spot_img
Monday, April 27, 2026
spot_img

ಬೈಂದೂರು ಕ್ಷೇತ್ರಕ್ಕೆ 23 ಮೊಬೈಲ್ ಟವರ್ ಮಂಜೂರು


ಬೈಂದೂರು, ಜೂ.24: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ 23 ಮೊಬೈಲ್ ಮಂಜೂರಾಗಿದೆ. ತೀವ್ರ ನೆಟ್‌ವರ್ಕ್ ಸಮಸ್ಯೆ ಎದುರಿಸಿದ್ದ ಗ್ರಾಮಾಂತರ ಪ್ರದೇಶಗಳಿಗೆ ಮೊಬೈಲ್ ಟವರ್ ಮಂಜೂರಾಗಿದೆ.

ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ನಾಗರಮಕ್ಕಿ, ಬೈಂದೂರು ಗ್ರಾಮದ ಕಲ್ಮಕ್ಕಿ ಗಂಗನಾಡು, ಕಾಲ್ತೋಡು ಗ್ರಾಮದ ಬೊಳಂಬಳ್ಳಿ, ತಗ್ಗರ್ಸೆ ಗ್ರಾಮದ ಮೂಡಣಗದ್ದೆ, ಗೋಳಿಹೊಳೆ ಗ್ರಾಮದ ಚುಚ್ಚಿ, ಹಳ್ಳಿಹೊಳೆ ಗ್ರಾಮದ ಕುಂದ್ಲಬೈಲು, ಕುಂದಾಪುರ ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಕುಕ್ಕಡ, ಹೊಸೂರು ಗ್ರಾಮದ ಮರದಹಕ್ಲು, ಬೆಳ್ಳಾಲ ಗ್ರಾಮ ಉರುಬೈಲು, ಮಚ್ಚಟ್ಟು ಗ್ರಾಮದ ಹಂಚಿಕಟ್ಟೆ, ಬೆಳ್ಳಾಲ ಗ್ರಾಮದ ನಂದ್ರೋಳ್ಳಿ, ಕಮಲಶಿಲೆ ಗ್ರಾಮದ ಯಳಬೇರು, ಕಮಲಶಿಲೆ ಗ್ರಾಮದ ಆರ್‍ಗೊಡು, ಹೊಸಂಗಡಿ ಗ್ರಾಮದ ಬೆಚ್ಚಳ್ಳಿ, ತೊಂಬಟ್ಟು ಗ್ರಾಮದ ಮಾವಿನಕೊಡ್ಲು, ಹೊಸಂಗಡಿ ಗ್ರಾಮದ ಹೆಗ್ಗೊಡ್ಲು, ಸಿದ್ಧಾಪುರ ಗ್ರಾಮದ ಸೋಣಿ/ಮಾನಂಜೆ, ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ಬಸ್ರಿಬೇರು, ಕೊಲ್ಲೂರು ಗ್ರಾಮದ ದಳಿ, ಯಡ್ತರೆ ಗ್ರಾಮದ ಹೊಸೂರು, ಹಳ್ಳಿಹೊಳೆ ಗ್ರಾಮದ ಕುಂದ್ಲಬೈಲು-ಇರಿಗೆ ಇಲ್ಲಿಗೆ ಮೊಬೈಲ್ ಟವರ್ ಮಂಜೂರಾತಿ ಆಗಿದೆ.

ಇನ್ನೂ ಕೂಡಾ ಅವಶ್ಯತೆ ಇದ್ದಲ್ಲಿಗೆ ಮೊಬೈಲ್ ಟವರ್ ಬೇಡಿಕೆ ಸಲ್ಲಿಸಲು ಅವಕಾಶವಿದೆ, ಡಿಸೆಂಬರ್ 2023ರೊಳಗೆ ಬೈಂದೂರು ಕ್ಷೇತ್ರದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಪರಿಹಾರವಾಗಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ. ಅವರು ಶುಕ್ರವಾರ ಹೆಮ್ಮಾಡಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದ ಈ ಕುರಿತು ಮಾತನಾಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!