spot_img
Wednesday, January 22, 2025
spot_img

ಬೆಂಗಳೂರು-ಮುರ್ಡೇಶ್ವರ ರೈಲಿಗೆ ಕುಂದಾಪುರದಲ್ಲಿ ಅದ್ದೂರಿಯ ಸ್ವಾಗತ

ಕುಂದಾಪುರ : ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ನಿತ್ಯದ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಣೆಗೊಂಡಿದ್ದು, ರವಿವಾರ ಬೆಳಗ್ಗೆ ಕುಂದಾಪುರಕ್ಕೆ ಆಗಮಿಸಿದ ಈ ರೈಲಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದಂದೇ ಈ ರೈಲು ಕುಂದಾಪುರದ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಆ ಪ್ರಯುಕ್ತ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು, ರೈಲು ಪ್ರಯಾಣಿಕರು, ಕೋಟೇಶ್ವರ ರೋಟರಿ ಕ್ಲಬ್ ಸದಸ್ಯರು, ರೈಲು ಪ್ರಯಾಣಿಕರು ಸಿಹಿ ಹಂಚಿ ಸಂಭ್ರಮಿಸಿದರು.

ಕುಂದಾಪುರದ ನಿಲ್ದಾಣಕ್ಕೆ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದ ಮಹಿಳಾ ಚೆಂಡೆ ಬಳಗವು ಚೆಂಡೆ ವಾದನದೊಂದಿಗೆ ರೈಲನ್ನು ಬರಮಾಡಿಕೊಳ್ಳಲಾಯಿತು. ರೈಲಿಗೆ ಹೂವಿನ ಮಾಲೆ ಹಾಕಿ, ಮೈಸೂರು ಸಂಸದ ಪ್ರತಾಪ್‌ಸಿಂಹ ಅವರಿಗೆ ಕೃತಜ್ಞತೆ ಸಲ್ಲಿಸುವ ಬ್ಯಾನರ್ ಅಳವಡಿಸಲಾಯಿತು.

ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ದಿನವೇ ಈ ನಿತ್ಯದ ರೈಲು ಆರಂಭಗೊಂಡಿದ್ದು, ಎಲ್ಲ ಪ್ರಯಾಣಿಕರಿಗೆ ಅನುಕೂಲ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಿ. ಪಂಚಗಂಗಾ ರೈಲಿನ ಮೇಲಿನ ಒತ್ತಡ ಒಂದಷ್ಟು ಕಡಿಮೆ ಆಗಬಹುದು. ಇದಕ್ಕೆ ಪ್ರಯತ್ನಿಸಿದ ರೈಲು ಪ್ರಯಾಣಿಕರ ಸಮಿತಿ, ಇದಕ್ಕಾಗಿ ಪ್ರಯತ್ನಿಸಿದ ಎಲ್ಲ ಜನಪ್ರತಿನಿಧಿಗಳಿಗೂ ಕೃತಜ್ಞತೆಗಳು ಎಂದು ಶಾಸಕ ಕಿರಣ್ ಕೊಡ್ಗಿ ಹೇಳಿದರು.

ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಈ ರೈಲಿಗೆ ಒಂದು ವರ್ಷದಿಂದ ನಿರಂತರವಾಗಿ ಪ್ರಯತ್ನಿಸಿದ್ದು, ಮೈಸೂರು ಸಂಸದ ಪ್ರತಾಪ್‌ಸಿಂಹ ಅವರ ಪ್ರಯತ್ನ, ಮಂಗಳೂರು, ಉಡುಪಿ ಸಂಸದರು ಹಾಗೂ ಅನೇಕ ಮಂದಿ ಜನಪ್ರತಿನಿಧಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ. ಪ್ರಧಾನಿ ಮೋದಿ ಅವರ ಜನ್ಮ ದಿನದಂದೇ ಈ ರೈಲು ಕುಂದಾಪುರಕ್ಕೆ ಬಂದಿರುವುದು ಖುಷಿಯ ವಿಚಾರ ಎಂದರು.

ಸದಸ್ಯರಾದ ಗೌತಮ್ ಶೆಟ್ಟಿ, ವಿವೇಕ್ ನಾಯಕ್ ಮಾತನಾಡಿದರು.

ಈ ಸಂದರ್ಭದಲ್ಲಿ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಮೊಗವೀರ, ಸಹಾಯಕ ಗವರ್ನರ್ ಮೊಳಹಳ್ಳಿ ಗಣೇಶ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಸತೀಶ್ ನಾಯಕ, ವರದರಾಜ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮಾರ್ಕೋಡು, ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾ.ಪಂ. ಸದಸ್ಯ ನಾಗರಾಜ ಆಚಾರ್ ಹಂಗಳೂರು, ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸುರೇಂದ್ರ ಕಾಂಚನ್, ಕ್ಲೀನ್ ಕುಂದಾಪುರದ ಭರತ್ ಬಂಗೇರ, ಸಮಿತಿಯ ಸದಸ್ಯರಾದ ಕೆಂಚನೂರು ಸೋಮಶೇಖರ್ ಶೆಟ್ಟಿ, ರಾಘವೇಂದ್ರ ಶೇಟ್, ಉದಯ ಭಂಡಾರ್ಕರ್, ಅಭಿಜಿತ್ ಸಾರಂಗ, ಪೃಥ್ವಿ ಕುಂದರ್, ವಿಶಾಲ್ ಶೆನೋಯ್ ಪ್ರವೀಣ್, ಜೋಯ್ ಕರ್ವಾಲೊ, ಸುಧಾಕರ್ ಶೆಟ್ಟಿ, ವಿವೇಕ್ ನಾಯಕ್, ಯು.ಎಸ್. ಶೇನೋಯ್, ಶ್ರೀಧರ್ ಸುವರ್ಣ, ರಾಜೇಶ್, ಪದ್ಮನಾ‘ ಶೆನೋಯ್, ರಾಜೇಶ್ ಕಾವೇರಿ, ಚಿದಂಬರ್ ಉಡುಪ, ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!