Sunday, September 8, 2024

ವಿವೇಕದಲ್ಲಿ ಇ.ವಿ.ಎಂ. ತಂತ್ರಾಂಶದ ಮೂಲಕ ಮತದಾನ

ಕೋಟ: ವಿವೇಕ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಸಂಸತ್ತನ್ನು ರಚಿಸಲು ಇಂದು ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಸಂಸದೀಯ ಮಾದರಿಯಲ್ಲಿ ಇವಿಎಂ ಆಪ್ ಬಳಸಿ ಚುನಾವಣೆಯನ್ನು ನಡೆಸಲಾಯಿತು ಮೊದಲಿಗೆ ಪ್ರತೀ ತರಗತಿಯಲ್ಲಿ ತರಗತಿ ಮುಖಂಡ ಉಪಮುಖಂಡ ಆಯ್ಕೆ ಮಾಡಿ ತರಗತಿಗಳಲ್ಲಿ ನಾಲ್ಕು ನಿಲಯಗಳನ್ನಾಗಿ ಮಾಡಿ ನಿಲಯ ಮುಖಂಡರು ಗಳನ್ನು ಆಯ್ಕೆ ಮಾಡಲಾಯಿತು.

ಕಾಲೇಜಿನ ಪ್ರಾಂಶುಪಾಲರಿಂದ ಚುನಾವಣಾ ದಿನಾಂಕ ಮತ್ತು ಸಮಯ ಪ್ರಕಟಗೊಂಡ ಬಳಿಕ ವಿದ್ಯಾರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಯಿತು. ಆಮೇಲೆ ನಾಮಪತ್ರ ಪರಿಶೀಲನೆ ನಾಮಪತ್ರ ಹಿಂಪಡೆಯುವಿಕೆ ಪ್ರಕ್ರಿಯೆ ನಡೆದ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗೂ ಇವಿಎಂ ಆಪ್ ಬಳಸಿ ಮತದಾನ ಮಾಡಲು ಅವಕಾಶ ನೀಡಲಾಯಿತು. ಪ್ರತಿ ತರಗತಿಯನ್ನು ಒಂದೊಂದು ಮತಗಟ್ಟೆಯನ್ನಾಗಿ ಮಾಡಿ ಉಪನ್ಯಾಸಕ ಅಧ್ಯಾಪಕ ಸಿಬ್ಬಂದಿ ವರ್ಗದವರನ್ನು ಪೋಲಿಂಗ್ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾದರು, ಇವಿಎಂ ಆಪ್ ಬಗ್ಗೆ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡಲಾಗಿತ್ತು. ಮತದಾನದ ನಂತರ ಪೊಲೀಸ್ ಭದ್ರತೆಯಲ್ಲಿ ಇವಿಎಂ ಮೆಷಿನ್ ಗಳನ್ನು ಭದ್ರತಾ ಕೊಠಡಿಗೆ ತಂದು ಅಭ್ಯರ್ಥಿಗಳ ಎದುರೇ ಮತ ಎಣಿಕೆ ಪ್ರಕ್ರಿಯೆಯನ್ನು ನಡೆಸಿ ಫಲಿತಾಂಶ ಘೋಷಿಸಲಾಯಿತು.

ಕಾಲೇಜ್ ವಿಭಾಗದಿಂದ ಏಳು ಉಮೇದುವಾರು ಪ್ರೌಢಶಾಲಾ ವಿಭಾಗದಿಂದ ನಾಲ್ಕು ಉಮೇದುವಾರುಗಳು ಸ್ಪರ್ಧಿಸಿದ್ದರು. ಅತ್ಯಂತ ಶಿಸ್ತು ಬದ್ಧವಾಗಿ ನಡೆದ ಚುನಾವಣೆಯಲ್ಲಿ ಕಾಲೇಜು ವಿಭಾಗದಿಂದ ವಿದ್ಯಾರ್ಥಿ ನಾಯಕನಾಗಿ ಶರಣ್ ಯು ಹಾಗೂ ಹೈಸ್ಕೂಲ್ ವಿಭಾಗದಿಂದ ಪಂಕಜ್ ಉಪನಾಯಕನಾಗಿ ಆಯ್ಕೆಯಾದರು.

ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡರವರು ಮಾರ್ಗದರ್ಶನ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಇವಿಎಂ ಮೂಲಕ ಮತದಾನ ಮಾಡುವ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ ಎಂದು ತಿಳಿಸಿದರು

ಚುನಾವಣಾ ಅಧಿಕಾರಿಗಳಾಗಿ ಗಣೇಶ್ ಕುಮಾರ್ ಶೆಟ್ಟಿ ಹಾಗೂ ಶ್ರೀಮತಿ ರತಿ ಸಹಕರಿಸಿದರು. ವೆಂಕಟೇಶ ಉಡುಪ ಹಾಗೂ ವಸಂತ ಶೆಟ್ಟಿ ಉಪಸ್ಥಿತರಿದ್ದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!