Sunday, September 8, 2024

ಅನ್ನಭಾಗ್ಯ ಯೋಜನೆಯಲ್ಲಿ ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ-ವಿಕಾಸ್ ಹೆಗ್ಡೆ


ಕುಂದಾಪುರ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿ‌ಎ-2 ಸರ್ಕಾರ ಅಧಿಕಾರದಲ್ಲಿ ಇರುವಾಗ ಜಾರಿಗೆ ತಂದ ಹಲವಾರು ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಆಹಾರ ಭದ್ರತಾ ಕಾಯಿದೆಯೂ ಒಂದು, ಇದು ಯುಪಿ‌ಎ ಅಧ್ಯಕ್ಷರಾಗಿರುವಾಗ ಸೋನಿಯಾ ಗಾಂಧಿಯವರ ಕನಸಿನ ಕಾಯಿದೆ. ಈ ಕಾಯಿದೆ ಜಾರಿಗೆ ತರುವಾಗ ಸೋನಿಯಾ ಗಾಂಧಿಯವರು ಹೇಳಿದ ಮಾತು ದೇಶದ ಎಷ್ಟೋ ತಾಯಂದಿರು ಹಸಿದ ಹೊಟ್ಟೆಯಲ್ಲಿ ಮಲಗುತ್ತಾರೆ, ಅವರು ತಮ್ಮ ಪತಿ ಮಕ್ಕಳ ಹೊಟ್ಟೆಗೆ ಕಿಂಚಿತ್ತು ಕೊಟ್ಟು ತಾವು ಒಂದು ಲೋಟ ನೀರು ಕುಡಿದು ಮಲಗುತ್ತಾರೆ, ಎಷ್ಟೋ ತಾಯಂದಿರು ತಮ್ಮ ಸೀರೆ ಸೆರಗಿನಲ್ಲಿ ಒಂದಿಷ್ಟು ಚಿಲ್ಲರೆ ಕಟ್ಟಿಕೊಂಡಿರುತ್ತಾರೆ ಇದೂ ಸಹ ತನ್ನವರ ಹಸಿವನ್ನು ನೀಗಿಸಲು, ಇನ್ನು ಎಷ್ಟೋ ಕಂದಮ್ಮಗಳು ಮೂರು ಹೊತ್ತಿನ ಊಟಕ್ಕೂ ಸಹ ಪರಿತಪಿಸಬೇಕಾದ ಸ್ಥಿತಿ ಇದೆ ಇಂಥಹ ಅದೆಷ್ಟೋ ಹಸಿದ ಹೊಟ್ಟೆಯ ಹಸಿವನ್ನು ನೀಗಿಸಲು ಈ ಆಹಾರ ಭದ್ರತಾ ಕಾಯಿದೆ ಜಾರಿಗೆ ತರಲಾಯಿತು. ಈ ಆಹಾರ ಭದ್ರತಾ ಕಾಯಿದೆಯ ಭಾಗವೇ ೨೦೧೩ ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ದಿನದಂದೆ ಜಾರಿಗೆ ತಂದ ಯೋಜನೆ ಅನ್ನಭಾಗ್ಯ, ಅದೆಷ್ಟೋ ಹಸಿದ ಹೊಟ್ಟೆಯ ಹಸಿವನ್ನು ನೀಗಿಸಿದ ಕ್ರಾಂತಿಕಾರಿ ಯೋಜನೆ, ಕೋವಿಡ್ ಸಂದರ್ಭದಲ್ಲಿ ಇಡೀ ಪ್ರಪಂಚವೇ ಹಸಿವಿನಿಂದ ಕಂಗೆಟ್ಟಾಗ ಕರ್ನಾಟಕದಲ್ಲಿ ಹಸಿದ ಹೊಟ್ಟೆಯ ಹಸಿವನ್ನು ನೀಗಿಸಿದ್ದಿದ್ದರೆ ಅನ್ನಭಾಗ್ಯದ ಅಕ್ಕಿ. ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಬಿಜೆಪಿಯವರು ಟೀಕಿಸಿದರು ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಅಕ್ಕಿಕೊಟ್ಟು ಅವರನ್ನು ಸೋಮಾರಿಗಳನ್ನಾಗಿ ಮಾಡುತ್ತೀರಿ ಎಂದು ಮತ್ತೆ ಏಳು ಕೆಜಿ ಇದ್ದ ಅಕ್ಕಿಯನ್ನು ಐದು ಕೆಜಿಗೆ ಇಳಿಸಿದರು. ಈಗ ಕಾಂಗ್ರೆಸ್ ಗ್ಯಾರಂಟಿಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹತ್ತು ಕೆಜಿಗೆ ಏರಿಸುವ ಕಾರ್ಯಕ್ರಮಕ್ಕೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಅಂದರೆ ಕೇಂದ್ರದ ಪಾಲು ನೀಡಲು ತಡೆಯೊಡ್ಡುತ್ತಿದೆ. ಇದೇನು ಅವರು ನಮಗೆ ಪುಕ್ಕಟೆ ನೀಡುವುದಲ್ಲ. ಅದು ನಮ್ಮ ಹಕ್ಕು, ಇವತ್ತು ಆಹಾರ ಸಂರಕ್ಷಣಾ ಗೋದಾಮುಗಳಲ್ಲಿ ವರ್ಷಕ್ಕೆ ಲಕ್ಷಾಂತರ ಟನ್ ದವಸ ಧಾನ್ಯಗಳು ಹಾಳಾಗುತ್ತವೆ, ಒಂದು ಕಾನೂನು ಇದೆ ಇಂತಾ ಗೋದಾಮುಗಳಲ್ಲಿ ಒಂದಷ್ಟು ಟನ್ ದವಸ ಧಾನ್ಯಗಳು ಮೀಸಲಿಡಬೇಕು ಕಾರಣ ಯುದ್ಧ, ನೈಸರ್ಗಿಕ ವಿಕೋಪ, ಸಂಕ್ರಾಮಿಕ ರೋಗ ಇನ್ನಿತರೆ ರಾಷ್ಟ್ರೀಯ ವಿಪತ್ತುಗಳು ಬಂದಾಗ ಅದನ್ನು ಸಮರ್ಥವಾಗಿ ನಿಭಾಯಿಸಲು ದವಸ ಧಾನ್ಯಗಳು ಮೀಸಲಿಡಬೇಕು, ಇಷ್ಟೆಲ್ಲ ಇದ್ದರೂ ಸಹ ಲಕ್ಷಾಂತರ ಟನ್ ಅಕ್ಕಿ ಕೇಂದ್ರ ಸರ್ಕಾರದ ಸ್ವಾಮ್ಯದ ಗೋದಾಮುಗಳಲ್ಲಿ ಇದೆ. ಇನ್ನಾದರೂ ಬಿಜೆಪಿ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!