spot_img
Tuesday, April 28, 2026
spot_img

ಕೋಟ ವಿವೇಕದಲ್ಲಿ ವಿಶಿಷ್ಟ ಸಾಧಕರಿಗೆ ಸಂಮ್ಮಾನ


ಕೋಟ: ವಿವೇಕ ಪದವಿಪೂರ್ವ ಕಾಲೇಜಿನ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಾಣಿಜ್ಯ ವಿಭಾಗದ 132 ಹಾಗು ಕಲಾ ವಿಭಾಗದ 4 ವಿದ್ಯಾರ್ಥಿಗಳನ್ನು ಬೇರೆ-ಬೇರೆ ಸಮಾರಂಭಗಳಲ್ಲಿ ಪುರಸ್ಕರಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕ ವಿದ್ಯಾಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿ, ಪ್ರಸ್ತುತ ಪಿ.ಎಂ. ಪೋಷಣ್ ಅಕ್ಷರ ದಾಸೋಹ ವಿಭಾಗ ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕ ವಿವೇಕಾನಂದ ವಿ.ಗಾಂವ್ಕರ್, ವಿವೇಕ ವಿದ್ಯಾಸಂಸ್ಥೆ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಇಲ್ಲಿ ಪಾಠದ ಜೊತೆಗೆ ಪಾಠೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವುದರ ಜೊತೆಗೆ ಜೀವನದಲ್ಲಿ ಶಿಸ್ತು, ನಡೆ-ನುಡಿ, ನೀತಿ, ಸಂಸ್ಕಾರಗಳನ್ನು ಕಲಿಸುತ್ತದೆ. ದೀರ್ಘ ಇತಿಹಾಸವುಳ್ಳ ಈ ವಿದ್ಯಾಸಂಸ್ಥೆ ಸಮಾಜಕ್ಕೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಆದರ್ಶ ಗುಣಗಳನ್ನು ಹೊಂದಿದ ಅನೇಕ ಪ್ರತಿಭಾವಂತರನ್ನು ನೀಡಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ದಾಖಲಾತಿ ಪ್ರವೇಶ ದೊರಕಿ ವಿದ್ಯಾಭ್ಯಾಸ ಮಾಡುವುದೇ ಒಂದು ಹೆಮ್ಮೆ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ವಾಣಿಜ್ಯ ಕಲಾ ವಿಷಯಗಳ ಬಗ್ಗೆ ಕೀಳರಿಮೆ ಇರಿಸಿಕೊಳ್ಳದೇ ತಮಗೆ ಇಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಘ, ಕೋಟ ಇದರ ಅಧ್ಯಕ್ಷರಾದ ಸಿ.ಎ. ಪ್ರಭಾಕರ ಮಯ್ಯ ಮಾತನಾಡಿ, ಈ ವರ್ಷದ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಪ್ರಶಂಸಿಸಿ, ಮಾತನಾಡಿ ಕಠಿಣವಾದ ಪರಿಶ್ರಮ, ಅಚಲವಾದ ಶ್ರದ್ಧೆ ವಿದ್ಯಾರ್ಥಿ ಗುರಿ ತಲುಪುವಲ್ಲಿ ಸಹಕರಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಾಪಕರು ಬೋಧಿಸುವ ವಿಷಯವನ್ನು ಚೆನ್ನಾಗಿ ಅರಿತು ಒಳ್ಳೆಯ ಸಂಸ್ಕಾರವಂತರಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಬೇಕೆಂದು ತಿಳಿಸಿದರು.

ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ, ಕೋಶಾಧಿಕಾರಿ ವಲೇರಿಯನ್ ಮೆನೇಜಸ್ ಇವರು ಶುಭಾಶಂಸನೆಗೈದರು.
ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ 132 ವಿದ್ಯಾರ್ಥಿಗಳನ್ನು ಹಾಗು ಕಲಾ ವಿಭಾಗದ 4ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಕುಮಾರಿ ಅದಿತಿ ಹೊಳ್ಳ ಹಾಗು ರಾಜ್ಯಕ್ಕೆ 7ನೇ ಸ್ಥಾನ ಗಳಿಸಿದ ನಿಶಾ ವೈಷ್ಣವ್ ಇವರನ್ನು ಪೋಷಕರ ಜೊತೆಯಲ್ಲಿ ಸಂಮಾನಿಸಲಾಯಿತು.

ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮಾನಂದ ಭಟ್, ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ, ಮುಖ್ಯ ಸಹಶಿಕ್ಷಕರಾದ ವೆಂಕಟೇಶ ಉಡುಪ, ಅಚ್ಚುತ ಉಪಾಧ್ಯ ಉಪಸ್ಥಿತರಿದ್ದರು.

ವಿಶೇಷ ಸಾಧನೆಗೈದ ಪಟ್ಟಿಯನ್ನು ಶೋಭಾ ಅವಭೃತ, ಶ್ರೀಕಾಂತ ಚಡಗ ವಾಚಿಸಿದರು. ಜಯಶ್ರೀ, ಅಮಿತ್ ಕಾರ್ಯಕ್ರಮ ನಿರ್ವಹಿಸಿದರು, ಅಂಬಿಕಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!