spot_img
Wednesday, January 22, 2025
spot_img

ಗುರು ಪೂರ್ಣಿಮಾ

ಜುಲೈ 3 ರಂದು ಗುರು ಪೂರ್ಣಿಮಾವನ್ನು ಆಚರಿಸುತ್ತಾರೆ.  ಆಷಾಡ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮಾ ಆಚರಿಸಲಾಗುತ್ತದೆ. 

ಗುರುಬ್ರಹ್ಮ ಗುರುವಿಷ್ಣು 

ಗುರುದೇವೋ ಮಹೇಶ್ವರ 

ಗುರುಸಾಕ್ಷಾತ್ ಪರಬ್ರಹ್ಮ

 ತಸ್ಮೖೆ ಶ್ರೀ ಗುರುವೇ ನಮಃ  

ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಎಲ್ಲಾ ಮಕ್ಕಳಿಗೂ ತಾಯಿ ತಂದೆಯೇ ಮೊದಲ ಗುರು. ಮನೆಯ ಮೊದಲ ಪಾಠ ಶಾಲೆ ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿ ತಾಯಿ. ಇಲ್ಲಿ  ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ ಪವಿತ್ರವಾದದ್ದು, ಜವಬ್ದಾರಿಯುತವಾದದ್ದು. ಈ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಸೃಷ್ಟಿಕರ್ತರು ಗುರು. ಮನುಷ್ಯನಾದ ಮೇಲೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಂಡಿರುತ್ತಾರೆ. ಗುರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವರು ಗುರು. ‘ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು’ ಅನ್ನೋ ಗಾದೆ ಮಾತು ತುಂಬಾ ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು..  ತಲುಪಬೇಕೆಂದರೆ ಗುರುವಿನ ಸಲಹೆ, ಸಹಕಾರ ಮತ್ತು 

ಮಾರ್ಗದರ್ಶನ ಇರಲೇಬೇಕು.  ಗುರುಗಳ ಸಹಾಯದಿಂದ ಮಾತ್ರ ನಾವು ಅಂದುಕೊಂಡ ಗುರಿ ತಲುಪಬಹುದು. ಗುರುವೇಂದರೆ ಕೇವಲ ಶಿಕ್ಷಕರಲ್ಲ ಜೀವನದಲ್ಲಿ ಸರಿಯಾದದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ ಇಂತಹ ಎಲ್ಲಾ ಗುರುವೃಂದಕ್ಕೂ ಗುರು ಪೂರ್ಣಿಮೆಯ ಶುಭಾಶಯಗಳು. 

     – ವಿ.ಎಂ.ಎಸ್.ಗೋಪಿ 

       ಲೇಖಕರು, ಸಾಹಿತಿಗಳು ಬೆಂಗಳೂರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!