spot_img
Tuesday, March 24, 2026
spot_img

ಜವಹರಲಾಲ್‌ ನೆಹರೂ ಅವರ ಮಧ್ಯರಾತ್ರಿಯವರೆಗಿನ ಭಾಷಣ ನಮಗೆ ಸ್ಪೂರ್ತಿ : ಪ್ರಧಾನಿ ಮೋದಿ

ನವದೆಹಲಿ : ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಇಂದು (ಸೆಪ್ಟೆಂಬರ್ 18) ಆರಂಭವಾಗಿದೆ. ಸೆಪ್ಟೆಂಬರ್ ೨೨ ರವರೆಗೆ ನಡೆಯಲಿದ್ದು, ಈ  ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಸಂಸತ್ ಕಲಾಪಕ್ಕೆ ೭೫ನೇ ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶ ನಡೆಯುತ್ತಿದ್ದು, ಹೊಸ ಸಂಸತ್ ಭವನಕ್ಕೆ ಹೋಗುವ ಮುಂಚಿತವಾಗಿ ಇತಿಹಾಸದ ಮಹತ್ವ ಪೂರ್ಣ ಕ್ಷಣಗಳನ್ನು ಮೆಲುಕು ಹಾಕಿದರು.

ಹಳೆಯ ಸಂಸತ್‌ ಭವನವು ಸ್ವಾತಂತ್ರ್ಯ ಸಂಗ್ರಾಮದ ಗುರುತಾಗಿದೆ. ಇದನ್ನು ವಿದೇಶಿ ಆಳ್ವಿಕೆದಾರರು ನಿರ್ಮಿಸಿದ್ದಾದರೂ. ಈ ಭವನವನ್ನು ನಿರ್ಮಿಸಲು ಬಳಸಲಾದ ಹಣ, ಸಂಪನ್ಮೂಲ ಹಾಗೂ ಪರಿಶ್ರಮ ಭಾರತೀಯರದ್ದು ಎಂಬುವುದನ್ನು ನಾವು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ ಎಂದರು.

ಈ ಭವನದ ನಿರ್ಮಾಣದ ಸಂದರ್ಭದಲ್ಲಿ ದೇಶದ ಜನರು ತಮ್ಮ ದೇಶಪ್ರೇಮದ ಬೆವರು ಸುರಿಸಿದ್ದಾರೆ. ಈ ಹಳೆ ಭವನವೂ ಮುಂದೆ ಪ್ರೇರಣೆಯಾಗಲಿದೆ. ಇನ್ನು ಮುಂದೆ ಅಧಿವೇಶನಗಳು ನೂತನ ಸಂಸತ್‌ ಭವನದಲ್ಲಿ ನಡೆಯಲಿದೆ.  ಈ ಸುಧೀರ್ಘ ಹಿನ್ನೆಲೆಯುಳ್ಳ ಹಳೆಯ ಸಂಸತ್‌ ಭವನವನ್ನು ಬಿಟ್ಟು ನೂತನ ಸಂಸತ್‌ ಭವನಕ್ಕೆ ತೆರಳುತ್ತಿರುವುದು ದುಃಖದ ಸಂಗತಿ. ಒಂದು ಮನೆಯನ್ನು ತೊರೆದು ಇನ್ನೊಂದು ಮನೆಗೆ ಹೋಗುವಾಗ ಎಷ್ಟು ದುಃಖವಾಗುತ್ತದೋ ಹಾಗಯೇ ಈ ಸಂದರ್ಭದಲ್ಲಿ ನಮಗೆ ದುಃಖವಾಗುತ್ತಿದೆ. ಇಲ್ಲಿ ಅನೇಕ ರಾಜಕೀಯ ಹಿನ್ನೆಲೆಗಳಿವೆ. ಅನೇಕ ಸಿಹಿ, ಕಹಿ ಘಟನೆಗಳಿಗೆ ನಾವು ನೀವೆಲ್ಲರೂ ಪಾಲುದಾರರಾಗಿದ್ದೇವೆ ಎಂದು ಅವರು ಭಾವುಕರಾದರು.

ಅನೇಕ ಐತಿಹಾಸಕ ನಿರ್ಧಾರಗಳಿಗೆ ಸಾಕ್ಷಿಯಾದ ಸಂಸತ್‌ :

ಹಲವು ದಶಕಗಳಿಂದ ಮುಂದೂಡಿಕೊಂಡು ಬಂದ ಸಮಸ್ಯೆಗಳನ್ನು ಮತ್ತು ಅವುಗಳ ಪರಿಹಾರಕ್ಕೆ ಈ ಹಳೆಯ ಸಂಸತ್‌ ಭವನ ಸಾಕ್ಷಿಯಾಗಿದೆ. ಸಬ್ ಕಾ ಸಾಥ್‌, ಸಬ್‌ ಕಾ ವಿಕಾಸ್ ಅಂತಹ ಅನೇಕ ನಿರ್ಧಾರಗಳನ್ನು ಈ ಸಂಸತ್ತಿನಲ್ಲಿ ತೆಗೆದುಕೊಳ್ಳಲಾಗಿದೆ. ೩೭೦ನೇ ವಿಧಿ, ಒನ್‌ ನೇಷನ್‌, ಒನ್‌ ಟ್ಯಾಕ್ಸ್‌, ಜಿಎಸ್‌ಟಿ ಅಂತಹ ಅನೇಕ ಯೋಜನೆಗಳಿಗೆ ಈ ಸಂಸತ್‌ ಸಾಕ್ಷಿಯಾಗಿದೆ. ಬಡವರಿಗೆ ಶೇ.೧೦ರಷ್ಟು ಮೀಸಲಾತಿ ಈ ಸದನದಲ್ಲಿ ಯಾವುದೇ ವಿವಾದವಿಲ್ಲದೆ ನಡೆದಿದೆ ಎಂದರು.

ಜವಹರಲಾಲ್‌ ನೆಹರು ಮತ್ತು ಅಟಲ್‌ ಬಿಹಾರಿ ವಾಜಿಪೇಯಿ ಅವರನ್ನು ಸ್ಮರಿಸಿದ ಮೋದಿ :

ಈ ಸದನದಲ್ಲಿ ಪಂಡಿತ್‌ ಜವಹರಲಾಲ್‌ ನೆಹರು ಅವರು ಸಂಸತ್ತಿನಲ್ಲಿ ಮಾಡಿದ ಮಧ್ಯರಾತ್ರಿಯ ಭಾಷಣ ಇಂದಿಗೂ ಪ್ರತಿಧ್ವನಿಸುತ್ತಿದೆ, ಅವರ ಪ್ರತಿ ಭಾಷಣ ನಮಗೆ ಸ್ಪೂರ್ತಿ ನೀಡಿದೆ. ಮತ್ತು ಇದೇ ಸಂಸತ್‌ ಭವನದಲ್ಲಿ ಅಟಲ್‌ ಬಿಹಾರಿ ವಾಜಿಪೇಯಿ ʼಸರ್ಕಾರಗಳು ಬರುತ್ತವೆ ಹೋಗುತ್ತವೆ, ಪಕ್ಷಗಳು ರಚನೆಯಾಗುತ್ತವೆ ಮತ್ತು ವಸ್ತರಣೆಯಾಗುತ್ತವೆ. ಈ ದೇಶ ಹಾಗೇ ಉಳಿಯಬೇಕುʼ ಎಂದು ಪದೆ ಪದೆ ಹೇಳಿರುವುದು ಇಂದಿಗೂ ಸ್ಮರಣೀಯ ಎಂದು ಅವರು ಹೇಳಿದರು.

ಸಂಸತ್ತಿನ ಮೇಲಾದ ಭಯೋತ್ಪಾದ ದಾಳಿಯನ್ನು ಸ್ಮರಿಸಿದ ಮೋದಿ :

ಯಾವುದೇ ಕಟ್ಟಡದ ಮೇಲಿನ ದಾಳಿಯಲ್ಲ. ಇದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವದ ತಾಯಿಯ ಮೇಲಿನ ದಾಳಿ. ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ.  ಆ ಘಟನೆಯನ್ನು ಮರೆಯಲು ಸಾಧ್ಯವೇ ಇಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಸಂಸತ್ತು ಮತ್ತು ಅದರ ಎಲ್ಲಾ ಸದಸ್ಯರನ್ನು ರಕ್ಷಿಸಲು ಗುಂಡಿಗೂ ಹೆದರದೆ ಎದೆಯೊಡ್ಡಿ ನಿಂತವರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಾ ಅವರೆಲ್ಲರಿಗೂ ನಮಸ್ಕರಿಸುತ್ತೇನೆ’ ಎಂದರು.

ಸಂಸತ್ತಿಗೆ ಪ್ರವೇಶಿಸುತ್ತೇನೆ ಎಂದು ನಾನು ಊಹಿಸರಲಿಲ್ಲ :

ಮೊದಲ ಬಾರಿಗೆ ನಾನು ಸಂಸದನಾಗಿ ಈ ಸಂಸತ್ತು ಪ್ರವೇಶಿಸುವಾಗ ನಾನು ಭಾವುಕನಾಗಿದ್ದೆ. ಬಡ ಕುಟುಂಬದಿಂದ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ವಾಸಿಸುತ್ತಿದ್ದ ಒಂದು ಮಗು ಸಂಸತ್ತಿಗೆ ಪ್ರವೇಶಿಸಬಹುದು ಎಂದು ನಾನು ಎಂದೂ ಊಹಿಸಿರಲಿಲ್ಲ. ದೇಶದ ಜನರಿಂದ ಇಷ್ಟೊಂದು ಪ್ರೀತಿ ದೊರಕುತ್ತದೆ ಎಂದು ನಾವು ಭಾವಿಸಿರಲಿಲ್ಲ. ಇಷ್ಟು ಪ್ರೀತಿ ಕೊಟ್ಟ ದೇಶವಾಸಿಗಳಿಗೆ ನಾನು ಕೃತಜ್ಞನಾಗಿರುತ್ತೇನೆ. ನಿಮ್ಮ ಪ್ರೀತಿಯೇ ನನಗೆ ದೇಶ ಸೇವೆ ಮಾಡುವುದಕ್ಕೆ ಸ್ಫೂರ್ತಿಯಾಗಿದೆ ಎಂದು ಅರೆಕ್ಷಣ ಭಾವುಕರಾದರು.  

ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಕಂಡಿದೆ :

ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಬಾಂಗ್ಲಾದೇಶದ ವಿಮೋಚನೆಯ ಆಂದೋಲನ ಮತ್ತು ಅದರ ಬೆಂಬಲವನ್ನು ಈ ಸದನ ಮಾಡಿದೆ. ಇದೇ ಸದನವು ತುರ್ತುಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಸಹ ನೋಡಿದೆ. ಇದು ಒಂದು ರೀತಿಯಲ್ಲಿ ದೇಶದ ಶಕ್ತಿಯನ್ನು ಜನರಿಗೆ ಅರಿಕೆ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ದೇಶದ ಅಭಿವೃದ್ಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗುವುದಿಲ್ಲ :
ನಾಳೆ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ನಾವು ನೂತನ ಸಂಸತ್ತಿಗೆ ಪ್ರವೇಶಿಸುತ್ತಿದ್ದೇವೆ. ಇನ್ನು ಮುಂದೆ ದೇಶದ ಅಭಿವೃದ್ಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗುವುದಿಲ್ಲ. ವಿಶೇಷ ಅಧಿವೇಶನವು ಐತಿಹಾಸಿಕ ಅಧಿವೇಶನವಾಗಲಿದೆ. ನಿರ್ವಿಘ್ನವಾಗಿ ಎಲ್ಲಾ ಕನಸುಗಳನ್ನು, ಎಲ್ಲಾ ಸಂಕಲ್ಪಗಳನ್ನು ಭಾರತ ಪರಿಪೂರ್ಣಗೊಳಿಸಲಿದೆ. ಸಂಸತ್ತಿನ ಅಧಿವೇಶನದ ಅವಧಿ ಕಡಿಮೆಯಿದ್ದರೂ ಇದು ಮಹತ್ವದ್ದಾಗಿದೆ. ಇದು ಐತಿಹಾಸಿಕ ನಿರ್ಧಾರಗಳ ಅಧಿವೇಶನ. ೭೫ ವರ್ಷಗಳ ಪಯಣ ಹೊಸ ಸ್ಥಳದಿಂದ ಪ್ರಾರಂಭವಾಗಲಿದ್ದು,೨೦೪೭ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಿದೆ. ಮುಂಬರುವ ಎಲ್ಲಾ ಐತಿಹಾಸಿಕ ನಿರ್ಧಾರಗಳನ್ನು ಹೊಸ ಸಂಸತ್‌ ಭವನದಲ್ಲಿ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!