Sunday, September 8, 2024

ಡಾ.ಜಿ.ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಗ್ರಂಥಾಲಯದ ಫೋಟೊ ಗ್ಯಾಲರಿಯ ಉದ್ಘಾಟನೆ


ಉಡುಪಿ: ಡಾ.ಜಿ.ಶಂಕರ್ ಮಹಿಳಾ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ ಇದರ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಪ್ರದರ್ಶನ, ಗ್ರಂಥಾಲಯದ ಫೋಟೊ ಗ್ಯಾಲರಿಯ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ನಡೆಯಿತು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಕೆ ಕಾರ್‍ಯಕ್ರಮ ಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ 4 ವರ್ಷ ಸತತವಾಗಿ ಓದಬೇಕು. ಓದುವಾಗಲೇ ಯಾವುದು ಆಸಕ್ತಿ ಇದೆಯೋ ಅದನ್ನೇ ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ತಾತ್ವಿಕ ಚಿಂತನೆ ಇರಬೇಕು. ದಿನಪತ್ರಿಕೆ ಓದಿ ನೋಟ್ ಮಾಡಬೇಕು. ಕಿರಣ್ ಬೇಡಿ, ಕಲ್ಪನಾಚಾವ್ಲ, ಮದರ್ ತೆರೆಸಾರವರ ಸಾಧನೆ ಬಗ್ಗೆ ತಿಳಿಸಿದರು ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯ ಐ.ಎ.ಎಸ್., ಕೆ.ಎ.ಎಸ್. ಪೂರ್ವತಯಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂ‌ಎಸಿ ಸಂಚಾಲಕರಾದ ಸೋಜನ್ ಕೆ.ಜಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ವಾಣಿ ಬಲ್ಲಾಳ್, ಕನ್ನಡ ಪ್ರಾದ್ಯಾಪಕರಾದ ಡಾ. ನಿಕೇತನರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇತಿಹಾಸ ಪ್ರಾದ್ಯಾಪಕರಾದ ರಾಮ್‌ದಾಸ್ ಪ್ರಭು, ಗುರುರಾಜ್ ಪ್ರಭು, ಹಾಗೂ ಪತ್ರಿಕೋದ್ಯಮ ಪ್ರಾದ್ಯಾಪಕ ಸಚ್ಚೇಂದ್ರ, ಗ್ರಂಥಾಲಯ ಸಿಬ್ಬಂದಿಗಳಾದ ಶಮ್ಮಿ ಕೆ. ವಿಜಯಲಕ್ಷ್ಮಿ, ಲಾವಣ್ಯ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕಾರ್‍ಯಕ್ರಮದ ಸಂಯೋಜಕಿ ಹಾಗೂ ಆಯ್ಕೆ ಶ್ರೇಣಿ ಗ್ರಂಥಾಪಾಲಕರಾದ ಶ್ರೀಮತಿ ಯಶೋದಾರವರು ಸ್ವಾಗತಿಸಿ, ಪ್ರಸ್ತಾವನೆಗೈದರು. ದ್ವಿತೀಯ ಪದವಿಯ ಶ್ರೀಲಕ್ಷ್ಮೀ ಮತ್ತು ತಂಡದವರು ಪ್ರಾರ್ಥಿಸಿ, ಮಂಗಳಗೌರಿ ವಿಷ್ಣು ಭಟ್ ಅತಿಥಿಯನ್ನು ಪರಿಚಯಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಚೈತ್ರಾರವರು ಕಾರ್‍ಯಕ್ರಮ ನಿರೂಪಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿಯಾದ ವಾಣಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!