನನಗೂ ಅವಳಿಗೂ ಯಾವುದೇ ಸಂಬಂಧವಿರಲಿಲ್ಲ. ಈ ಸುಳ್ಳು ಸುದ್ದಿಯ ಬಗ್ಗೆ ನಾನು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.

ಸಾಬೂನಿನ ನೊರೆ ಬಾಯಿಯೊಳಗೆ ಹಾಕಿಕೊಂಡು ಪಿಡ್ಸ್‌ ಹೈಡ್ರಾಮ :

ಸಿಸಿಬಿ ಕಚೇರಿಯಲ್ಲಿ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಿದ ಹೈಡ್ರಾಮ ನಡೆಯಿತು. ಚೈತ್ರಾ ಪಿಡ್ಸ್‌ ಬಂದಂತೆ ನಟಿಸಿದ್ದಳು. ಪಿಡ್ಸ್‌ ಅಲ್ಲವೇ ಅಲ್ಲ ಎಂದು ತಪಾಸಣೆ ಮಾಡಿದ ವೀಕ್ಟೋರಿಯಾ ಆಸ್ಪತ್ರೆಯ ವೈದ್ಯರು ತಿಳಿಸಿದರು. ಬಟ್ಟೆ ತೊಳೆಯಲು ಕೊಟ್ಟ ಸಾಬೂನಿನ ನೊರೆಯನ್ನು ಬಾಯಿಗೆ ಹಾಕಿಕೊಂಡು ಚೈತ್ರಾ ಪಿಡ್ಸ್‌ ಬಂದಂತೆ ಕುಸಿದು ಬಿದ್ದ ನಟಿಸಿರಬಹುದು ಎಂಬ ಮಾಹಿತಿ ಮತ್ತೆ ಹೊರಗೆ ಬಂತು.

ಚೈತ್ರಾ ಪ್ರಕರಣ : ರಾಜ್ಯ ಬಿಜೆಪಿ ಬಗ್ಗೆ ಕಾಂಗ್ರೆಸ್‌ ವ್ಯಂಗ್ಯ :

‘ಬಿಜೆಪಿಯ ಟಿಕೆಟ್ ಹಗರಣದಲ್ಲಿ ದಿನಕ್ಕೊಂದೊಂದು ಹೆಸರು ಹೊರಬರುತ್ತಿವೆ. ಚೈನ್ ಚೈತ್ರಳ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ’. ‘ಟಿಕೆಟ್ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದಾರೆ ಬಸವರಾಜ ಬೊಮ್ಮಾಯಿ, ಯಾವುದಾದ್ರೂ ಹೆಣ ಕಂಡರೆ ಹಿಂದೂ ಕಾರ್ಯಕರ್ತರು ಎಂದು ಬೊಬ್ಬೆ ಹೊಡೆಯುವ ಬಿಜೆಪಿ ತನ್ನ ಕಾರ್ಯಕರ್ತರು ಅಕ್ರಮ, ಅನಾಚಾರ ನಡೆಸಿದಾಗ ಜಾರಿಕೊಳ್ಳುವುದೇಕೆ?’. ‘ಬಿಜೆಪಿಯಲ್ಲಿ ಸಿಎಂ ಹುದ್ದೆಗೆ २,५०० ಕೋಟಿ ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಬಸನಗೌಡ ಪಾಟೀಲ ಅವರು ಬಿಜೆಪಿ ಟಿಕೆಟ್ ಗೆ ७ ಕೋಟಿ ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ. ಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ. ಪಿಎಸ್‌ಐ ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು. ರೌಡಿ ಶೀಟರ್ ಗಳೂ ಬಿಜೆಪಿಗರಿಗೆ ಆಪ್ತರು. ಟಿಕೆಟ್ ಹಗರಣದ ವಂಚಕರೂ ಬಿಜೆಪಿಗರಿಗೆ ಆಪ್ತರು. ಕಳ್ಳರು, ಸುಳ್ಳರು, ವಂಚಕರು ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ?’. ‘ಕರ್ನಾಟಕದ ಬಿಜೆಪಿಯನ್ನು ಸಂತೋಷ ‘ಜಿ’ ಮುಳುಗಿಸಿದರು. ಕರ್ನಾಟಕದ ಬಿಜೆಪಿಯನ್ನು ಮೋದಿ ‘ಜಿ’ ಕೈಬಿಟ್ಟರು. ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅದ್ಯಾರೋ ವಿಶ್ವನಾಥ್ ‘ಜಿ’ ಅವರ ಸಹಾಯವನ್ನದರೂ ಪಡೆಯಿರಿ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಸಿಸಿಬಿ ಪೊಲೀಸರಿಂದ ಚೈತ್ರಾ ಆಸ್ತ ಜಪ್ತಿ :

೧.೮ ಕೋಟಿ ರೂ. ಮೌಲ್ಯದ ಆಸ್ತಿ ಪತ್ರ, ೪೦ ಲಕ್ಷ ನಗದು, ೬೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಚೈತ್ರಾ ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಹಣ, ಚಿನ್ನವನ್ನು ಇಟ್ಟಿದ್ದಳು. ಉಡುಪಿಯ ಹಿರಿಯಡ್ಕದಲ್ಲಿ ೨ ಅಂತಸ್ತಿನ ಮನೆಯನ್ನು ಕಟ್ಟಿಸುತ್ತಿದ್ದಳು. ಈ ಎಲ್ಲಾ ಸ್ವತ್ತುಗಳನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಗೋವಿಂದ ಬಾಬು ಪೂಜಾರಿ ವಿರುದ್ಧ ಗಗನ್ ದೂರು :

ಗೋವಿಂದ ಬಾಬು ಪೂಜಾರಿ ವಿರುದ್ಧ ಪೊಲೀಸ್ ಠಾಣೆಗೆ ಬಿಜೆಪಿ ಯುವ ಮುಖಂಡ, ಬಿಜೆಪಿ ಟಿಕೆಟ್ ಕೇಸ್‌ನ ಬಂಧಿತ ಆರೋಪಿ ಗಗನ್ ಕಡೂರು ಪೊಲೀಸ್ ಠಾಣೆಗೆ ಪತ್ರ ರವಾನಿಸುವ ಮೂಲಕ ದೂರು ನೀಡಿದ್ದರು. ಕೆಲ ವರ್ಷಗಳಿಂದ ನನಗೆ ಪೂಜಾರಿ ಅವರ ಪರಿಚಯವಾಗಿದೆ. ನಾನು‌ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದೆ. ಆಗ ಗೋವಿಂದ ಬಾಬು ಪೂಜಾರಿಯಿಂದ ಮದುವೆ ಸಹಾಯಕ್ಕಾಗಿ ೫೦ ಸಾವಿರ ರೂಪಾಯಿ ಹಣವನ್ನು ಸಾಲ ಪಡೆದಿದ್ದೆ. ಸಕಾಲಕ್ಕೆ ಅವರಿಗೆ ಮರು ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ನನಗೆ ಹಾಗೂ ನನ್ನ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ‌ ತಿಳಿಸಿದ್ದಾರೆ. ಈ ಬಗ್ಗೆ ನನ್ನ ಬಳಿ ಆಡಿಯೋ ರೆಕಾರ್ಡ್ ಇದೆ. ನಮಗೆ ರಕ್ಷಣೆ ನೀಡಿ. ಗೋವಿಂದ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.  ಈ ದೂರು ಪತ್ರ ಸಾಮಾಜಿಕ ಜಾಲಜಾಣದಲ್ಲಿ ವೈರಲ್ ಆಗಿದೆ.‌ ಇನ್ನು, ಚೈತ್ರಾ ಕುಂದಾಪುರ ಕೂಡ ಗೋವಿಂದ ಬಾಬು ಪೂಜಾರಿಯವರ ಅಕ್ರಮ ವ್ಯವಹಾರದ ಬಗ್ಗೆ ತನೆಖೆ ಮಾಡಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದರು.

ಹಾಲಶ್ರೀ ಸ್ವಾಮೀಜಿ ಒಡಿಶಾದಲ್ಲಿ ವಶ :

ಚೈತ್ರಾ ಕುಂದಾಪುರ ಟೀಮ್‌ ನ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹಿರೇಹಡಗಲಿ ತಾಲೂಕಿನ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬೆಂಗಳೂರು ಪೊಲೀಸ್ ನ ಅಪರಾಧ ನಿಗ್ರಹ ದಳದ ಪೊಲೀಸರು ಒಡಿಶಾದಲ್ಲಿ ವಶಕ್ಕೆ ಪಡೆದಿದ್ದಾರೆ. ದೂರುದಾರ ಗೋವಿಂದ ಬಾಬು ಪೂಜಾರಿಯಿಂದ ೧.೫ ಕೋಟಿ ರೂ.ಗಳನ್ನು ಪಡೆದು ತಲೆಮರೆಸಿಕೊಂಡಿರುವ ಸ್ವಾಮೀಜಿ ಬಗೆಗಿನ ವಿವರಗಳು ಹೊರಬಂದಿವೆ. ಅಕ್ರಮವಾಗಿ ಬಂದಿರುವ ಹಣದಿಂದಲೇ ಸ್ವಾಮೀಜಿ ಪೆಟ್ರೋಲ್ ಬಂಕ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯೂ ಈ ಹಿಂದೆ ಹೊರಗೆ ಬಂದಿತ್ತು.

ಬೆಳಕಿಗೆ ಬಂದ ಮತ್ತೊಂದು ವಂಚನೆ ಪ್ರಕರಣ :

೨೦೧೮ ರಿಂದ ೨೦೨೨ರವಗೆ ಹಂತಹಂತವಾಗಿ ೫ ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ. ಉಡುಪಿ ಮತ್ತು ಕೋಟದಲ್ಲಿ ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ, ತನ್ನನ್ನು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಚೈತ್ರಾ ನಡೆ ಬಗ್ಗೆ ಸಂಶಯಗೊಂಡು ಬಟ್ಟೆ ಅಂಗಡಿ ಹಾಕಸಿಕೊಡುವಂತೆ ಪಟ್ಟು ಹಿಡಿದಾಗ ಕೊಲೆ ಬೆದರಿಕೆ, ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಚೈತ್ರಾ ಕುಂದಾಪುರ ಬೆದರಿಕೆ ಹಾಕಿದ್ದಾಳೆ ಎಂದು ಕೂಡ ದೂರುದಾರ ಸುದಿನ ಎಂಬುವವರು ಕೋಟಾ ಠಾಣೆಗೆ ದೂರು ನೀಡಿದ್ದಾರೆ.

ಇವೆಲ್ಲದಕ್ಕೂ ಬಿಜೆಪಿ ಉತ್ತರಿಸಲಿ :

ಎಂಎಲ್‌ಎ ಟಿಕೇಟ್‌ ಕೊಡುವುದಕ್ಕೆ ಹಣ ಪಡೆಯುತ್ತಿರುವುದರ ಬಗ್ಗೆ ಬಿಜೆಪಿ ಮೇಲೆ ಸಂಶಯವಿದೆ. ಹಣ ಪಡೆದು ಟಿಕೇಟ್‌ ಕೊಟ್ಟಿರುವ ಬಗ್ಗೆ ಊಹಾಪೋಹಗಳಿವೆ. ಇವೆಲ್ಲದಕ್ಕೂ ಬಿಜೆಪಿ ಉತ್ತರಿಸಲಿ. ಸದ್ಯಕ್ಕೆ ಮಾಹಿತಿ ಇರುವ ಪ್ರಕಾರ ಹಿಂದೂ ಕಾರ್ಯಕರ್ತರೇ ಇಂತಹ ಪ್ರಕರಣದಲ್ಲಿ ಇದ್ದಾರೆ. ಕನಕಗಿರಿಯಲ್ಲೂ ಟಿಕೇಟ್‌ ಡೀಲ್‌ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಬಿಜೆಪಿಯಲ್ಲಿ ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೇಟ್‌ ಕೊಡಿಸಿದ್ದಿದೆ.

-ಜಗದೀಶ್‌ ಶೆಟ್ಟರ್‌

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!