spot_img
Sunday, June 14, 2026
spot_img

10 ರೂ ನಾಣ್ಯಗಳ ಸಂಗ್ರಹಿಸಿ ಸ್ಕೂಟರ್ ಖರೀದಿಸಿದ ಮಹಿಳೆ!


ಕುಂದಾಪುರ: ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಸಂಗ್ರಹಿಸಿ, ಆ ಹಣದಿಂದಲೇ ಸ್ಕೂಟರ್ ಖರೀದಿಸುವ ಮೂಲಕ ಮಹಿಳೆಯೊಬ್ಬರು ಗಮನ ಸಳೆದಿದ್ದಾರೆ. ಕೋಟೇಶ್ವರ ಅಂಕದಕಟ್ಟೆಯಲ್ಲಿರುವ ಶ್ರೀ ವಿನಾಯಕ ಮೊಟಾರ್ಸ್ ಸುಜುಕಿ ಶೋರೂಂನಲ್ಲಿ ರುಬಿನಾ ಬೇಗಂ ಎನ್ನುವ ಗ್ರಾಹಕರು ಒಂದು ಲಕ್ಷ ಬೆಲೆಯ suzuki access 125 ಸ್ಕೂಟರ್ ಅನ್ನು ಹತ್ತು ರೂಪಾಯಿ ಮುಖಬೆಲೆಯ ಹತ್ತು ಸಾವಿರ ನಾಣ್ಯಗಳನ್ನು ನಗದು ರೂಪದಲ್ಲಿ ನೀಡಿ ಖರೀದಿ ಮಾಡಿದ್ದಾರೆ.

ಕೇವಲ ಹತ್ತು ರೂಪಾಯಿ ಕಾಯಿನ್‍ಗಳ ಸಂಗ್ರಹಿಸಿ , ಆ ಹಣದಿಂದಲೇ ಸ್ಕೂಟರ್ ಖರೀದಿಸುವ ಸಂಕಲ್ಪವನ್ನು ಗ್ರಾಹಕಿ ಈಡೇರಿಸಿಕೊಂಡಿದ್ದಾರೆ.

ಒಂದು ಲಕ್ಷ ಮೌಲ್ಯವನ್ನು ನಾಣ್ಯಗಳ ಮೂಲಕ ತಗೆದುಕೊಳ್ಳುವ ಮೂಲಕ ಶ್ರೀ ವಿನಾಯಕ ಮೊಟಾರ್ಸ್ ಸುಜುಕಿ ಶೋರೂಂನ ರಾಧಾಕೃಷ್ಣ ಅವರು ಹೊಸ ಅನುಭವ ಪಡೆದಿದ್ದಾರೆ. ಹತ್ತು ರೂಪಾಯಿ ನಾಣ್ಯ ಒಂದು ಲಕ್ಷ ಮೌಲ್ಯವಾಗಲು 10 ಸಾವಿರ ನಾಣ್ಯ ಆಗುತ್ತದೆ. ಇದರ ಒಟ್ಟು ತೂಕ ಸುಮಾರು 80 ಕೆಜಿ ಆಗುತ್ತದೆ. ಇಷ್ಟೊಂದು ಪ್ರಮಾಣದ ನಾಣ್ಯವನ್ನು ಎಣಿಸುವುದು ಕೂಡಾ ಒಂದು ಸವಾಲೇ ಸರಿ. ಸಂಸ್ಥೆಯ ಮಾಲಕರು. ಸಿಬ್ಬಂದಿಗಳು ಇದನ್ನು ಖುಷಿಯಿಂದ ಸ್ವೀಕರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!