spot_img
Monday, April 27, 2026
spot_img

ಕಲೆಗಳಿಂದ ಬೌದ್ಧಿಕ ಸ್ಪಾಸ್ಥ್ಯ-ಪ್ರಾಚಾರ್ಯ ಸದಾನಂದ ಐತಾಳ


ಕೋಟ: ವಿದ್ಯಾರ್ಥಿಗಳಲ್ಲಿ ಶಿಸ್ತು, ನಿಷ್ಠೆ, ಪ್ರಾಮಾಣಿಕತೆಯ ಅಗತ್ಯತೆ ಇದೆ. ಇವುಗಳು ಇರುವವರಲ್ಲಿ ಯಶಸ್ಸು ಖಂಡಿತಾ ಇದೆ. ಇವುಗಳಿಗಾಗಿ ಚಿಕ್ಕಂದಿನಿಂದಲೇ ಮಾನಸಿಕ ಸಿದ್ದತೆ ಬೇಕು. ಇವನ್ನು ಭಾರತೀಯ ಕಲೆಗಳು ನೀಡುತ್ತವೆ. ಪ್ರತಿ ಒಬ್ಬ ಪೋಷಕರು ಈ ಬಗ್ಗೆ ಆಸಕ್ತಿ ವಹಿಸಿದಲ್ಲಿ ಭಾರತೀಯ ಸಂಸ್ಕ್ರತಿ, ಸ್ವಾಸ್ಥ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ಕರಾವಳಿ ಭಾಗದಲ್ಲಿ ಲಭ್ಯವಿರುವ ಯಕ್ಷಗಾನವು ಬೌದ್ದಿಕ, ಶಾರೀರಿಕ ಮತ್ತು ಸಾಂಸ್ಕ್ರತಿಕ ಬೆಳವಣಿಗೆಯನ್ನೂ, ಸ್ವಾಸ್ಥ್ಯವನ್ನೂ ಮಕ್ಕಳಿಗೆ ನೀಡುತ್ತದೆ. ಇಂದು ಯಕ್ಷಗಾನ ಕಲಾಕೇಂದ್ರವು ಪ್ರಾರಂಭಿಸಿರುವ ಯಕ್ಷಗಾನ ಹೆಜ್ಜೆ, ಭಾಗವತಿಕೆ, ಚಂಡೆ ತರಗತಿಗೆ ಸೇರ್ಪೆಡೆಗೊಂಡ ವಿದ್ಯಾರ್ಥಿಗಳ ಸಂಖ್ಯೆ ಗಮನಿಸಿದರೆ ಸಮಾಜದಲ್ಲಿ ಸಾಂಸ್ಕ್ರತಿಕ ಜಾಗೃತಿ ಉಂಟಾಗಿದೆ ಎಂದು ಭಾವಿಸಬಹುದೆಂದು ಪ್ರಾಚಾರ್ಯ ಸದಾನಂದ ಐತಾಳರು ಅಭಿಪ್ರಾಯಪಟ್ಟರು.

ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿಯವರು ಆಯೋಜಿಸಿದ್ದ 2023-24 ರ ಸಾಲಿನ ಯಕ್ಷಗಾನ ತರಗತಿಗಳನ್ನು ಉದ್ಧಾಟಿಸಿ ಮಾತನಾಡುತ್ತಿದ್ದರು.

ಐವತ್ತರ ಸಂಭ್ರಮದ ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷರಾದ ಆನಂದ .ಸಿ. ಕುಂದರ ವಹಿಸಿದ್ದರು. ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಮಕ್ಕಳಲ್ಲಿ ಕಲೆಯ ಅಭಿರುಚಿ ಹುಟ್ಟಿದಲ್ಲಿ ಅವರ ಮನಸ್ಸು ಸಂಸ್ಕಾರಗೊಳ್ಳುತ್ತದೆ ಕಲಿಸಿದ ಸಂಸ್ಥೆ ಮತ್ತು ಗುರುಗಳಲ್ಲಿ ನಿಷ್ಠೆ ಬೆಳೆಸಿಕೊಳ್ಳಬೇಕು ತನ್ಮೂಲಕ ಉತ್ತಮ ಕಲಾವಿದರೂ ಅನುಕರಣೀಯ ನಾಗರಿಕರಾಗಿ ಬೆಳೆಯಬೇಕೆಂದು ಹಾರೈಸಿದರು.

ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮ ವೇದಿಕೆಯಲ್ಲಿ ಗುರುಗಳಾದ ಉದಯ ಕುಮಾರ ಹೊಸಾಳ, ಕೋಟ ಶಿವಾನಂದ, ಗಣೇಶ ಚೇರ್ಕಾಡಿ ಉಪಸ್ಥಿತರಿದ್ದರು.

ಸೇರ್ಪಡೆಗೊಂಡ ಸುಮಾರು 94 ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿ. ಪ್ರಸ್ತಾವನೆಗೈದರು ಸೀತಾರಾಮ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರೆ. ರಾಮ ಬಾಯರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!